More

    ತಬ್ಲಿಘಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲು ಪೊಲೀಸರ ಸಿದ್ಧತೆ

    ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ಪಸರಿಸಿದ ಆರೋಪಕ್ಕೆ ಗುರಿಯಾಗಿರುವ ಮತ್ತು ವೀಸಾ ನಿಯಮ ಉಲ್ಲಂಘನೆಯ ಪ್ರಕರಣ ಎದುರಿಸುತ್ತಿರುವ ತಬ್ಲಿಘಿ ಜಮಾತ್‌ನ 916 ವಿದೇಶಿ ಸದಸ್ಯರ ವಿರುದ್ಧ ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    67 ದೇಶಗಳ ಸುಮಾರು ಒಂದು ಸಾವಿರ ವಿದೇಶಿಯರು ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದರು. ಆದರೆ 916 ಮಂದಿ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಹೀಗಾಗಿ ಅವರ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಯನ್ನು ಪೊಲೀಸರು ಮುಗಿಸಿದ್ದು, ಇವರಲ್ಲಿ ಅನೇಕರು ಧಾರ್ಮಿಕ ಸಮ್ಮೇಳನ ಮುಗಿದ ಮೇಲೂ ಮೌಲಾನಾ ಸಾದ್‌ರ ಸೂಚನೆಯಂತೆ ಹಜರತ್ ನಿಜಾಮುದ್ದೀನ ಬಳಿಯ ಮಾರ್ಕಜ್‌ನಲ್ಲಿ ಉಳಿದುಕೊಂಡಿದ್ದರು.

    ಇದನ್ನೂ ಓದಿ  ಕರೊನಾ ಹರಡಲು ಕರೆ ನೀಡಿದ್ದ ಟೆಕ್ಕಿಗೆ ಸಿಗಲಿಲ್ಲ ಜಾಮೀನು

    ಇದಲ್ಲದೆ, ತಬ್ಲಿಘಿ ಜಮಾತ್‌ನ ಮುಖ್ಯಸ್ಥ ಮೌಲಾನಾ ಸಾದ್‌ರ ಐವರು ಆಪ್ತರ ಪಾಸ್‌ಪೋರ್ಟ್‌ನ್ನು ವಶಪಡಿಸಿಕೊಳ್ಳಲಾಗಿದೆ. ಸಾದ್‌ರ ಆಪ್ತರಾದ ಮುಫ್ತಿ ಶಾಹಜಾದ್, ಜಿಶಾನ್, ಮುರ್ಸಾಲಿನ್ ಸೈಫಿ, ಮೊಹಮ್ಮದ್ ಸಲ್ಮಾನ್ ಮತ್ತು ಯೂನಿಸ್ ದೇಶಬಿಟ್ಟು ಹೋಗದಂತೆ ತಡೆಯಲು ಅವರ ಪಾಸ್‌ಪೋರ್ಟ್‌ಗಳನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.

    ಹಿಟ್ಲರ್​​ಗೆ​ ಸೇರಿದ್ದೆನ್ನಲಾದ ಮೊಸಳೆ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts