More

    ಮಂಜನಾಡಿಯಲ್ಲಿ ಕಾಗೆಗಳ ಕಳೇಬರ ಪತ್ತೆ

    ಉಳ್ಳಾಲ: ಮಂಜನಾಡಿ ಗ್ರಾಮದ ಆರಂಗಡಿ ಎಂಬಲ್ಲಿ ಕಾಗೆಗಳ ಕಳೇಬರ ಪತ್ತೆಯಾಗಿದ್ದು, ಕರಾವಳಿ ಭಾಗದಲ್ಲೂ ಹಕ್ಕಿಜ್ವರದ ಭೀತಿ ಆವರಿಸಿದೆ.
    ಈ ಭಾಗ ಗುಡ್ಡಕಾಡಿನಿಂದ ಆವೃತ್ತವಾಗಿದ್ದು ಮಂಗಳವಾರ ಪಂಚಾಯಿತಿ ಮುಂಭಾಗದಲ್ಲಿರುವ ದರ್ಗಾ ರಸ್ತೆಯಲ್ಲಿ ಆರು ಕಾಗೆಗಳು ಒಂದೇ ಜಾಗದಲ್ಲಿ ಸತ್ತು ಬಿದ್ದಿರುವುದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಅವರಿಗೆ ಮಾಹಿತಿ ನೀಡಿದ್ದು, ಅವರು ಮತ್ತು ಗ್ರಾಮಕರಣಿಕ ಪ್ರಸಾದ್ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಕಾಗೆಗಳು ಸುಸ್ತಾಗಿ ಅನ್ನಾಹಾರ ಸೇವಿಸದೆ ಸತ್ತು ಬಿದ್ದಂತೆ ಕಂಡು ಬಂದಿದ್ದು, ಹಕ್ಕಿಜ್ವರ ಇರಬಹುದು ಎನ್ನುವ ಸಂಶಯವನ್ನು ಪಿಡಿಒ ವ್ಯಕ್ತಪಡಿಸಿದ್ದಾರೆ.

    ಕರೊನಾ ಸಂದರ್ಭ ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಬಂದಿದ್ದು, ಸಾವಿರಾರು ಕೋಳಿಗಳನ್ನು ಜೀವಂತ ಕೊಲ್ಲಲಾಗಿತ್ತು. ಅದೇ ರೀತಿ ಇಲ್ಲೂ ಹಕ್ಕಿಜ್ವರ ಬಂದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾವೂರು ಪಶು ವೈದ್ಯಾಧಿಕಾರಿ ರೇಖಾ, ಕಾಗೆಗಳು ಹಕ್ಕಿಜ್ವರದಿಂದ ಸತ್ತಿವೆ ಎಂದು ಈಗಲೇ ಹೇಳಲಾಗದು. ವೈರಲ್ ಅಥವಾ ವಿಷಪ್ರಾಶನದಿಂದಲೂ ಸತ್ತಿರಬಹುದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸತ್ತ ಕಾಗೆಗಳ ಕಳೇಬರ ಪರೀಕ್ಷೆಗೆ ಕಳುಹಿಸಲಾಗುವುದು. ಅಲ್ಲಿಂದ ವರದಿ ಬಂದ ಬಳಿಕವೇ ಕಾರಣ ಗೊತ್ತಾಗಲಿದೆ. ವರದಿ ಬರಲು ವಾರ ಬೇಕಾಗುತ್ತದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts