More

    ಪೊಲೀಸ್ ಇಲಾಖೆಗೆ ಗೌರವ ತರುವಂತೆ ಸೇವೆ ಸಲ್ಲಿಸಿ


            -ನಿವೃತ್ತ ಆರಕ್ಷಕ ಉಪನಿರೀಕ್ಷಕ ಶ್ರೀ ದತ್ತಾತ್ರೇಯ / ಯಾದಗಿರಿ ಪೊಲೀಸ್ ಧ್ವಜ ದಿನಾಚರಣೆ

    ಯಾದಗಿರಿ : ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗುವಂತಹ ಸಿಬ್ಬಂದಿ ತಮ್ಮ ಕಾರ್ಯಗಳನ್ನು ಜವಬ್ದಾರಿಯಿಂದ ನಿಭಾಯಿಸುವ ಜೊತೆಗೆ ಪೊಲೀಸ್ ಇಲಾಖೆಗೆ ಗೌರವ ತರುವ ನಿಟ್ಟಿನಲ್ಲಿ ಕರ್ತವ್ಯವನ್ನು ಮಾಡುವಂತೆ ಭೀಮರಾಯನ ಗುಡಿ ಪೊಲೀಸ್ ಠಾಣೆಯ ನಿವೃತ್ತ ಆರಕ್ಷಕ ಉಪನಿರೀಕ್ಷಕರಾದ ದತ್ತಾತ್ರೇಯ ಸಲಹೆ ನೀಡಿದ್ದಾರೆ.

         ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಮಂಗಳವಾರ ನಗರದ ಪೊಲೀಸ್ ಕವಾಯತ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ, ನಿವೃತ್ತರ ಸುಸ್ಮರಣೆ ಹಾಗೂ ಗೌರವ ಸಮರ್ಪಣಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪೊಲೀಸ್ ಧ್ವಜಗಳ ಬಿಡುಗಡೆ, ಹಂಚಿಕೆ ಮಾಡಿ ಅವರು ಮಾತನಾಡಿದರು.

         ನ್ಯಾಯಕೋರಿ ಪೊಲೀಸ್ ಠಾಣೆಗೆ ಬರುವಂತಹ ಸಾರ್ವಜನಿಕರಿಗೆ ಸಕಾಲಕ್ಕೆ ಸ್ಪಂದಿಸುವುದು, ಪೊಲೀಸ್ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿದ್ದು, ತಮ್ಮ ಕುಟುಂಬ ಹಾಗೂ ಉತ್ತಮ ಜೀವನ ನಿರ್ವಹಣೆಗೆ ನೆರವಾಗಿರುವ ಪೊಲೀಸ್ ಇಲಾಖೆಗೆ ಸದಾ ಋಣಿಯಾಗುವ ಜೊತೆಗೆ ಇಲಾಖೆಗೆ ಧಕ್ಕೆಯಾಗದಂತೆ ಗೌರವ ಎತ್ತಿಹಿಡಿಯುವ ಕಾರ್ಯವನ್ನು ಮಾಡಬೇಕು. ಅದರಂತೆ ಹೊಸದಾಗಿ ಸೇರುವ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ಗೌರವ ನೀಡುವ ಜೊತೆಗೆ ಶಿಸ್ತನ್ನು ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

         ಅದರಂತೆ ಪೊಲೀಸ್ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಿಂದುಳಿದ ಜಿಲ್ಲೆಯಾಗಿರುವ ಯಾದಗಿರಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳ ಸ್ಥಾಪನೆಯ ಅವಶ್ಯಕತೆ ಇದೆ ಎಂದು ಹೇಳಿದರು.

         ಕಾರ್ಯಕ್ರಮದಲ್ಲಿ ಧ್ವಜ ದಿನಾಚರಣೆ ಮಹತ್ವ ಮತ್ತು ರಾಜ್ಯ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವರದಿ ವಾಚನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಪ್ರತಿ ವರ್ಷದಂತೆ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಏಪ್ರಿಲ್ 02 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನ ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೆನಪಿಸಿ, ಅವರ ಸೇವೆಯನ್ನು ಸ್ಮರಿಸಿ, ಗೌರವಿಸಿ, ಸನ್ಮಾನಿಸಲಾಯಿತು.

         ಅದರಂತೆ ನಮ್ಮ ಯಾದಗಿರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ಕಳೆದ ಒಂದು ವರ್ಷ ಅವಧಿಯಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. 2023-24ನೇ ಸಾಲಿನಲ್ಲಿ 61 ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ 10,94,795 ರೂ.ಗಳನ್ನು ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಿಂದ ವೈದ್ಯಕೀಯ ವೆಚ್ಚ ಮಂಜೂರಿಸಿ ಧನ ಸಹಾಯ ನೀಡಲಾಗಿದೆ. 21 ಜನ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಮತ್ತು ಅವರ ಧರ್ಮಪತ್ನಿ, ಪತಿ ಯವರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವೈದ್ಯಕೀಯ ಉಪಚಾರ ಕುರಿತು ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸುಮಾರು 41 ಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ.

         ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳಿಗೆ ತಲಾ 5000 ರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ. ಶೈಕ್ಷಣಿಕವಾಗಿ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 4,68,800 ರೂ.ಗಳ ಶೈಕ್ಷಣಿಕ ಧನ ಸಹಾಯ ನೀಡಲಾಗಿದೆ. 30 ಜನ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ಕನ್ನಡಕ ಖರೀದಿಸಲು ತಲಾ 1000 ರೂ.ಗಳ ಒಟ್ಟು 30,000 ರೂ.ಗಳನ್ನು ನೀಡಲಾಗಿದೆ. ಸೇವೆಯಿಂದ ಮಯೋನಿವೃತ್ತಿ ಹೊಂದಿದ 18 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಲಾಗಿದೆ. ಮರಣ ಹೊಂದಿದ 02 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಾದ ಎಆರ್‌ಎಸ್‌ಐ ಶ್ರೀ ರಾಚಯ್ಯ ಹಿರೇಮಠ ಮತ್ತು ಪೊಲೀಸ್ ಠಾಣೆ ಗೋಗಿ ಸಿಎಚ್‌ಸಿ ದೇವೇಂದ್ರಪ್ಪ ಅವರ ಅಂತ್ಯಸAಸ್ಕಾರಕ್ಕಾಗಿ ತಲಾ 10,000 ರೂ.ಗಳಂತೆ, 20,000 ರೂ.ಗಳನ್ನು ನೀಡಲಾಗಿದೆ.

         ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ  ಆರೋಗ್ಯದ ಹಿತದೃಷ್ಠಿಯಿಂದ ವಾರ್ಷಿಕ ಉಚಿತ ವೈದ್ಯಕೀಯ ತಪಾಸಣೆಯನ್ನು ಶ್ರೀ ರವೀಂದ್ರ ಪಾಟೀಲ್ ನರ್ಸಿಂಗ್ ಹೋಮ್ ಕಲಬುರಗಿ ರವರಲ್ಲಿ ಮಾಡಿಸಲಾಗಿದೆ. ಯಾದಗಿರಿ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ಪೌಷ್ಠಿಕ ಆಹಾರ ಮತ್ತು ಆರೋಗ್ಯಕರ ಜೀವನ ಶೈಲಿ (ಬಿಎಂಐ) ಕುರಿತು ನುರಿತ ತಜ್ಞ ವೈದ್ಯರಿಂದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಗಾಗ ಒತ್ತಡ ನಿರ್ವಹಣೆ ಬಗ್ಗೆ, ಕುಟುಂಬ ನಿರ್ವಹಣೆ, ಆತ್ಮಹತ್ಯೆ ತಡೆಗಟ್ಟುವಿಕೆಗೆ ಬಗ್ಗೆ, ಸಮಯ ನಿರ್ವಹಣೆ ಮತ್ತು ಉತ್ತಮ ಆರೋಗ್ಯ ಕುರಿತು ಆಪ್ತ ಸಮಾಲೋಚಕರಾದಂತಹ ಶ್ರೀ ಭರತೇಶ ರವರಿಂದ ಕಾರ್ಯಾಗಾರವನ್ನು ಮಾಡಲಾಗಿದೆ. ನೀರಿನ ಕೊರತೆಯುಂಟಾಗಿದ್ದರಿAದ ಹೆಡ್‌ಕ್ವಾಟರ್ಸ್ನಲ್ಲಿ 3 ಬೋರ್‌ವೆಲ್‌ಗಳನ್ನು ಹಾಕಿಸಿ ಸಿಬ್ಬಂದಿಯವರ ನೀರಿನ ಕೊರತೆ ನೀಗಿಸಲಾಗಿದೆ ಎಂದು ಹೇಳಿದರು.

         ಈ ಸಂದರ್ಭದಲ್ಲಿ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ರಾಷ್ಟç ಧ್ವಜ ಹಾಗೂ ಪೊಲೀಸ್ ಧ್ವಜಕ್ಕೆ ಗೌರವಸಲ್ಲಿಸಿ ಆಗಮನ ಮತ್ತು ನಿರ್ಗಮನ ಕಾರ್ಯಕ್ರಮ ನಡೆಯಿತು ಪೊಲೀಸ್ ಧ್ವಜಗಳ ವಿತರಣೆ ಮಾಡಲಾಯಿತು. ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಅವರನ್ನು ಸನ್ಮಾನಿಸಲಾಯಿತು. ಯಾದಗಿರಿ ಜಿಲ್ಲೆಯ ಸಶಸ್ತç ಪಡೆಯ ನೇತೃತ್ವವನ್ನು ಎಹೆಚ್‌ಸಿ-13 ಶ್ರೀ ರಂಗನಾಥ, ಹಾಗೂ ಯಾದಗಿರಿ ಆರ್‌ಎಸ್‌ಐ ಡಿಎಆರ್ 1ನೇ ತುಕಡಿ ನಾಯಕರು ಶ್ರೀಕಾಂತ ಹಿರೇಗೌಡ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಸ್ವಾಗತಿಸಿದರು, ಡಿ.ವೈ.ಎಸ್.ಪಿ ಅರುಣಕುಮಾರ ಕೊನೆಯಲ್ಲಿ ವಂದಿಸಿದರು. ಜಿಲ್ಲೆಯ ಡಿವೈಎಸ್‌ಪಿ, ಪೊಲೀಸ್ ಸೆಬ್‌ಇನ್ಸ್ಪೆಕ್ಟರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts