More

    ನೋವು, ನಲಿವಿನ ಅಭಿವ್ಯಕ್ತಿಯೇ ಕಾವ್ಯ

    ಮುಧೋಳ : ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯಕ್ಕೆ ವಿಶೇಷ ಸ್ಥಾನ ಮತ್ತು ಮಹತ್ವವಿದೆ. ಮನಸಿನ ನೋವು, ನಲಿವುಗಳ ಅನುಭವಗಳೇ ಕಾವ್ಯಗಳಾಗಿ ಹೊರ ಹೊಮ್ಮುತ್ತವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಕೃಷ್ಣ ಎಸ್.ದೀಕ್ಷಿತ್ ಹೇಳಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಜಗಜೀವನರಾಮ್ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಕೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ವಸ್ತ್ರದ ಅವರ ‘ಮುಖಗವಸು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಾವ್ಯತ್ವ ಶಕ್ತಿಯು ಪ್ರತಿಯೊಬ್ಬರ ಮನದಲ್ಲಿ ಇದ್ದೇ ಇರುತ್ತದೆ. ಆದರೆ, ಅದನ್ನು ಹೊರಹಾಕುವ ಸಾಮರ್ಥ್ಯ ಇರಬೇಕು. ಕಾವ್ಯವು ಮನಸ್ಸು ಮತ್ತು ಜೀವನವನ್ನು ಅರಳಿಸುತ್ತಿದೆ. ಹೀಗಾಗಿ ದೇವರಿಗೂ ಕಾವ್ಯ ಎಂದರೆ ಪ್ರೀತಿ ಎಂದು ಹೇಳಿದರು.

    ಧಾರವಾಡ ಹೈಕೋರ್ಟ್ ಪೀಠದ ಮಾಜಿ ಸಹಾಯಕ ಸಾಲಿಸಿಟರ್ ಜನರಲ್ ಕೆ.ಬಿ. ನಾವಲಗಿಮಠ ಮಾತನಾಡಿ, ಕನ್ನಡ, ಇಂಗ್ಲಿಷ್‌ನಲ್ಲಿರುವ ಕಾವ್ಯಗಳ ಸಾಲುಗಳನ್ನು ನ್ಯಾಯಾಲಯದ ಕಾನೂನುಗಳಲ್ಲಿ ಬಳಸಿಕೊಳ್ಳಲಾಗಿದೆ. ಪ್ರಕಾಶ ವಸ್ತ್ರದ ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಕವಿಗಳಾಗಿರುವುದು ವಿಶೇಷ ಗುಣ ಎಂದರು.

    ಜಮಖಂಡಿ ಓಲೇಮಠದ ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತನಸಿರಿ ಅಧ್ಯಕ್ಷ ಡಾ.ಶಿವಾನಂದ ಕುಬಸದ ಮುಖಗವಸು ಕವನ ಸಂಕಲನ ಅವಲೋಕನ ಮಾಡಿದರು. ಧಾರವಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ, ವಕೀಲ ಬಸವಪ್ರಭು ಹೊಸಕೇರಿ ಪರಿಚಯಿಸಿದರು. ಸಂಗಮೇಶ ನೀಲಗುಂದ ಸ್ವಾಗತಿಸಿದರು. ಸಿ.ಎಲ್. ರೂಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts