More

    ಈಶಾನ್ಯ ದೆಹಲಿಯ ಚರಂಡಿಯಲ್ಲಿ ಮತ್ತೆರೆಡು ಶವ ಪತ್ತೆ: ಇನ್ನೂ ಹೆಚ್ಚು ಶವಗಳಿರುವ ಶಂಕೆ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಪರ ಮತ್ತು ವಿರೋಧ ಹೋರಾಟದಿಂದಾಗಿ ಸಾವಿಗೀಡಾದವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು ಬೆಳಗ್ಗೆ ಚರಂಡಿಯಿಂದ ಎರಡು ಶವವನ್ನು ಹೊರತೆಗೆಯಲಾಗಿದೆ.

    ಗಂಗವಿಹಾರ್​ ಜೊಹ್ರಿಪುರದ ವಿಸ್ತರಣೆ ಪ್ರದೇಶದಲ್ಲಿರುವ ಚರಂಡಿಯಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಅವುಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚರಂಡಿಯೊಳಗೆ ಇನ್ನೂ ಶವಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕನೊಬ್ಬನನ್ನು ಹಿಂಸಾಚಾರದಲ್ಲಿ ಕೊಲ್ಲಲಾಗಿದ್ದು ಆತನ ಶವವು ಬುಧವಾರದಂದು ಚರಂಡಿಯಲ್ಲಿ ಪತ್ತೆಯಾಗಿತ್ತು. ಆತನನ್ನು ಮನೆಯಿಂದ ಎಳೆದು ತಂದು ಕೊಲೆ ಮಾಡಿದ್ದಾಗಿ ಹೇಳಲಾಗಿತ್ತು.

    ದೆಹಲಿಯ ಹಿಂಸಾಚಾರದಿಂದಾಗಿ ಸತ್ತವರ ಸಂಖ್ಯೆ 35ಕ್ಕೆ ತಲುಪಿದೆ. ಇನ್ನೂ ಹೆಚ್ಚೆಚ್ಚು ಶವಗಳು ಪತ್ತೆಯಾಗುತ್ತಿರುವುದು ವರದಿಯಾಗಿದೆ. (ಏಜೆನ್ಸೀಸ್​)

    ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ; ಇಂದು ಮೋರಿಯಲ್ಲಿ ಸಿಕ್ತು ಅವರ ಮೃತದೇಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts