More

    ಪಾಲಿಕೆ ಕ್ರಿಯಾ ಯೋಜನೆಗೆ ಒಪ್ಪಿಗೆ

    ಬೆಳಗಾವಿ: ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯ 22 ಕೋಟಿ ರೂ. ಕ್ರಿಯಾಯೋಜನೆಗೆ ಆಡಳಿತಾಧಿಕಾರಿಯಿಂದ ಒಪ್ಪಿಗೆ ದೊರೆತಿದೆ. ಕೋವಿಡ್-19, ಅತಿವೃಷ್ಟಿಯಿಂದ ತೆರಿಗೆ ವಸೂಲಿ ಆಗದಿರುವುದು, 2020-21ನೇ ಸಾಲಿನ ವಾರ್ಷಿಕ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡದಿರುವುದರಿಂದ ಹೊಸದಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದೆ ಸಮಸ್ಯೆ ಎದುರಿಸುವಂತಾಗಿತ್ತು. ಕ್ರಿಯಾ ಯೋಜನೆಯಡಿ ಒಳಚರಂಡಿ ನಿರ್ಮಾಣ, ಕುಡಿಯುವ ನೀರು ಸೌಲಭ್ಯ, ವಿದ್ಯುತ್ ಸಂಪರ್ಕ ಹಾಗೂ ಮೂಲ ಸೌಕರ್ಯ ನಿರ್ವಹಣೆ ಹಾಗೂ ಹೊಸದಾಗಿ ಚರಂಡಿ, ರಸ್ತೆ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಈಗಾಗಲೇ ನಗರದಲ್ಲಿ 166 ಕಿ.ಮೀ. ರಸ್ತೆ, ನಾಲಾ 40.49 ಕಿ.ಮೀ., ಚರಂಡಿ 122 ಕಿ.ಮೀ., ಒಳಚರಂಡಿ 2.5 ಕಿ.ಮೀ. ಸೇರಿದಂತೆ ಮೂಲ ಸೌಕರ್ಯ ಹಾಳಾಗಿದ್ದವು. ಇದರಿಂದ 399.18 ಕೋಟಿ ರೂ. ನಷ್ಟ ಉಂಟಾಗಿತ್ತು. ಆದರೆ, ಸರ್ಕಾರ 125 ಕೋಟಿ ರೂ. ಬಿಡುಗಡೆ ಮಾಡಿತ್ತು. ರಸ್ತೆ, ಚರಂಡಿ, ನಾಲಾ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಅಂತಿಮ ಹಂತದಲ್ಲಿದ್ದರೂ ಸರ್ಕಾರ ಅನುಮೋದನೆ ನೀಡಿರಲಿಲ್ಲ. ಇದೀಗ ಮತ್ತೆ ನಗರದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗದೆ ಪಾಲಿಕೆ ಸಮಸ್ಯೆ ಎದುರಿಸುತ್ತಿದೆ.

    ಸರ್ಕಾರದಿಂದ 2020-21ನೇ ಸಾಲಿನ ವಾರ್ಷಿಕ ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ. ಪ್ರಗತಿ ಹಂತದ ಕಾಮಗಾರಿಗಳು ಮುಂದುವರಿದಿವೆ. ಪಾಲಿಕೆ ಆಡಳಿತಾಧಿಕಾರಿಗಳು 15ನೇ ಹಣಕಾಸು ಅನುದಾನದಡಿ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಿದ್ದು, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ
    ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. 15ನೇ ಹಣಕಾಸು ಯೋಜನೆಯಡಿ ಯೋಜನೆಗೆ ಅನುಮತಿ ನೀಡಲಾಗಿದೆ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts