More

    ಪೊಲೀಸ್ ಇಲಾಖೆಯಿಂದ ಕರೋನಾ ಜಾಗೃತಿ ಜಾಥಾ

    ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಗೋಕಾಕ ಡಿವೈಎಸ್.ಪಿ. ಡಿ.ಟಿ ಪ್ರಭು ನೇತ್ರತ್ವದಲ್ಲಿ ಪೊಲೀಸ್ ಇಲಾಖೆಯಿಂದ ಮಾಸ್ಕ ಧರಿಸಿ ಕರೋನ ವೈರಸ್ ಕುರಿತು ಜಾಗೃತಿ ಮುಡಿಸುವ ಕಾರ್ಯಕ್ರಮ ಇಂದು ಮುಂಜಾನೆ ನಡೆಯಿತು.

    ಗೋಕಾಕ ಡಿವೈಎಸ್.ಪಿ. ಡಿ.ಟಿ ಪ್ರಭು ಗ್ರಾಮಸ್ಥರಿಗೆ ಕರೋನಾ ವೈರಸ್ ಜಗತ್ತಿನಾಧ್ಯಂತ ಹರಡುತ್ತಿದೆ. ಆದ ಕಾರಣ ಸಾರ್ವಜನಿಕರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಜಾತ್ರೆ,ಮದುವೆ ಸಮರಂಭಗಳು ಗುಂಪಿನಲ್ಲಿ ಇರುವದು. ಒಬ್ಬರಿಗೊಬ್ಬರು ಕೈ ಕೊಡುವದು ಮಾಡಬೇಡಿ ಆದಷ್ಟು ಶುಚಿತ್ವ ಕಾಪಾಡುವಲ್ಲಿ ಗಮನ ಸರಿಸಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.

    ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಗೃತಿ ಜಾಥಾ ನಡೆಸಿ ಕರೋನಾದಿಂದ ಜಾಗೃತರಾಗಿ. ಮಾಸ್ಕ ಧರಿಸಿ ಕರೋನಾದಿಂದ ದೂರವಿರಿ. ಎಚ್ಚರ ಎಚ್ಚರ ಕರೋನಾದಿಂದ ಎಂದು ಕುಗೂತ್ತಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

    ಜಾಥಾದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ. ಘಟಪ್ರಭಾ ಪಿ ಎಸ್.ಐ ಎಚ್.ವೈ ಬಾಲದಂಡಿ. ಹುಕ್ಕೇರಿ ಸಿ.ಪಿ.ಐ ಗುರುರಾಜ ಕಲ್ಯಾಣಶೆಟ್ಟಿ ಹುಕ್ಕೇರಿ ಪಿ.ಎಸ್.ಐ ಶಿವಾನಂದ ಗುಡಗನಟ್ಟಿ. ಗೋಕಾಕ ಗ್ರಾಮೀಣ ಪಿ.ಎಸ್.ಐ ಎನ್.ಆರ್. ಕಿಲಾರೆ. ಸ್ಥಳೀಯ ಪ್ರಾ.ಆ.ಕೇಂ ವೈಧ್ಯ ರಾಮಚಂದ್ರ ಹೊರಟ್ಟಿ ಹಾಗೂ ಗ್ರಾಮಸ್ತರು ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts