More

    ಮಂಗಗಳಿಗೆ ವಿಷಪ್ರಾಶನ ಮಾಡಿಸಿ, ಹಲ್ಲೆ ನಡೆಸಿದ ದುರುಳರು!

    ಉಪ್ಪಿನಂಗಡಿ (ದಕ್ಷಿಣಕನ್ನಡ): 50ಕ್ಕೂ ಹೆಚ್ಚು ಮಂಗಗಳಿಗೆ ವಿಷವಿಕ್ಕಿ, ಹಲ್ಲೆ ನಡೆಸಿ ಅರಣ್ಯದ ಸಮೀಪಕ್ಕೆ ತಂದು ಬಿಟ್ಟಿದ್ದು, ಈ ಪೈಕಿ 14 ಮಂಗಗಳು ಸಾವನ್ನಪ್ಪಿವೆ.

    ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕುಂಟಾಲಪಲ್ಕೆ ಕರ್ಲಬಿ ಸೇತುವೆ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.

    ಎಲ್ಲಿಂದಲೋ ಹಿಡಿದು ತಂದು ಹಾಕಲಾಗಿದ್ದ ಸ್ಥಿತಿಯಲ್ಲಿ ಗುರುವಾರ ರಾತ್ರಿ ಈ ಮಂಗಗಳು ಪತ್ತೆಯಾದವು. ಈ ಪೈಕಿ ಬಹುತೇಕ ಮಂಗಗಳು ಅರೆಪ್ರಜ್ಞಾವಸ್ಥೆಯಲ್ಲಿದ್ದವು. ಅವುಗಳ ತಲೆಗೂ ಗಾಯಗಳಾಗಿದ್ದವು. ರಾತ್ರಿಯಾಗಿದ್ದ ಹಿನ್ನೆಲೆಯಲ್ಲಿ ಅವುಗಳ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

    ಇದನ್ನೂ ಓದಿ      ಪ್ರೀತಿ ಕುರುಡು ಎಂದು ಈ ಬೆಂಗಳೂರು ಯುವಕ ಪತ್ನಿ ಜತೆ ಕರೊನಾನೂ ತರೋದಾ?

    ಗಂಭೀರ ಸ್ವರೂಪದ ಗಾಯಗಳಾಗಿದ್ದ ಮೂರು ಮರಿ ಮಂಗಗಳೂ ಸೇರಿದಂತೆ ಒಟ್ಟು ಹದಿನಾಲ್ಕು ಮಂಗಗಳು ಸಾವನ್ನಪ್ಪಿವೆ. ಉಳಿದ ಮಂಗಗಳು ಪ್ರಜ್ಞೆ ಮರುಕಳಿಸಿದ ಬಳಿಕ ಸಮೀಪದ ಕಾಡಿನೊಳಕ್ಕೆ ಹೋಗಿರುವ ಸಾಧ್ಯತೆ ಇದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರು.

    ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಷ ಪ್ರಾಶನ ಮಾಡಿಸಿ ತಲೆಗೆ ಹೊಡೆದಿರುವುದು ದೃಢಪಟ್ಟಿದೆ.

    ಮದುವೆಗೆ ಕುತ್ತು ತಂದ ಫೇಸ್‌ಬುಕ್ ನಕಲಿ ಪೋಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts