More

    ಕಾಂಗ್ರೆಸ್ಸಿಗರಿಂದ ಒಡೆದಾಳುವ ನೀತಿ – ಪ್ರಭಾವತಿ ಪಾಟೀಲ

    ಮುದ್ದೇಬಿಹಾಳ: ಎ.ಎಸ್. ಪಾಟೀಲ ನಡಹಳ್ಳಿ ಅವರು ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಸಮಾಜ ಸೇವೆ, ಜನರೊಂದಿಗೆ ಬೆರೆಯುವ ಮನೋಭಾವ, ಕಷ್ಟದಲ್ಲಿರುವವರಿಗೆ ನೆರವಾಗುವ ಹೃದಯವಂತಿಕೆ, ಹುಟ್ಟಿ ಬೆಳೆದ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ ಅವರನ್ನು ಅಭಿವೃದ್ಧಿ ಹರಿಕಾರರನ್ನಾಗಿಸಿದೆ ಆದರೆ ಕಾಂಗ್ರೆಸ್ಸಿಗರಿಂದ ಒಡೆದಾಳುವ ನೀತಿ ಅನುಸರಿಸುತ್ತಿ ಎಂದು ಶಾಸಕ ನಡಹಳ್ಳಿಯವರ ಕಿರಿಯ ಸೊಸೆ ಪ್ರಭಾವತಿ ಪಾಟೀಲ ಹೇಳಿದರು.

    ತಾಲೂಕಿನ ಕುಂಟೋಜಿ, ಅಬ್ಬಿಹಾಳ, ಹೊಕ್ರಾಣಿ, ಇಣಚಗಲ್, ಜಕ್ಕೇರಾಳ, ಜಮ್ಮಲದಿನ್ನಿ ಗ್ರಾಮಗಳಲ್ಲಿ ಸೋಮವಾರ ನಡಹಳ್ಳಿಯವರ ಪರ ಮನೆಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ವಿರೋಧಿಗಳು ನಡಹಳ್ಳಿಯಂತಹವರನ್ನು ಕಟು ಮಾತುಗಳಿಂದ ನಿಂದಿಸಿ, ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳುವ ಕೆಲಸ ಮಾಡುತ್ತಿದ್ದು, ಅದರ ಫಲವನ್ನು ಚುನಾವಣೆಯಲ್ಲಿ ಅನುಭವಿಸುತ್ತಾರೆ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಒಡೆದಾಳುವ ನೀತಿ ಅನುಸರಿಸುತ್ತದೆ ಎನ್ನುವ ಮಾತನ್ನು ಬಾಲ್ಯದಲ್ಲಿ ಕೇಳುತ್ತಿದ್ದೆವು. ಇಂದು ಅದೇ ಪಕ್ಷದವರು ನಮ್ಮ ಮನೆಯ ಕಿರಿಯ ಮಗನನ್ನು ಪಕ್ಕದಲ್ಲಿ ಕೂಡಿಸಿಕೊಂಡು, ಕೈಯಲ್ಲಿ ಮೈಕ್ ಕೊಟ್ಟು, ಅವನ ಬಾಯಿಯಿಂದ ನಮ್ಮ ಮನೆಯ ಹಿರಿಮಗನನ್ನು ಬಾಯಿಗೆ ಬಂದಂತೆ ಬೈಯಿಸುತ್ತಿದ್ದೀರಿ. ಇದನ್ನು ಕೇಳಿದ ನಮಗೆ ಕಾಂಗ್ರೆಸ್‌ನ ಒಡೆದಾಳುವ ನೀತಿ ನಿಜ ಎನ್ನಿಸಿದೆ ಎಂದರು.

    ಸಂಸ್ಕಾರದ ಬಗ್ಗೆ ಮಾತನಾಡುವ ಸಂಸ್ಕಾರವಂತರೆಂದು ಹೇಳಿಕೊಳ್ಳುವ ನೀವು ಇನ್ನೊಂದು ಕುಟುಂಬ ಒಡೆದು ರಾಜಕಾರಣ ಮಾಡ್ತೀರಲ್ಲ. ನಿಮಗೆಲ್ಲಿದೆ ಸಂಸ್ಕಾರ ? ಲಂಡನ್‌ನಲ್ಲಿ ಓದಿ ಬಂದು ತಂದೆಯ ಪರ ಪ್ರಚಾರ ಮಾಡುತ್ತಿರುವ ಮಗನ ಬಗ್ಗೆಯೂ ಟೀಕಿಸುತ್ತೀರಲ್ಲ. ನಿಮ್ಮ ಮಕ್ಕಳನ್ನೂ ಹೀಗೆ ಟೀಕಿಸಿದರೆ ಸುಮ್ಮನಿರುತ್ತೀರಾ? ಎಂದರು.

    ನಡಹಳ್ಳಿಯವರ ಪತ್ನಿ ಮಹಾದೇವಿ ಪಾಟೀಲ, ಪುತ್ರಿ ಸುಷ್ಮಿತಾ ಪಾಟೀಲ, ಆಯಾ ಗ್ರಾಮಗಳ ಯುವ ಧುರೀಣರಾದ ಪ್ರವೀಣ ಹೊಕ್ರಾಣಿ, ಬಸವರಾಜ ಅಬ್ಬಿಹಾಳ ಅವರು ನಡಹಳ್ಳಿಯವರು ಮಾಡಿರುವ ಸಮಾಜಸೇವೆ, ಕೆರೆ ತುಂಬಿಸುವಿಕೆ ಮತ್ತು ಅಭಿವೃದ್ದಿ ಕೆಲಸಗಳ ಕುರಿತು ಮಾತನಾಡಿದರು.

    ನಡಹಳ್ಳಿಯವರ ಸಹೋದರಿಯರಾದ ಮಲಕಮ್ಮ ಬಿರಾದಾರ, ಕಸ್ತೂರಿ ಸಾಸನೂರ, ನಡಹಳ್ಳಿಯವರ ಸೊಸೆ ರಾಜೇಶ್ವರಿ ಸಾಸನೂರ, ಮಹಾದೇವಿ ಅವರ ಸಹೋದರಿ ಶಾರದಾ, ಬಿಜೆಪಿ ಧುರೀಣೆಯರಾದ ಶಾಂತಾ ಹಾವರಗಿ, ರೇಣುಕಾ ಹಳ್ಳೂರ, ನರಸಮ್ಮ ಗುಬಚಿ, ಗ್ರಾಪಂ ಸದಸ್ಯ ಶಾಂತಪ್ಪ ಕಂಬಳಿ, ಮಂಜುನಾಥ ಅಬ್ಯಾಳಮಠ, ಸ್ಥಳೀಯ ಧುರೀಣರು ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts