More

    ರಾಜಕೀಯ ಲಾಭಕ್ಕಾಗಿ ಪಾಟೀಲ ಹೇಳಿಕೆ ಬಳಕೆ

    ಅಥಣಿ ಗ್ರಾಮೀಣ: ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ಸತ್ಯಕ್ಕೆ ದೂರವಾಗಿದ್ದು, ವಿರೋಧ ಪಕ್ಷದವರು ಪೂರ್ತಿ ವಿಡಿಯೋ ನೋಡದೆ ಅಪಾದನೆ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ವಿನಾ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ರೈತ ಮುಖಂಡ ಸಾಬು ಮಾಳಿ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನೀರಿಕ್ಷಣಾ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.24ರಂದು ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಪಿಕೆಪಿಎಸ್ ಅಮೃತ ಮಹೋತ್ಸವದಲ್ಲಿ ಸಚಿವ ಶಿವಾನಂದ ಪಾಟೀಲ ರೈತರು ಒಂದೇ ಬೆಳೆ ನೆಚ್ಚಿಕೊಂಡು ಕೃಷಿ ಮಾಡದೆ ಬಹುಬೆಲೆ ಆಧಾರಿತ ಸುಧಾರಿತ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.

    ಆಗ ಬರ ಆವರಿಸಿದರೂ ರೈತರಿಗೆ ಯಾವುದೇ ನಷ್ಟವಾಗುವುದಿಲ್ಲ. ಅವರಿಗೆ ಸಾಲ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರೇ ಸರ್ಕಾರಕ್ಕೆ ಸಾಲ ಕೊಡುವಷ್ಟು ಸದೃಢವಾಗಿ ಬೆಳೆಯುತ್ತಾರೆ ಎಂದು ರೈತರ ಪರವಾಗಿ ಮಾತನಾಡಿದ್ದಾರೆ. ಸಚಿವರ ಭಾಷಣ ತಪ್ಪಾಗಿ ಬಿಂಬಿಸಿ ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುಲು ವಿರೋಧ ಪಕ್ಷಗಳು ಯತ್ನಿಸುತ್ತಿರುವುದು ಬೇಸರದ ಸಂಗತಿಯಾಗಿದ್ದು, ವಿರೋಧ ಪಕ್ಷದವರ ಮಾತಿಗೆ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

    ಮುಖಂಡ ಅನಿಲ ಚವ್ಹಾಣ ಮಾತನಾಡಿ, ಸಚಿವ ಶಿವಾನಂದ ಪಾಟೀಲರ ಪೂರ್ತಿ ಭಾಷಣ ಕೇಳಬೇಕು. ಆಗ ಮಾತ್ರ ರೈತಪರ ಕಾಳಜಿ, ಕಳಕಳಿ ಗೊತ್ತಾಗುತ್ತದೆ ಎಂದರು.

    ಪಿಕೆಪಿಎಸ್ ಸಂಘದ ಅಧ್ಯಕ್ಷ ಮಂಜುನಾಥ ಅಂಬಾಜಿ, ಮುಖಂಡರಾದ ಬಸಪ್ಪ ಕೊಳಂಬಿ, ಸತ್ಯಪ್ಪ ಸವದಿ, ಮಹಾದೇವ ಹರಳೆ, ಮಹಾದೇವ ಅವಟಿ, ಪೀರಾಸಾಬ ನದ್ಾ, ಶಂಕರ ಹರಳಿ, ಮಾಯಪ್ಪ ಅಜ್ಜಣಗಿ, ಸಂಭಾಜಿ ಗುರ್ಲಾಪುರ, ಲಕ್ಷ್ಮಣ ಕರ್ಜಗಿ, ಹಣಮಂತ ಅರ್ದಾವೂರ, ಬಸಪ್ಪ ಕಂಕಣವಾಡಿ, ದಾನಪ್ಪ ಮಲಾಬಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts