More

    ಮತದಾರರ ಮೇಲೆ ಪ್ರಭಾವ ಬೀರದಂತೆ ರೌಡಿಗಳಿಗೆ ಖಡಕ್​ ಸೂಚನೆ ನೀಡಿದ ಖಾಕಿ

    ಬೆಂಗಳೂರು: ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆಸುವ ಸಲುವಾಗಿ ಬೆಂಗಳೂರು ನಗರ ಪೊಲೀಸರ ರೌಡಿಗಳ ಮನೆ, ಅಡ್ಡೆಗಳ ಮೇಲೆ ದಾಳಿ ಮುಂದುವರಿದಿದೆ.

    ಪೂರ್ವ ವಿಭಾಗ ಪೊಲೀಸರು ಸೋಮವಾರ ಬೆಳಗ್ಗೆ 5 ಗಂಟೆಯಿಂದ 10 ಗಂಟೆ ವರೆಗೆ ಕೆ.ಜಿ.ಹಳ್ಳಿ ಉಪವಿಭಾಗದ ದೇವರಜೀವನಹಳ್ಳಿ, ಕೆ.ಜಿ.ಹಳ್ಳಿ, ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಎಸಿಪಿ ನೇತೃತ್ವದಲ್ಲಿ 160 ರೌಡಿಗಳ ಮನೆ ಮತ್ತು ಅಡ್ಡೆಗಳನ್ನು ಶೋಧ ನಡೆಸಿದ್ದಾರೆ.

    ಗಾಂಜಾ ವಶಕ್ಕೆ

    ಪ್ರಮುಖ ರೌಡಿಗಳಾದ ಜೊಲ್ಲು ಇಮ್ರಾನ್, ಅನೀಸ್, ಜಹೀರ್ ಅಬ್ಬಾಸ್, ಹುಸೇನ್ ಷರೀಫ್, ಗ್ರಾನೈಟ್ ಸಾಧಿಕ್, ಸಕೀರ್, ಭಿಂಡಿ ಇರ್ಫಾನ್, ಯೂಸುಫ್, ತೌಫಿಕ್, ನೆಲ್ಸನ್, ಆಸಿಫ್ ಮತ್ತಿತರ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

    Seized

    ಇದನ್ನೂ ಓದಿ: ಬೀದಿ ರಂಪಾಟ; ಗಾಡಿ ಅಡ್ಡ ನಿಲ್ಲಿಸಿದ್ದಕ್ಕೆ ಪ್ರಾಣ ತೆಗೆದರು

    ಡಿಜೆ.ಹಳ್ಳಿ ಠಾಣೆ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಇರುವ ರೌಡಿ ಆಸಿಫ್​ ಪಾಷಾ ಮನೆ ಮೇಲೆ ದಾಳಿ ನಡೆಸಿದಾಗ ಮಂಚದ ಕೆಳಗೆ ಮೂಟೆಕಟ್ಟಿ ಬಚ್ಚಿಟ್ಟಿದ್ದ 105 ಕೆಜಿ ಗಾಂಜಾ ಮತ್ತು 8 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈತನ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕಠಿಣ ಕ್ರಮದ ಎಚ್ಚರಿಕೆ

    ಉಳಿದಂತೆ ಇತರ ರೌಡಿ ಮತ್ತು ಅಪರಾಧ ಹಿನ್ನೆಲೆಯುಳ್ಳವರ ಖಾಯಂ ವಾಸದ ಸ್ಥಳದ, ನೌಕರಿ, ಕೆಲಸದ ಸ್ಥಳದ ವಿವರ, ಮೊಬೈಲ್ ನಂಬರ್ ಮತ್ತು ಕುಟುಂಬ ಸದಸ್ಯರ ಮಾಹಿತಿ ಪಡೆಯಲಾಗಿದೆ.

    ಚುನಾವಣೆ ಸಮಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದು, ತಮಗೆ ಬೇಕಾದವರಿಗೆ ಮತ ಚಲಾಯಿಸುವಂತೆ ಬೆದರಿಕೆ, ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಕಂಡು ಬಂದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಒಡ್ಡುವುದು ಮಾಡದಂತೆ ಎಚ್ಚರಿಕೆ ಕೊಡಲಾಗಿದೆ. ಜತೆಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts