More

    ಪೊಲೀಸ್ ಠಾಣೆಯಲ್ಲಿ ಕರೊನಾ ತಪಾಸಣಾ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಚಾಲನೆ

    ಮಾನ್ವಿ: ಕರೊನಾ ವೈರಸ್ ತಡೆಗಟ್ಟಲು ಪೊಲೀಸ್ ಠಾಣೆಗೆ ಬರುವ ಜನರಿಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಕರೊನಾ ತಪಾಸಣಾ ಕೇಂದ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಚಾಲನೆ ನೀಡಿದರು.

    ಠಾಣೆಗೆ ಬರುವ ಸಾರ್ವಜನಿಕರು, ಅಧಿಕಾರಿಗಳು ಮಾಸ್ಕ್ಕ್ ಮತ್ತು ಸಾನಿಟೈಸರ್ ಬಳಸುವಂತೆ ಅರಿವು ಮೂಡಿಸಲು ಪೊಲೀಸ್ ಠಾಣೆಯ 100 ಮೀಟರ್ ದೂರದಲ್ಲಿ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ತಪಾಸಣಾ ಕೇಂದ್ರದಲ್ಲಿ ಮಾಸ್ಕ್ ಮತ್ತು ಸಾನಿಟೈಸರ್ ಉಪಯೋಗಿಸಿ ಅಹವಾಲುಗಳನ್ನು ವಿಚಾರಿಸಿದ ನಂತರ ಠಾಣೆಯ ಒಳಗೆ ಹೋಗುವ ಅವಶ್ಯಕತೆ ಇದ್ದರೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಳುಹಿಸಲಾಗುವುದು ಎಂದು ಎಸ್ಪಿ ವೇದಮೂರ್ತಿ ಹೇಳಿದರು.

    ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ಇದರಿಂದ ಕರೊನಾ ತಡೆಗಟ್ಟುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ. ಜನ ಕೂಡ ಕರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದರು. ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‌ಐ ಸಿದ್ರಾಮಪ್ಪ ಬಿದರಾಣಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts