More

    ಡ್ರೋನ್ ಬಳಕೆ ಪೊಲೀಸರಿಗೆ ಅವಶ್ಯ

    ಐಮಂಗಲ: ಪೊಲೀಸ್ ಇಲಾಖೆ ಸಿಬ್ಬಂದಿಗೆ ಡ್ರೋನ್ ತರಬೇತಿ ಕಾರ್ಯಾಗಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ಅಭಿಪ್ರಾಯಪಟ್ಟರು.

    ಗ್ರಾಮದ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಸೇವಾನಿರತ ಪೊಲೀಸ್ ಪೇದೆಗಳಿಗೆ ಏರೋನೆಸ್ಟ್ ಸೆಲ್ಕಾ ಪ್ರೈವೇಟ್ ಲಿಮಿಟೆಡ್ ಗುರುವಾರ ಏರ್ಪಡಿಸಿದ್ದ ವಿಶೇಷ ಡ್ರೋನ್ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

    ಡ್ರೋನ್‌ನಿಂದ ಮನುಷ್ಯರು ಮಾಡುವ ಕೆಲಸಗಳು ಸುಲಭವಾಗಿದ್ದು ಅದನ್ನು ಕೆಲ ದುಷ್ಕರ್ಮಿಗಳು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಡ್ರೋನ್ ಬಳಕೆ ಸಾಮಾನ್ಯವಾಗಿದೆ. ಬಳಕೆಯ ಬಗೆಗಿನ ಜ್ಞಾನವನ್ನು ತಿಳಿದುಕೊಳ್ಳುವುದು ಪೊಲೀಸ್ ಸಿಬ್ಬಂದಿಗೆ ಅತಿ ಅವಶ್ಯವಾಗಿದೆ ಎಂದು ತಿಳಿಸಿದರು.

    ಏರೋನೆಸ್ಟ್ ಸೆಲ್ಕಾದ ಚೇರ್‌ಮನ್ ಸಿ.ಎಸ್.ಜೋಗೇಶ್ ಮಾತನಾಡಿ, ಡ್ರೋನ್ ಆವಿಷ್ಕಾರ ಮಾಡಿರುವುದು ಉತ್ತಮ ಕೆಲಸಕ್ಕಾಗಿ. ಆದರೆ ಇತ್ತೀಚಿನ ದಿನಗಳಲ್ಲಿ ಡ್ರೋನ್ ಒಂದು ವಸ್ತುವಲ್ಲ, ಅದು ಆಯುಧವಾಗಿದೆ. ಯುದ್ಧದಲ್ಲಿ ಸಹ ಬಳಕೆಯಾಗುತ್ತಿದೆ ಎಂದರು.

    ಡ್ರೋನ್ ಬಳಕೆ ಬಗ್ಗೆ ಕಾನೂನಿನ ಚೌಕಟ್ಟಿದ್ದು ಅದರ ಅರಿವು ಪೊಲೀಸರಿಗೆ ಇದ್ದರೆ ತಪ್ಪು ನಡೆದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

    ಗಣ್ಯ ವ್ಯಕ್ತಿಗಳು ಸಂಚರಿಸುವ 12 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ನಿಷೇಧಿಸಲಾಗಿದೆ. ಡ್ರೋನ್ ಯಾವ ಉದ್ದೇಶಕ್ಕಾಗಿ ಬಳಸಿದ್ದಾರೆ, ಅನುಮತಿ ಪಡೆದಿದ್ದಾರೆಯೇ ಇಲ್ಲವೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು ಎಂದರು.

    ಈ ವೇಳೆ ಪ್ರಾಚಾರ್ಯ ಹಾಗೂ ಎಸ್ಪಿ ಪಿ.ಪಾಪಣ್ಣ, ಏರೋನೆಸ್ಟ್ ಸೆಲ್ಕಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಎಹತಶಾಮುಲ್‌ಹಕ್, ಸಿಒಒ ಎಂ.ಕೆ.ಗ್ರೀಷ್ಮಾ,

    ಸಿಎಫ್‌ಒ ಎನ್.ಲಿಖಿತಾ, ಕಲ್ಪರಾಜ್ ಎಂ.ಹಿರೇಮಠ್, ಸಿಪಿಐ ಬಿ.ಜಿ.ಶಂಕ್ರಪ್ಪ, ಆರ್‌ಪಿಐ ಬಿ.ಪರಶುರಾಮ್, ಆರ್‌ಎಸ್‌ಐ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts