More

    ಪೊಲೀಸರಿಗೆ ಜನರ ಸಹಕಾರ ಅತ್ಯಗತ್ಯ: ನಿವೃತ್ತ ಆರಕ್ಷಕ ನಿರೀಕ್ಷಕ ಚಿದಾನಂದರಾವ್

    ಕೊಪ್ಪಳ: ಹಗಲಿರುಳು ಕೆಲಸ ಮಾಡುವ ಪೊಲೀಸರ ಜತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ನಿವೃತ್ತ ಆರಕ್ಷಕ ನಿರೀಕ್ಷಕ ಎಂ.ಚಿದಾನಂದರಾವ್ ಹೇಳಿದರು.
    ನಗರದ ಪೊಲೀಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ವೃತ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಜನರ ಆಸ್ತಿ, ಪ್ರಾಣ ಹಾನಿ ರಕ್ಷಣೆ ಮಾಡುವುದು ಪೊಲೀಸರ ಕರ್ತವ್ಯವಾಗಿದೆ. ಅದನ್ನು ಎಲ್ಲ ಪೊಲೀಸರು ಕಾಪಾಡಿಕೊಂಡು ಬಂದಿದ್ದಾರೆ. ನಿವೃತ್ತಿ ನಂತರ ಸನ್ಮಾನಿಸುವುದು ಸೇವೆಗೆ ಗೌರವ ನೀಡಿದಂತೆ ಎಂದರು.


    ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಪೊಲೀಸರು ಸಲ್ಲಿಸಿದ ಸೇವೆಯ ಸ್ಮರಣಾರ್ಥ ಈ ದಿನವನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಸಹಕಾರಿ ಕ್ಯಾಂಟಿನ್ ಸ್ಮಾರ್ಟ್ ಕಾರ್ಡ್ ಒದಗಿಸಲಾಗಿದೆ. ಜತೆಗೆ ಆರೋಗ್ಯ ಭಾಗ್ಯ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ನಿವೃತ್ತ ನೌಕರರು ಮರಣ ಹೊಂದಿದಲ್ಲಿ ಅಂತ್ಯಸಂಸ್ಕಾರಕ್ಕಾಗಿ 10,000 ರೂ. ನೆರವು ನೀಡಲಾಗುವುದು. ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಧ್ವಜ ಮಾರಾಟದಿಂದ ಬಂದ ಹಣದಲ್ಲಿ ಶೇ.50 ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಗೆ, ಶೇ.25 ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ, ಶೇ.25 ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ನೀಡಲಾಗುತ್ತದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪೊಲೀಸ್ ಸಿಬ್ಬಂದಿಯಿಂದ ಗೌರವ ನಮನ ಸಲ್ಲಿಸಲಾಯಿತು. ಡಿವೈಎಸ್ಪಿಗಳಾದ ಶರಣಬಸಪ್ಪ ಸುಬೇದಾರ್, ಶೇಖರಪ್ಪ ಹಾಗೂ ಸಿಪಿಐ, ಪಿಐ, ಪಿಎಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts