More

    ರಾಜಧರ್ಮ ರಾಜನೀತಿ| ರಾಜಕಾರಣ ಮತ್ತು ದಡ್ಡತನದ ಕುರಿತು…

    ರಾಜಧರ್ಮ ರಾಜನೀತಿ| ರಾಜಕಾರಣ ಮತ್ತು ದಡ್ಡತನದ ಕುರಿತು...

    ರಕ್ಷಣಾ ಮಂತ್ರಿಗಳಲ್ಲೇ ವಿಶಿಷ್ಟ ಸ್ಥಾನ ಪಡೆದವರು ಜಾರ್ಜ್ ಫರ್ನಾಂಡಿಸ್! ಆ ಶ್ರೇಣಿಯಲ್ಲಿ ಎಷ್ಟು ಜನರನ್ನು ತೋರಿಸಬಲ್ಲಿರಿ? ಎಲ್ಲಾ, ಮಾತೃಭೂಮಿ ಎಂಬ ಅಭಿಮಾನ, ರಾಷ್ಟ್ರನಿಷ್ಠೆ ಎಂಬುದಕ್ಕೆ ರಾಜಕಾರಣದಲ್ಲಿ ಬೆಲೆಯೇ ಇಲ್ಲವೇ? ಸೋನಿಯಾ ದರ್ಬಾರಿನಲ್ಲಿ ಯಾರೆಲ್ಲ ಏನೆಲ್ಲ ಅಧಿಕಾರ ಪಡೆದರು?

    ಧ್ಯೇಯವಾದ ಬಿಟ್ಟು ಕೇವಲ ವ್ಯಾವಹಾರಿಕವಾಗಿ ನೋಡಿ. ಒಬ್ಬನ ಹಿಂದೆ ಅಷ್ಟು ಅನುಯಾಯಿ, ಒಂದಷ್ಟು ಹಣ, ಅಬ್ಬರ ಪ್ರಚಾರ, ಮೇಲಾಗಿ ಜಾತಿಬಲ, ಕೊಸರಾಟ ಶಕ್ತಿ, ಯಾರನ್ನೂ ಬ್ಲಾಕ್​ವೆುೕಲ್ ಮಾಡುವ ನಿಪುಣತನ, ಸುಳ್ಳು ಹೇಳುವುದರಲ್ಲಿ ಚಾಣಾಕ್ಷತನ, ಅಪಾರ ವಂಚಕಶಕ್ತಿ, ಜತೆಗೆ-ಹಣ ಕೊಟ್ಟೋ, ಭರವಸೆ ಇತ್ತೋ, ಅವರ ಕಡೆಯವರನ್ನು ಅಸೆಂಬ್ಲಿ ಮತ್ತು ಪರಿಷತ್ತುಗಳಲ್ಲಿ ತೂರಿಸಿಯೋ, ಏನೇನೋ ಮಾಡಿ, ಈ ಎಲ್ಲ ಗಿಟ್ಟಿಸಿಕೊಂಡರೆ, ಓದು, ಬರಹ, ಚಿಂತನ, ಯಾವುದೇ ಉದ್ಯೋಗಾರ್ಹತೆ, ನಾಯಕತ್ವ ಗುಣಗಳ ಲೇಶವೂ ಇಲ್ಲದಂತೆ, ದಡ್ಡನೂ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಾಧ್ಯಕ್ಷ, ಏನೇನೂ ಆಗಿ ಬಿಡಬಹುದೆಂಬುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮಲ್ಲೂ ವಿಶ್ವದಾದ್ಯಂತವೂ ಇತಿಹಾಸದಲ್ಲಿ ಕಾಣಬರುತ್ತದೆ. ಇಡೀ ನೆಹ್ರೂ ಮನೆತನದ ಇತಿಹಾಸವೇ ಸಾಕ್ಷಿಯಾಗಿರುವಾಗ ಬರೀ ‘ಪಪು್ಪ’ವನ್ನು ಬೊಟ್ಟು ಮಾಡಿ ತೋರಿಸುವುದು ಬೇಕಾಗಿರುವುದಿಲ್ಲ. ಅಮೆರಿಕದಲ್ಲೂ ಟ್ರಂಪ್ ಸಾಹೇಬನನ್ನು ಒಳಗೊಂಡು ಅನೇಕರು ಇಲ್ಲಿ ಸ್ಮರಣೀಯ.

    ಸ್ಟಾಲಿನ್ ಒಬ್ಬ ಮೋಚಿಯ ಮಗ. ಏನೂ ಓದಿರಲಿಲ್ಲ; ರ್ಚಚಿಲ್​ನನ್ನು ಯಾವ ಕಾಲೇಜೂ, ವಿಶ್ವವಿದ್ಯಾಲಯವೂ ಸೀಟು ಕೊಟ್ಟು ಸೇರಿಸಿಕೊಳ್ಳಲಿಲ್ಲ! ಕೋಪದಿಂದ ಈ ಅಪಮಾನಕ್ಕೆ ಅವನು ಪ್ರತ್ಯುತ್ತರವಾಗಿ ಪ್ರೊಫೆಸರ್​ಗಳನ್ನು Those People ಎಂದು ಆಗಾಗ ಬೈಯ್ಯುತ್ತಿದ್ದ. ಸಿ.ಪಿ.ಸ್ನೋ ಈ ಬಗ್ಗೆ ನುಡಿಚರಿತ್ರೆಗಳನ್ನೇ ಬರೆದಿದ್ದಾನೆ. ನನ್ನ ಮೇಷ್ಟ್ರುಗಳಲ್ಲಿ ಒಬ್ಬರಿಗೆ ಜ್ಞಾನಭಂಡಾರಿಗಳನ್ನು ಕಂಡರೆ ತಿರಸ್ಕಾರ ಇರುತ್ತ, ಸಂಶೋಧನೆ, ವಿದ್ವತ್ತು, ಅಭ್ಯಾಸಪೂರ್ಣ ಬರಹ, ಭಾಷಣಗಳನ್ನು ಸಾರಾಸಗಟಾಗಿ ‘scholarship’ ಎಂದು ನಿಂದಿಸುತ್ತಿದ್ದರು! ವಿಶ್ವವಿದ್ಯಾಲಯಗಳಲ್ಲಿ ದಡ್ಡರು ದರ್ಬಾರು ನಡೆಸಿರುವ ಪ್ರಸಂಗಗಳೆಲ್ಲ ನಿಮ್ಮೆದುರೇ ಇವೆ. ಸೇನೆಯಲ್ಲಿ ಇದು ಸಾಧ್ಯವಿಲ್ಲ! ಅದು ಪುಣ್ಯ. ಮುಲಾಯಂ ಸಿಂಗರು ಆಕಸ್ಮಿಕವಾಗಿ ಒಮ್ಮೆ ರಕ್ಷಣಾ ಮಂತ್ರಿ ಆಗಿದ್ದು ನೆನಪಿದೆಯೇ? ಆಗ ಉದುರಿಸಿದ ಆಣಿಮುತ್ತು-‘ಸೇನೆಯಲ್ಲಿ ಮುಸ್ಲಿಂರಿಗೂ ರಿಸರ್ವೆಷನ್ ಬೇಕು’ ಅಂತ. ಭಾರತ ಭಾಗ್ಯವಿಧಾತ ಅದನ್ನು ತಡೆದ. ಇಲ್ಲವಾದರೆ ಮದಕರಿ ನಾಯಕನ ಚಿತ್ರದುರ್ಗದಂತೆ ಆಗುತ್ತಿತ್ತು. ರಕ್ಷಣಾ ಮಂತ್ರಿಗಳಲ್ಲೇ ವಿಶಿಷ್ಟ ಸ್ಥಾನ ಪಡೆದವರು ಜಾರ್ಜ್ ಫರ್ನಾಂಡಿಸ್! ಆ ಶ್ರೇಣಿಯಲ್ಲಿ ಎಷ್ಟು ಜನರನ್ನು ತೋರಿಸಬಲ್ಲಿರಿ? ಎಲ್ಲಾ, ಮಾತೃಭೂಮಿ ಎಂಬ ಅಭಿಮಾನ, ರಾಷ್ಟ್ರನಿಷ್ಠೆ ಎಂಬುದಕ್ಕೆ ರಾಜಕಾರಣದಲ್ಲಿ ಬೆಲೆಯೇ ಇಲ್ಲವೇ?

    ಸೋನಿಯಾ ದರ್ಬಾರಿನಲ್ಲಿ ಯಾರೆಲ್ಲ ಏನೆಲ್ಲ ಅಧಿಕಾರ ಪಡೆದರು. ದಡ್ಡತನ ಅಲ್ಲಿ ಗಣನೀಯವಾಗಲಿಲ್ಲ-ಕುಟುಂಬನಿಷ್ಠೆ ಎಂಬ ಶಕುನಿತ್ವ, ಕರ್ಣತ್ವ ಬೆಲೆ ಪಡೆದುಕೊಂಡಿತ್ತು. ಎ.ಕೆ.ಆಂಟನಿ, ಶಿವರಾಜ ಪಾಟೀಲ್, ಖುರ್ಷಿದ್ ಆಲಂರ ಮಗ, ಸಲ್ಮಾನ್ ಖುರ್ಷಿದ್ ಹಾಗೂ ಮನಮೋಹನ ಸಿಂಗರಂಥವರು ಅಧಿಕಾರಕ್ಕೆ ಬರುತ್ತಿದ್ದರೆ? ಆಹಾ! ಏನು ಪರಂಪರೆಯಯ್ಯ? 70 ವರ್ಷದ ದಡ್ಡ ಪರಂಪರೆ-ನೆಹ್ರೂ ಅನುಯಾಯಿಗಳ ಪರಂಪರೆ, ದೇಶಾಭ್ಯುದಯಕ್ಕೆ ತಿಲಾಂಜಲಿಯಿತ್ತು, ಆಸ್ತಿ ಮಾಡಿಕೊಂಡದ್ದು! ಇನ್ನೂ ಚರಿತ್ರೆ ತೆರೆದುಕೊಳ್ಳುತ್ತಲೇ ಇದೆ.

    ಈಗ ಕರ್ನಾಟಕದ ಬಗೆಗೆ ನೀವೇ ಕಣ್ಣು ಹಾಯಿಸಿ ನೋಡಿಕೊಳ್ಳಿ. ಒಂದೇ ಒಂದು ಸಮೀಪದ ಉದಾಹರಣೆ ಕೊಡುತ್ತೇನೆ, ತಿಳಿಯುತ್ತದೋ, ಹೇಗೆಂದು ನೋಡಿಕೊಳ್ಳಿ. ಕಮ್ಯುನಲ್ ಶಕ್ತಿಗಳಿಂದಲೇ ಅಧಿಕಾರ ಹಿಡಿದು, ನಿವೃತ್ತರಾಗಿ, ತಿರಸ್ಕೃತರೂ ಆದ ಮಾಜಿಯೊಬ್ಬರು, ಇತ್ತೀಚೆಗೆ ಕೇಳಿದ್ದು-‘ಪದೇಪದೆ ತಬ್ಲಿಘಿಯಿಂದ ಕರೊನಾ ಹರಡಿತು ಎನ್ನುತ್ತಾರಲ್ಲ, ಇಟಲಿ, ಅಮೆರಿಕದಲ್ಲಿ ತಬ್ಲಿಘಿ ಇತ್ತೆ?’ ಅಂತ. ಅವರ ಕಡೆಯವರು ಚಪ್ಪಾಳೆ ಹಾಕಿರಬಹುದು. ಒಂದು ಚಪ್ಪಾಳೆಯ ಬೆಲೆ, ಕೂಲಿ ಎಷ್ಟು ಅಂತ ನಾನು ಲೆಕ್ಕ ಹಾಕುವುದಿಲ್ಲ. ಅದು ಮುಗಿಯದ ಕೆಲಸ. ಅವರಿಗೆ ಕೇಳಬೇಕಾದ ಪ್ರಶ್ನೆ-‘ಅಲ್ಲೆಲ್ಲ- ಇಟಲಿ, ಅಮೆರಿಕಗಳಲ್ಲಿ-ಅಹಿಂದಯ್ಯ ಇದ್ದರೆ? ಅಲ್ಲೆಲ್ಲ ನೆಹ್ರೂ ಪರಂಪರೆ ಇತ್ತೆ? ಶತ್ರು ಪ್ರಶಂಸಕರು, ಪಾರ್ಟಿ, ವಿವೇಕಹೀನ ಜಾತೀಯ ದೊಂಬಿಗಳು, ಇದ್ದವೆ? ಅಂತ’ ಎಲ್ಲಿಗೆಲ್ಲಿಗೆ ಸಂಬಂಧ? ಅಂತ ಕೇಳುವಿರಾದರೆ, ಅದೇ ಪ್ರಶ್ನೆಯನ್ನೇ ಈ ಮಾಜಿಗಳಿಗೂ ಕೇಳಬೇಕಾಗುತ್ತದೆ. ಅವರು ಉತ್ತರಿಸಲಾರರು. Communalism ಎಂಬುದು ಕರೊನಾಕ್ಕಿಂತ ಕ್ರೂರ.

    ಧೃತರಾಷ್ಟ್ರನಿಗೆ ಎಂಥ ಯೋಗ್ಯತೆ ಇತ್ತು? ಶಕುನಿಗೋ? ಕರ್ಣನಿಗೋ? ಅದು ಮಹಾಭಾರತದ ಪಾಠ. ರಾವಣ-ಕುಂಭಕರ್ಣರ ವಿಷಯ ನಾನು ಬರೆಯುವುದಿಲ್ಲ. ಇವರೆಲ್ಲರ ವೈಭವೀಕರಣದ ಕಾವ್ಯಗಳನ್ನು ಓದಿ, ಪಾಠ ಮಾಡಿ, ಜನರಿಗೆ, ‘ವಂಚಿತರು’ ಗುಂಗು ಹಿಡಿಸಿದ್ದಾರೆ. ಈಗ ಮೂಲ ಪ್ರಶ್ನೆಗೆ ಬನ್ನಿ. ಅವರವರ ರಾಷ್ಟ್ರದ ಸಂದಿಗ್ಧ ಪರಿಸ್ಥಿತಿಗಳಿಗೆ ಅಲ್ಲಲ್ಲಿನ ಕಾರಣ ಹುಡುಕುವಾಗ, ಇಟಲಿಯಲ್ಲಿ ತಬ್ಲಿಘಿ ಪ್ರಶ್ನೆ ಏಳಬಾರದು. ಅಲ್ಲಿ ‘ಚೀನೀ’ ಅಂಶವು ಸಲ್ಲುತ್ತದೆ. ನೋಡಬೇಕಾದ್ದೇ ಒಂದು, ನೀವು ನೋಡುತ್ತಿರುವುದೇ ಬೇರೊಂದು. ಆದರೆ ನಿಮ್ಮ ತಲೆ ನಿಮ್ಮ ಹೆಗಲ ಮೇಲೆಯೇ ಇದೆಯೇ? ಎಂದು ಸಂದೇಹಿಸಬೇಕಾಗುತ್ತದೆ. ಯಾರದೋ ತಲೆ, ಬೇರಾರದೋ ದೇಹ ಕೂಡಿ ಮಾರ್ಫ್ ಎಂಬ ಚಿತ್ರ ತೆಗೆಯಲು ಬರುತ್ತದಂತೆ.

    ಇದನ್ನೂ ಓದಿ:  ಕ್ವಾರಂಟೈನ್​ ಕೇಂದ್ರದ ಸುತ್ತ ಹಾವುಗಳಿಗೆ ಲಕ್ಷ್ಮಣ ರೇಖೆ, ಮೂಢನಂಬಿಕೆ ವಿರೋಧಿಗಳ ಆಕ್ಷೇಪ

    ಸಿನಿಮಾ ನಟಿಯರು ಅನೇಕರು ಬೆತ್ತಲಾಗಿ ಕೋರ್ಟು ಹತ್ತಿದ ಪ್ರಸಂಗಗಳು ಇವೆ. ರಾಜಕಾರಣದಲ್ಲಿ ಹೀಗಾಗಬಹುದೆ? ಆಗಿದೆ! ‘ತಬ್ಲಿಘಿ’ ಎಂಬುದು ಭಾರತಕ್ಕೆ ರೋಗ ತಂದು ಹರಡಿದ ವಿಶಿಷ್ಟ ಪ್ರಸಂಗ. ಪತ್ರಿಕೆಗಳು ಬಯಲು ಮಾಡಿವೆ. ಇದು ‘ಇಟಲಿಯಲ್ಲಿತ್ತೆ’ ಎಂಬುವನಿಗೆ ತಲೆ ‘ಇಟಲಿಯಲ್ಲಿತ್ತೆ?’ ಎಂದು ಕೇಳಬೇಕಾಗುತ್ತದೆ. ಭಾರತದಲ್ಲಿ ಸೂರ್ಯೋದಯ, ಆದಾಗ, ಎಲ್ಲಡೆಯೂ ಆಗಬೇಕೆಂದಿಲ್ಲ. ಚಲನಾತ್ಮಕ ಈ ಜಗತ್ತು. ಮಾನ್ಯರೇ! ತಬ್ಲಿಘಿ ಬೆನ್ನಿಗೆ ನಿಂತು, ನಿರಪರಾಧಿತ್ವ ಪ್ರಶಂಸೆ ಮಾಡಬೇಕಾದ ಅವಶ್ಯಕತೆ, ಕರ್ನಾಟಕಕ್ಕೆ ಬೇಡ! ಸುಳ್ಳಿನ ಬೆನ್ನಿಗೆ ನಿಂತು ಅರಚಿದರೆ, ಸತ್ಯ ಆಗುವುದಿಲ್ಲ! ಅಬ್ಬರದ ಮೇಲೆ ನಿಂತ ರಾಜಕಾರಣ, ಗೊಬ್ಬರದ ಮೇಲೂ ನಿಲ್ಲುವುದು ಭ್ರಾಂತಿ, ಅದು ಬರೀ ನಾಯಿಕೊಡೆ. ಇರಲಿ.

    ನಾನು ಪ್ರಾಧ್ಯಾಪಕನಾಗಿದ್ದಾಗ, ನನ್ನ ಶಿಷ್ಯ ಒಬ್ಬ ತನ್ನೂರಿಗೆ ನನ್ನನ್ನು ಪರಿಚಯಿಸಲು, ಒಂದು ಸಂದರ್ಭ ಸೃಷ್ಟಿ ಮಾಡಿಕೊಂಡ. ಒಂದು ಶಾಲೆ. ಅಲ್ಲಿ ಯಾವುದೋ ಉತ್ಸವ. ನನ್ನನ್ನು ಅತಿಥಿಯಾಗಿ ಕರೆದರು. ಆ ಶಿಷ್ಯನ ದೊಡ್ಡಪ್ಪ ಆಗ ತಾನೇ ಎಂಪಿ ಆಗಿ ಆರಿಸಿ ಬಂದಿದ್ದರು. ಇವರ ಪ್ರಚಾರ, ಪ್ರಶಂಸೆಗಾಗಿ, ಉತ್ಸವ, ನಾನು ಬಲಿಪಶು ಎಂಬುದು ಆ ಮೇಲೆ ತಿಳಿಯಿತು. ಈ ದೊಡ್ಡಪ್ಪನ ಮನೆಯಲ್ಲಿ ಎಲ್ಲರಿಗೂ, ಉಪಾಹಾರ ಕೊಡುವಾಗ ತುಂಬ ಬೆಲೆ ಬಾಳುವ, ಮೋಜು ಮೋಜಿನ ಪಿಂಗಾಣಿ ತಟ್ಟೆ, ಕಪು್ಪ, ಬಸಿ, ಇಂಥವು ಇದ್ದವು. ನಾನು ಉಪೇಕ್ಷಿಸಿದೆ. ಆದರೆ ಅವೇ ಪಿಂಗಾಣಿ ವಸ್ತುಗಳನ್ನು, ಆ ಕುಗ್ರಾಮದ ಶಾಲೆಯ ಆತಿಥ್ಯಕ್ಕೂ ಒಯ್ದು, ಎಂಪಿ ಸಾಹೇಬ್ರು ಅಲ್ಲಿ ಭಾಷಣ ಬಿಗಿದರು. ‘ಇಂಥ ಸಣ್ಣ ಹಳ್ಳಿಯಲ್ಲೂ ಇಂಥ ಕುಸುರಿ ವಸ್ತುಗಳು ಕಾಣಿಸಿಕೊಳ್ಳುತ್ತವೆ ಎಂದರೆ ನೆಹ್ರೂ ಆಧಿಪತ್ಯದಲ್ಲಿ ಹಳ್ಳಿಗಳೂ, ಗ್ರಾಮೀಣ ಭಾಗಗಳೂ ಎಂಥ ಪ್ರಗತಿ ಸಾಧಿಸಿವೆ ನೋಡಿ’ ಎನ್ನುತ್ತ ಆ ಪಿಂಗಾಣಿಗಳನ್ನು ಎತ್ತೆತ್ತಿ ಪ್ರದರ್ಶಿಸಿದರು! ಚಪ್ಪಾಳೆ ತಟ್ಟಲು ಜನ ಇದ್ದರೆ ಹೇಳಿದೆಲ್ಲ ಅಮೃತವಾಕ್ಯ ಆಗುತ್ತದೆ.

    ರಾಹುಲರನ್ನು ಪ್ರಧಾನಿ ಮಾಡಲು ಹೊರಟ ಗುಂಪು ಆಗ ಮಾಡಿದ್ದು ಇದನ್ನೇ! ಆದರೆ ಜನತೆ ಕಣ್ಣು ಬಿಟ್ಟಿತಲ್ಲ? ವಿಷಯ ಎಲ್ಲೆಲ್ಲೋ ಹೋಯಿತು ಅಂತ ಗಾಬರಿ ಪಡಬೇಡಿ. ಸಾವರ್ಕರ್ ಸಣ್ಣವರಾಗುವುದೂ, ಗಾಂಧಿ-ನೆಹ್ರೂ ಪರಂಪರೆ ದೊಡ್ಡದಾಗುವುದೂ ಹೀಗೆಯೇ. ಕನ್ನಡಿಗಳಲ್ಲಿ Convex, Concave ಎಂಬ ರೀತಿಗಳಲ್ಲಿ ಯದ್ವಾತದ್ವಾ ಆಗಿ ಕಾಣುವುದು, ರಾಜಕೀಯದಲ್ಲೂ, ಧ್ಯೇಯಾತ್ಮಕ, ಧ್ಯೇಯಶೂನ್ಯ, ಹಣಮುಖ್ಯದ, ಏರುಪೇರುಗಳಿಂದ! ಜಾರ್ಜ್ ಆರ್ವೆಲ್ ಅಂತ ಒಬ್ಬ ಆಂಗ್ಲ ಬರಹಗಾರ, ಕಾದಂಬರಿಕಾರ. ಶೇಕ್ಸ್​ಪಿಯರನ ಜ್ಯೂಲಿಯಸ್ ಸೀಸರ ನಾಟಕದ ಬಗ್ಗೆ ಒಂದು ಮುಖ್ಯ ಆಯಾಮ ಹಿಡಿದು, ದೃಷ್ಟಿ ಹೊರಳಿಸುತ್ತಾನೆ. ‘ಸೀಸರ್’ ಎಂಬುವನು ದುರುಳನೋ, ದುಷ್ಟನೋ, ಮಹತ್ವಾಕಾಂಕ್ಷಿಯೋ, ಎಂಥವನೋ ಇರಲಿ, ಅವನು ನೆಚ್ಚಿದ ಸ್ನೇಹಿತ ಬ್ರೂಟಸ್, ಅವನನ್ನು ಸ್ನೇಹಿತ ಅಂತ ನೋಡಲಿಲ್ಲ! ಕಾಣದ ಧ್ಯೇಯಗಳಿಗಾಗಿ futile Idealismಗಾಗಿ ಅವನನ್ನು ಕೊಂದ! ರೋಮ್ ಉದ್ಧಾರವಾಯಿತೆ? ಹೆಚ್ಚು ಕ್ರೂರಿಯಾದ ಆಂಟೋನಿ, ಆಗಸ್ಟಿಸ್ ಮೊದಲಾದವರು ಬಂದರು. ನೆಪೊಲಿಯನ್ ಬಂದದ್ದೂ ಹೀಗೆ-ಧ್ಯೇಯವಾದ, ವಾಸ್ತವ ಪ್ರಜ್ಞೆಗಳಲ್ಲಿ ಸಾಮರಸ್ಯ ಇಲ್ಲವಾದರೆ ಯಾವ ರಾಷ್ಟ್ರವೂ ಹಾಳಾಗುತ್ತದೆ. ಯಾವ ರಾಜಕಾರಣಿಯೂ ಹಾಳಾಗುತ್ತಾನೆ. ನಮಗೆ ಕರ್ನಾಟಕ ಮುಖ್ಯ. ಹಾಗಂತ ದೆಹಲಿ ಅಥವಾ ಕೇಂದ್ರ ಅಮುಖ್ಯ ಮಾಡಬಾರದು. ಕೇಂದ್ರ ಹಾಳಾದರೆ ನಾವೆಲ್ಲ ಸಾಯುತ್ತೇವೆ. ಅಹಿಂದಯ್ಯನವರೇ? ‘ದೋಣಿಗೆ ಅಂಬಿಗನೇ ಭಾರವಾಗಬಾರದಲ್ಲವೇ?’ ಈ ಮಾತನ್ನು ಶ್ರೀಕೃಷ್ಣನ ಬಾಯಲ್ಲಿ ಕರ್ಣನಿಗೆ ನನ್ನ ‘ಸಮರೋದ್ಯೋಗ’ ಕಾದಂಬರಿಯಲ್ಲಿ ಹೇಳಿಸಿದ್ದೇನೆ. ಅರ್ಥವಾಯಿತೆ? ಬಿಡಿಸಿ ಹೇಳಲೆ? ಅಯ್ಯೋ? ನಿಮ್ಮ ಸೋನಿಯಾ ನಿಷ್ಠೆ, ಆ ಪೂರ್ವದ ಸೋಷಿಯಲಿಸಂ ನಿಷ್ಠೆ, ಇನ್ನೂ ಯಾವು ಯಾವು ಓದಿದೆಯೋ ಅದಲ್ಲಿ ರಾಷ್ಟ್ರಕ್ಕೆ ಭಾರವಾಗಿದೆಯಯ್ಯ? ರಾಷ್ಟ್ರನಾಶಕ ಶಕ್ತಿಗಳಿಗೆ ಒತ್ತಾಸೆ ಕೊಟ್ಟ ಭೀಷ್ಮ-ದ್ರೋಣರ ಗತಿ ಏನಾಯ್ತು? ನಿಷ್ಠೆ ಧರ್ಮಕ್ಕೆ, ಸತ್ಯಕ್ಕೆ, ಅದನ್ನು ವ್ಯಾವಹಾರಿಕವಾಗಿ ಅನ್ವಯಿಸಿದಾಗ, ನೀವು ತಬ್ಲಿಘಿಯನ್ನು ಕಾಣುವ ಕಣ್ಣು ಬೇರೆಯೇ ಆಗುತ್ತದೆ.

    ಕನ್ನಡಕಗಳಲ್ಲಿ ಒಬ್ಬರದು ಇನ್ನೊಬ್ಬರಿಗೆ ಏಕೆ ಆಗುವುದಿಲ್ಲ? ಪವರ್ ಬೇರೆ ಇರುತ್ತದೆ. ಒಬ್ಬರ ಚಪ್ಪಲಿ ಇನ್ನೊಬ್ಬರಿಗೆ ಆಗುವುದಿಲ್ಲ. ಚಡ್ಡಿ, ಬನೀನು, ಟೋಪಿ, ಸಹ ಆಗುವುದಿಲ್ಲ. ಆದರೆ, ಒಬ್ಬರ ಬೀಡಿ, ಸಿಗರೇಟು, ಬಾಟಲಿ ಇನ್ನೊಬ್ಬರಿಗೆ ಆಗುತ್ತದೆ. ಅಯ್ಯಯ್ಯಪ್ಪಾ! ರಾಷ್ಟ್ರಾಭ್ಯುದಯಕ್ಕೆ ಬೇಕಾಗುವ ಕನ್ನಡಕವೇ ಬೇರೆ. ‘ತಬ್ಲಿಘಿ’ ಚೆನ್ನಾಗಿ ಕಾಣುತ್ತದೆ. ಅದು ಬಿಟ್ಟು ಹಗಲೆಲ್ಲ ‘ಮೋದಿ ಮಾಡಿದ್ದು ತಪು್ಪ, ಸೋನಿಯಾ ಹೇಳಿದ್ದೆಲ್ಲ ಸರಿ’ ಅಂತ ಕುಣಿದಾಡಿದರೆ, ನೀವೂ, ಏಸು ಪ್ರತಿಮಾ ರಚನಾಕಾರರೂ, ಇತರರೂ, ಒಬ್ಬರನ್ನೊಬ್ಬರು ತಬ್ಬಿಕೊಂಡು ಮುಳುಗುತ್ತೀರಿ! ಮಾತು ತುಂಬ ಖಾರವಾಗಲು ಕಾರಣ ನನ್ನ ಸಂಕಟ. ನನ್ನದು ‘ರಾಷ್ಟ್ರೀಯತಾ’ ಕನ್ನಡಕ. ಈ ‘ಕನ್ನಡಕ’ದಲ್ಲಿ ‘ಕನ್ನಡ’ವೂ ಇದೆಯಯ್ಯ! ನಾನು ಯಾವ ಪಾರ್ಟಿಯೂ ಅಲ್ಲ. ಹಾಗೆ ಸೇರಿದ್ದರೆ ನನ್ನ ದೃಷ್ಟಿ ಒಂದು ಕಡೆ ಮಾತ್ರ ಇರುತ್ತಿತ್ತು. ಗರುಡ ದೃಷ್ಟಿ ಆಗಸದ ಕಡೆ ಇರುತ್ತದೆ. ಹಾವಿಗೆ ದೃಷ್ಟಿ ಬಿಲದ ಕಡೆಗೇ ಇರುತ್ತದೆ. ಕಾಂಗ್ರೆಸ್ಸಿಗೆ ಗರುಡ ದೃಷ್ಟಿ ಈಗ ಸಾಧ್ಯವಿಲ್ಲ. ‘ಟೂ ಲೇಟ್’. ಹಾಗಾಗಿಯೇ, ಗಾಂಧಿವಾದಿಗಳೂ, ಸ್ವಾತಂತ್ರ್ಯ ಹೋರಾಟಗಾರರೂ ಕಣ್ಣು ಕಳೆದುಕೊಂಡಿದ್ದಾರೆ.

    ಮತ್ತೂ ಹೇಳಲೇ? ಮಹಾಭಾರತದಲ್ಲಿ ಸಂಜಯನಿಗೆ ಕಂಡದ್ದು ಧೃತರಾಷ್ಟ್ರನಿಗೆ ಕಾಣಲಿಲ್ಲ. ಹೇಳಿಯೂ, ಕೇಳಿಯೂ ತಿಳಿಯಲಿಲ್ಲ. ಕಿವಿ ಇಲ್ಲದವನಿಗೆ ರನ್ನಿಂಗ್ ಕಾಮೆಂಟರಿ ಏನು ಪ್ರಯೋಜನ? ಗಾಣಕ್ಕೆ ಕಟ್ಟಿದ ಎತ್ತಿಗೆ ಬಿಡುಗಡೆ ಹೇಗೆ? ಯಾವಾಗ? ರಾಯರೇ! ಇನ್ನು ಮೇಲೆ ಈ ದೇಶದಲ್ಲಿ Communal vote, block vote ಆಟ ನಡೆಯುವುದಿಲ್ಲ. ಹೊಸ ಪೀಳಿಗೆ ತಲೆ ಎತ್ತಿದೆ. ತರಲೆಗಳೆಲ್ಲ ಅವರಿಗೆ ತಿಳಿದಿದೆ. ಅವರ ನಾಡೀ ನೋಡದೆ ಏನಾದ್ರೂ ಹೇಳಿದರೆ, ಉಪೇಕ್ಷಿತರಾಗುತ್ತೀರಿ? ಜನ ಅಧಿಕಾರದಿಂದ ಇಳಿಸಿದರೂ ಹಳೆಯ ಚಾಳಿ ಬಿಡಲಿಲ್ಲವಾದರೆ? ದೇವರಾಜ ಅರಸರ ಕೊನೆಯ ಜೀವಿತಕಾಲ ಹೇಗಿತ್ತು? ನೆನೆಯಿರಿ! ತುರ್ತು ಪರಿಸ್ಥಿತಿ ಹೇರಿದ ನಂತರ ಇಂದಿರಾ ಗತಿ ಏನಾಯ್ತು? ಕೊನೆಗೂ ಏನಾಯ್ತು? ಚರಿತ್ರೆಯ ಪುಟಗಳನ್ನು ಗಂಭೀರವಾಗಿ, ಗೌರವಾನ್ವಿತವಾಗಿ ಸೇರಲೂ ಭಾಗ್ಯ ಬೇಕು! ಮಂಥರೆ, ಶಕುನಿ, ಕರ್ಣ, ಮೀರ್ ಜಾಫರ್, ಮಿರ್ ಸಾದಿಕ್, ಇಂಥವರೂ ಇತಿಹಾಸದಲ್ಲಿದ್ದಾರೆ. ‘ತಬ್ಲಿಘಿ’ ಇತಿಹಾಸವಾಗುತ್ತೆ. ಆಗುವುದಿಲ್ಲ ಎನ್ನಬೇಡಿ- ಆ ಗುಂಪಿನ ಹೆಗಲಿಗೆ ನಿಂತು ನೀವು ಸಾಧಿಸುವುದೇನು? ಅಪಖ್ಯಾತಿ, ಕುಖ್ಯಾತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts