More

    ಕಿರುತೆರೆಯಲ್ಲಿ ‘ಪೊಗರು’ … ಯುಗಾದಿಗೆ ಟೆಲಿವಿಷನ್ ಪ್ರೀಮಿಯರ್

    ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಯಾಗಿ ಎರಡು ತಿಂಗಳು ಸಹ ಆಗಿಲ್ಲ. ಫೆಬ್ರವರಿ 19ರ ರಥಸಪ್ತಮಿಯಂದು ಚಿತ್ರ ಏಕಕಾಲಕ್ಕೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಡುಗಡೆಯಾಗಿತ್ತು.

    ಇದನ್ನೂ ಓದಿ: ಹೊಸ ಅಭಿಯಾನಕ್ಕೆ ಕೈ ಜೋಡಿಸಿದ ಸೋನು ಸೂದ್​ …

    ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಧೂಳೆಬ್ಬಿಸಿತ್ತು. ಇದೀಗ ಕಿರುತೆರೆಯಲ್ಲೂ ಕಮಾಲ್ ಮಾಡಲು ಸಜ್ಜಾಗಿದೆ. ಏ. 13ರಂದು ಯುಗಾದಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ. ಮುಂದಿನ ಮಂಗಳವಾರ ಚಿತ್ರ ಸಂಜೆ ಆರಕ್ಕೆ ಪ್ರಸಾರವಾಗಲಿದೆ. ಅದಾಗಿ ಒಂದು ವಾರಕ್ಕೆ, ಅಂದರೆ ಏ.20ಕ್ಕೆ ಚಿತ್ರದ ಹಿಂದಿ ಅವತರಣಿಕೆ ಟಿವಿಯಲ್ಲಿ ಪ್ರಸಾರವಾಗಲಿದೆ.

    ನಂದಕಿಶೋರ್ ನಿರ್ದೇಶನಲ್ಲಿ ಮೂಡಿಬಂದಿರುವ ‘ಪೊಗರು’ ಚಿತ್ರ ಕರೊನಾ ಬಳಿಕ ತೆರೆಕಂಡ ಮೊದಲ ದೊಡ್ಡ ಬಜೆಟ್‌ನ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಿಡುಗಡೆಗೆ ಮುನ್ನವೇ ಬಹುನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ, ಮೊದಲ ವಾರ 45 ಪ್ಲಸ್​ ಕೋಟಿ ಕಲೆಕ್ಟ್​ ಮಾಡಿ, ಹೊಸ ದಾಖಲೆ ನಿರ್ಮಿಸಿತ್ತು. ಈಗ ಚಿತ್ರವು ಕಿರುತೆರೆಯಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

    ಬಿ.ಕೆ ಗಂಗಾಧರ್ ನಿರ್ಮಾಣ ಮಾಡಿರುವ ‘ಪೊಗರು’ ಚಿತ್ರದಲ್ಲಿ ಧ್ರುವ ಜತೆಗೆ ರಶ್ಮಿಕಾ ಮಂದಣ್ಣ, ‘ಡಾಲಿ’ ಧನಂಜಯ್, ರವಿಶಂಕರ್, ಪವಿತ್ರಾ ಲೋಕೇಶ್​, ರಾಘವೇಂದ್ರ ರಾಜಕುಮಾರ್​ ಸೇರಿ ಹಲವು ನಟರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಚಂದನ್​ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.

    VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts