More

    ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಪೂಜಾ ಮಹೋತ್ಸವ

    ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.

    ಶ್ರೀಸ್ವಾಮಿಯ ಮೂಲ ಮೂರ್ತಿಗೆ ಬ್ರಾಹ್ಮಿ ಮಹೂರ್ತದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಸಹಸ್ರನಾಮಾರ್ಚನೆ ನಂತರ ಮಹಾಮಂಗಳಾರತಿ ಮಾಡಲಾಯಿತು. ಸಂಜೆ 6.30ಕ್ಕೆ ಗೋಧೂಳಿ ಲಗ್ನದಲ್ಲಿ ಸಲ್ಲುವ ಶುಭ ಸಮಯದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಸಂಪ್ರದಾಯದಂತೆ ಕೋಟೆ ರಾಜಬೀದಿಯಲ್ಲಿ ಉತ್ಸವ ನಡೆಸಿ ನಂತರ ದೇವಾಲಯ ಆವರಣದಲ್ಲಿ ಪ್ರಾಖಾರೋತ್ಸವ ನಡೆಸಲಾಯಿತು.

    ದೇವಾಲಯದ ಪ್ರಾಂಗಣದಲ್ಲಿರುವ ಶಮಿವೃಕ್ಷ ಸಮೀಪ ಶ್ರೀ ಸ್ವಾಮಿಯ ಅಡ್ಡೆಯನ್ನು ಇಡಲಾಯಿತು. ಪೂಜಾ ಮಹೋತ್ಸವ ಜರುಗಿದ ನಂತರ ಬನ್ನಿ ವೃಕ್ಷಕ್ಕೆ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪೂಜೆ ಸಲ್ಲಿಸಿ ಕತ್ತಿಯಿಂದ ಬನ್ನಿ ಕಡಿದರು. ನೆರೆದಿದ್ದ ನೂರಾರು ಭಕ್ತರಿಗೆ ಅರ್ಚಕರು ಬನ್ನಿ ಹಾಗೂ ತೀರ್ಥಪ್ರಸಾದ ವಿತರಿಸಿದರು.

    ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅರ್ಚಕರಾದ ನಾರಾಯಣಭಟ್ಟರು, ವೆಂಕಟನರಸಿಂಹನ್, ರಾಮಪ್ರಸಾದ್, ವಲ್ಲಭ ನರಸಿಂಹನ್ ಪೂಜಾ ಕೈಂಕರ್ಯ ನೆರವೇರಿಸಿದರು. ಶಾಸಕ ಎಚ್.ಡಿ.ರೇವಣ್ಣ, ಪೂಜಾ ಮಹೋತ್ಸವದ ಸೇವಾರ್ಥದಾರರಾದ ಕಾಂತರಾಜು ಕುಟುಂಬ, ಪುರಸಭಾ ಸದಸ್ಯ ಕುಮಾರಸ್ವಾಮಿ, ಉದ್ಯಮಿ ದೊಡ್ಡಮಲ್ಲೇಗೌಡ, ವೆಂಕಟೇಶ್, ಶಂಕರನಾರಾಯಣ ಐತಾಳ್, ವಿದ್ಯಾಶಂಕರ. ಎಚ್.ಬಿ.ಸುಬ್ರಮಣ್ಯ, ನಾಗರಾಜು, ಸ್ವರೂಪ್, ರವಿ ಇತರರು ಉಪಸ್ಥಿತರಿದ್ದರು.

    ಪಟ್ಟಣದ ಹೇಮಾವತಿ ನದಿ ತೀರದಲ್ಲಿರುವ ಶ್ರೀ ಲಕ್ಷ್ಮಣೇಶ್ವರ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಎಚ್.ಎಸ್.ಸುಬ್ರಮಣ್ಯ ನೇತೃತ್ವದಲ್ಲಿ ಪ್ರಾಕಾರೋತ್ಸವ ಹಾಗೂ ಶಮಿಪೂಜೆ ನೆರವೇರಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts