More

    ಬಂಧಿಸಲು ತೆರಳಿದ ಪೊಲೀಸರ ಬೂಟಿನ ಅಡಿಯಲ್ಲಿ ಸಿಲುಕಿ 4 ದಿನದ ಕೂಸು ವಿಧಿವಶ…

    ಜಾರ್ಖಂಡ್: ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಮನೆಯೊಂದರ ಮೇಲೆ ಬುಧವಾರ ಮುಂಜಾನೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರ ಬೂಟುಗಳ ಅಡಿಯಲ್ಲಿ ಸಿಲುಕಿದ ನಾಲ್ಕು ದಿನದ ಮಗು ಸಾವನ್ನಪ್ಪಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

    ಘಟನೆಯನ್ನು ವಿವರಿಸುವ ವ್ಯಕ್ತಿಯ ವೀಡಿಯೊವನ್ನು ಟ್ಯಾಗ್ ಮಾಡಿದ ಸೊರೆನ್, “ಜಾರ್ಖಂಡ್ ಪೊಲೀಸರೇ, ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡಿ” ಎಂದು ಟ್ವೀಟ್ ಮಾಡಿದ್ದಾರೆ.

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶುವಿನ ಅಜ್ಜ ಭೂಷಣ್ ಪಾಂಡೆ ಸೇರಿದಂತೆ ಇಬ್ಬರನ್ನು ಬಂಧಿಸಲು ಪೊಲೀಸ್ ಸಿಬ್ಬಂದಿ ಡಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮನೆಗೆ ಹೋದಾಗ ಈ ಘಟನೆ ನಡೆದಿದೆ. “ನ್ಯಾಯಾಲಯವು ಹೊರಡಿಸಿದ ಎರಡು ಜಾಮೀನು ರಹಿತ ವಾರಂಟುಗಳನ್ನು ಕಾರ್ಯರೂಪಕ್ಕೆ ತರಲು ಪೊಲೀಸರು ಅಲ್ಲಿಗೆ ಹೋದಾಗ ನಾಲ್ಕು ದಿನದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ಮೇಲ್ನೋಟಕ್ಕೆ ಮಗುವಿನ ದೇಹದ ಮೇಲೆ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗಿರಿಧ್ ಎಸ್ಪಿ ಅಮಿತ್ ರೇಣು ಪಿಟಿಐಗೆ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಏನಾಯಿತು ಎಂಬುದನ್ನು ಪೊಲೀಸರು ಹೇಳಲಿದ್ದಾರೆ ಎಂದು ಎಸ್ಪಿ ಹೇಳಿದರು.

    ಬಿಜೆಪಿ ಮುಖಂಡ ಮತ್ತು ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಈ ಘಟನೆಯನ್ನು ‘ಘೋರ’ ಎಂದು ಕರೆದು ಖಂಡಿಸಿದ್ದು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts