More

    ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ವರ

    ಚಿಕ್ಕಮಗಳೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ವರವೇ ಹೊರತು ಶಾಪವಲ್ಲ. ಅರಿವಿಲ್ಲದ ಕೆಲವರು ರಾಜಕೀಯ ಪ್ರಚೋದಿತರಾಗಿ ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ತಾಲೂಕಿನ ಶ್ರೀ ಗುರುದತ್ತಾತ್ರೇಯ ಪೀಠದಲ್ಲಿ ಸೋಮವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್​ಗೆ ರೈತರ ಬೆಂಬಲವಿಲ್ಲ. ಶೇ.90 ರೈತರು ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಶೇ.10ರಷ್ಟು ರಾಜಕೀಯ ಪ್ರಚೋದಿತರಾಗಿ ವಿರೋಧಿಸುತ್ತಿದ್ದಾರೆ ಎಂದರು.

    ಕೈಕೋಳ ಆಭರಣವಾಗಲು ಸಾಧ್ಯವಿಲ್ಲ. ಹಾಗಾಗಿ ರೈತನಿಗೆ ನಿಬಂಧನೆಗಳ ಮೂಲಕ ಹಿಂದಿನ ಸರ್ಕಾರಗಳು ಹಾಕಿದ ಕೈಕೋಳವನ್ನು ಕಿತ್ತುಹಾಕಿದ್ದೇವೆ. ಹೊಸ ಮಾರುಕಟ್ಟೆ ಸೃಷ್ಟಿಯಿಂದ ಪೈಪೋಟಿ ಹೆಚ್ಚಾಗಿ ರೈತನಿಗೆ ಆಯ್ಕೆಗಳು ಸಿಗುತ್ತವೆ. ಎಲ್ಲಿ ಹೆಚ್ಚು ಬೆಲೆ ಸಿಗುತ್ತದೋ ಅಲ್ಲಿ ಮಾರಲು ಮುಕ್ತ ಅವಕಾಶವಿದೆ. ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts