More

    ವಿಶ್ವವೇ ಕೊಂಡಾಡಿದ ಪೋಖ್ರಾನ್​ ಅಣ್ವಸ್ತ್ರ ಪರೀಕ್ಷೆಗೆ 22: ವಾಜಪೇಯಿ ನೆನೆದ ಪ್ರಧಾನಿ ಮೋದಿ

    ನವದೆಹಲಿ: 22 ವರ್ಷಗಳ ಹಿಂದೆ ಇದೇ ದಿನ… ಅಂದರೆ 1998ರ ಮೇ 11. ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನದ ಯಶಸ್ಸಿಗೆ ಪ್ರೇರಕ ಶಕ್ತಿಯಾಗಿ ನಡೆಸಲಾಗಿತ್ತು ಅಣ್ವಸ್ತ್ರ ಪರೀಕ್ಷೆ. ಅಮೆರಿಕ ಬೇಹುಗಾರಿಕೆ ಹಾಗೂ ಉಪಗ್ರಹಗಳ ಕಣ್ತಪ್ಪಿಸಿಕೊಂಡು ಅತ್ಯಂತ ಸೂಕ್ಷ್ಮವಾಗಿ ಅಣ್ವಸ್ತ್ರ ಮಿಷನ್ ಹಮ್ಮಿಕೊಳ್ಳಲಾಗಿತ್ತು.

    ಅದು ನಡೆದದ್ದು ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯಲ್ಲಿದೆ ಪೋಖ್ರಾನ್​ ಎಂಬ ಗ್ರಾಮದಲ್ಲಿ. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯೆಂದೇ ಇದು ಪ್ರಸಿದ್ಧಿ ಪಡೆದಿದೆ. ಇದರ ಅಮೋಘ ಯಶಸ್ಸಿನ ನಂತರ ಈ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕೃತವಾಗಿ ಘೋಷಿಸಿದರು.

    ಇದನ್ನೂ ಓದಿ: ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?

    22ನೇ ವರ್ಷಾಚರಣೆಯ ನಿಮಿತ್ತ ಅಂದಿನ ದಿನವನ್ನು ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಐತಿಹಾಸಿಕ ಸಾಧನೆ ಮಾಡಿದ ವಾಜಪೇಯಿ ಅವರ ಬಗ್ಗೆ ಮಾತನಾಡಿ ವಾಜಪೇಯಿ ಅವರ ಕೊಡುಗೆಯನ್ನು ಕೊಂಡಾಡಿದರು. ಪ್ರೋಖ್ರಾನ್ ಯಶಸ್ವಿ ಅಣ್ವಸ್ತ್ರ ಪರೀಕ್ಷೆಯು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿತ್ತು. ವಿಶ್ವದೆಲ್ಲೆಡೆಯ ಭಾರತೀಯರಲ್ಲಿ ಹೊಸ ಆತ್ಮವಿಶ್ವಾಸ ತುಂಬಿಕೊಂಡಿತ್ತು. ಅಟಲ್ ಜೀ ಮಾತುಗಳು ಇಡೀ ದೇಶದಲ್ಲಿ ಗೌರವ, ಪರಾಕ್ರಮ ಹಾಗೂ ಖುಷಿಯಿಂದ ತುಂಬಿಕೊಂಡಿತ್ತು ಎಂದು ನೆನೆದರು.

    ಅಮೆರಿಕ, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಅಣ್ವಸ್ತ್ರ ಶಕ್ತಿಯನ್ನು ನೋಡಿ ನಿಬ್ಬೆರಗಾದವು. ಈ ಪರೀಕ್ಷೆಯು ಪ್ರಬಲ ರಾಜಕೀಯ ನಾಯಕತ್ವದಲ್ಲಿ ಹೇಗೆ ವ್ಯತ್ಯಾಸ ತರಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಈ ಮಿಷನ್‌ನಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಿದ್ದರು. ಈ ಪ್ರಬಲ ಇಚ್ಛಾಶಕ್ತಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾಥ್ ನೀಡಿದ್ದರು ಎಂದು ಪ್ರಧಾನಿ ಹೇಳಿದರು.

    ಇದನ್ನೂ ಓದಿ: ಹೀಗೂ ಉಂಟು! ಚಂದ್ರನಲ್ಲೂ ಬೇಕು ಮಾನವ ಮೂತ್ರ, ಏಕೆ ಅಂತೀರಾ?

    ರಾಷ್ಟ್ರೀಯ ತಂತ್ರಜ್ಞಾನ ದಿನದ 20ನೇ ವರ್ಷಾಚರಣೆಯ ನಿಮಿತ್ತ ಎರಡು ವರ್ಷಗಳ ಹಿಂದೆ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ತಾವು ಮಾತನಾಡಿದ್ದನ್ನು ಮತ್ತೊಮ್ಮೆ ಪ್ರಧಾನಿ ಅವರ ಟ್ವಿಟರ್​ನಲ್ಲಿ ಬಿತ್ತರಿಸಲಾಗಿದೆ.

    ಬುದ್ಧ ಪೂರ್ಣಿಮಾ ದಿನದಂದು ಬುದ್ಧ ದೇವರ ಆಶೀರ್ವಾದದೊಂದಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿತ್ತು. ಈ ಮೂಲಕ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತದ ಶಕ್ತಿಯ ಪ್ರದರ್ಶನವಾಗಿತ್ತು. ‘ಜೈ ಜವಾನ್’, ‘ಜೈ ಕೀಸಾನ್’ ಹಾಗೂ ‘ಜೈ ತಂತ್ರಜ್ಞಾನ’ ಎಂಬ ಮಂತ್ರವನ್ನು ಅಟಲ್ ಜೀ ನೀಡಿದ್ದರು.

    ಇದನ್ನೂ ಓದಿ: ಸ್ಪಿರುಲಿನಾ ಕರೊನಾಕ್ಕೆ ರಾಮಬಾಣವೆ? ಸಂಶೋಧನಾಲಯ ಏನು ಹೇಳಿದೆ?

    ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಈ ಮಿಷನ್‌ನಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಿದ್ದರು. ಅಮೆರಿಕ ಬೇಹುಗಾರಿಕೆ ಹಾಗೂ ಸ್ಯಾಟಲೈಟ್‌ಗಳನ್ನು ಕಣ್ತಪ್ಪಿಸಿಕೊಂಡು ಅತ್ಯಂತ ಸೂಕ್ಷ್ಮವಾಗಿ ಅಣ್ವಸ್ತ್ರ ಮಿಷನ್ ಹಮ್ಮಿಕೊಂಡಿತ್ತು. ಈ ಪ್ರಬಲ ಇಚ್ಛಾಶಕ್ತಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾಥ್ ನೀಡಿದ್ದರು ಎಂಬ ಬಗ್ಗೆ ಮನ್​ ಕೀ ಬಾತ್​ನಲ್ಲಿ ಮೋದಿ ಮಾತನಾಡಿದ್ದರು.

    ಐದು ಪರಮಾಣು ಸರಣಿ ಸ್ಫೋಟಗಳ ನಡೆಸುವ ಮೂಲಕ ಭಾರತವು ಅಂದು ಅಣ್ವಸ್ತ್ರ ಪ್ರಯೋಗವನ್ನು ಯಶಸ್ವಿಗೊಳಿಸಿತ್ತು. ಇದು ಅಣ್ವಸ್ತ್ರ ಪರೀಕ್ಷೆಯ ಎರಡನೇ ನಿದರ್ಶನವಾಗಿತ್ತು. 1974ರಲ್ಲಿ ಸ್ಮೈಲಿಂಗ್ ಬುದ್ಧ ಕೋಡ್ ಹೆಸರಿನ ನ್ಯೂಕ್ಲಿಯರ್ ಪರೀಕ್ಷೆಯನ್ನು ನಡೆಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts