More

    ಬೆತ್ತಲೆ ಮೆರವಣಿಗೆ ವಿರುದ್ಧ ಕವಿತೆ ವಾಚನ ಪ್ರತಿಭಟನೆ

    ತರೀಕೆರೆ: ಮಣಿಪುರ ರಾಜ್ಯದ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಕೃತ್ಯ ಖಂಡಿಸಿ ಸಮಾನ ಮನಸ್ಕ ಸಾಹಿತಿಗಳು ಶನಿವಾರ ಪಟ್ಟಣದಲ್ಲಿ ಕಾವ್ಯ ಪ್ರತಿರೋಧ ಕವಿತೆ ವಾಚಿಸುವ ಮೂಲಕ ಪ್ರತಿಭಟಿಸಿದರು.

    ಕವಿ ಹರ್ಷಿಣಿ ಅವರು ಹೆಣ್ಣಿನ ಘನತೆ, ನಾಗಜ್ಯೋತಿ-ಸಾಕ್ಷಿ ದೊರಕಿದೆ, ಹರೀಶ್- ಮಣಿ ಮಹಿ, ಉಮಾ ಪ್ರಕಾಶ್-ಹಪಾಹಪಿ, ಲೇಖಕ ಟಿ.ಎಸ್.ಮೋಹನ್‌ಕುಮಾರ್-ವಿಶ್ವ ಗುರು ಸಾಧ್ಯವೇ?, ಮಧುಸೂದನ್-ಮತ್ತೆ ಬಾ ಭೀಮ, ಮಹಾಂತೇಶ್-ಜಾಗೃತ ಸಂದೇಶ ಮೊಳಗಲಿ ಎಂಬ ಕವಿತೆ ವಾಚಿಸಿ ಪ್ರಕರಣವನ್ನು ಖಂಡಿಸಿದರು.
    ಸಾಹಿತಿ ಡಾ. ಸಬಿತಾ ಬನ್ನಾಡಿ ಮಾತನಾಡಿ, ದೇಶದಲ್ಲಿ ಬೆಳಕಿಗೆ ಬಾರದ ಹಲವು ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿವೆ. ಸಮಾಜ ಇಂಥ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಬೇಕು ಎಂದು ಹೇಳಿದರು.
    ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಚಾರ್ಯ ಕೃಷ್ಣಮೂರ್ತಿ ಮಾತನಾಡಿ, ಸಾಹಿತ್ಯದ ಮೂಲಕ ಘಟನೆ ಖಂಡಿಸುತ್ತಿರುವುದು ಭಿನ್ನ ಪ್ರತಿಭಟನೆ. ಸಾಹಿತ್ಯದ ಮೂಲಕ ನಾಗರಿಕ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು.
    ಕವಿ ಟಿ.ದಾದಾಪೀರ್, ಮಣಿಪುರದ ಚಿತ್ರಾಂಗದೆ ಮತ್ತೆ ಬಬ್ರುವಾಹನನ ಹಡೆಯಲಿ ಎಂಬ ಕವಿತೆ ವಾಚಿಸಿದರು. ಮಹಿಳೆಯನ್ನು ಪ್ರತಿಭಟನೆಯ ಅಸವನ್ನಾಗಿಸಿಕೊಂಡು ಶತಮಾನಗಳಿಂದಲೂ ಅವಳ ಅಸ್ಮಿತೆ ಮತ್ತು ಘನತೆಗೆ ಚ್ಯುತಿ ತರುವ ಪ್ರಯತ್ನ ಖಂಡನೀಯ ಎಂದರು.
    ಸಮಾಜ ಸೇವಕ ಬಿ.ಎಸ್.ಮಂಜಯ್ಯ, ಪ್ರಮುಖರಾದ ಅನಂತ್ ನಾಡಿಗ್, ಟಿ.ಜಿ.ಸದಾನಂದ್, ತ.ಮ.ದೇವಾನಂದ್, ಕಲ್ಯಾಣ್‌ಕುಮಾರ್ ನವಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts