More

    ಸಮಾಜ ತಿದ್ದುವ ಶಕ್ತಿ ಕಾವ್ಯಕ್ಕಿದೆ

    ಕಮತಗಿ : ಕಾವ್ಯಕ್ಕೆ ಸಮಾಜ ಮತ್ತು ಮನಸ್ಸನ್ನು ಒಂದುಗೂಡಿಸುವ ಶಕ್ತಿ ಇದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಸಾಹಿತಿ ಎಸ್. ಜಿ. ಕೋಟಿ ಹೇಳಿದರು.

    ಸಮೀಪದ ಶಿರೂರ ಪಟ್ಟಣದ ಶ್ರೀ ವೀರಶೈವ ಗ್ರಾಮೀಣ ವಿದ್ಯಾವರ್ಧಕ ಸಂಘ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ 15ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಕವಿಗಳ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕವಿತೆಗಳು ಮನಸ್ಸಿಗೆ ನೆಮ್ಮದಿ ತಂದುಕೊಡುತ್ತವೆ. ಜನರ ಅಭಿರುಚಿಗೆ ತಕ್ಕಂತೆ ಕವಿತೆಗಳ ಮುಖೇನ ಸಾಹಿತ್ಯ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕವನ ರಚನೆ ಸೇರಿ ಸಾಹಿತ್ಯದತ್ತ ಒಲವು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು.

    ಜಿಲ್ಲಾಧ್ಯಕ್ಷ ಗುರುಸ್ವಾಮಿ ಗಣಾಚಾರಿ ಕರೊನಾ ಹೈರಾಣ ಮತ್ತು ಮಕ್ಕಳ ಮಮತೆ, ಜಯಶ್ರೀ ಭಂಡಾರಿ ಅವರ ಚಿನ್ನದ ಮನಸ್ಸಿನ ಚಿಣ್ಣರು, ಡಾ. ಮೈನುದ್ದೀನ್ ರೇವಡಿಗಾರರ ಹೊಸಗನ್ನಡ ಗದಾಯುದ್ಧ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

    ಸಾಹಿತಿ ಶಿವಾನಂದ ಪೂಜಾರಿ ಹಾಗೂ ಪ್ರಿಯಾ ಕಟ್ಟಿ ಕೃತಿ ಪರಿಚಯಿಸಿ ಮಾತನಾಡಿ, ಕವಿಯು ಸಾಹಿತ್ಯ ರಚನೆಗೆ ತನ್ನದೆಯಾದ ಬದ್ಧತೆ ಅಳವಡಿಸಿಕೊಂಡು ರಚನೆಯಲ್ಲಿ ಸಮಾಜದ ಒಳ ದೃಷ್ಟಿಕೋನ ಹೊಂದಿರಬೇಕು ಎಂದರು.

    ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ವಾದಿರಾಜ ಕಡಿವಾಲ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬಾಲ್ಯದಿಂದಲೇ ಸಾಹಿತ್ಯದ ಆಸಕ್ತಿ ಬೆಳೆಸುವುದು ಇಂದಿನ ಕವಿಗಳ ಜವಾಬ್ದಾರಿಯಾಗಿದೆ ಎಂದರು.

    ಯುವ ಸಾಹಿತಿ ಗುರುರಾಜ ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯಾವ್ಯಸ್ಥೆಯ ಕಥೆಗಳನ್ನು ಹಾಗೂ ಪರಿಸರದ ಚೆಂದವನ್ನು ಕವಿಗಳು ಇಂದಿನ ಮಕ್ಕಳಿಗೆ ಕವಿತೆಗಳ ಮೂಲಕ ತಿಳಿಸಬೇಕು ಎಂದರು. ಸರ್ವಾಧ್ಯಕ್ಷ ಮೃತ್ಯುಂಜಯ ರಾಮದುರ್ಗ ಸಮಾರೋಪ ಭಾಷಣ ಮಾಡಿದರು.

    ಡಾ. ಮೀನಾಕ್ಷಿ ಮುಂಡಗನೂರ, ಎಸ್. ಎಸ್. ಮುಳ್ಳೂರ, ಸಾಹಿತ್ಯ ಸಮಾಗಮದ ಜಿಲ್ಲಾಧ್ಯಕ್ಷ ಗುರುಸ್ವಾಮಿ ಗಣಾಚಾರಿ, ತಾಲೂಕು ಅಧ್ಯಕ್ಷ ಎಸ್. ಆರ್. ಪಟ್ಟಣಶೆಟ್ಟಿ, ಬಿ.ವಿ. ಬಾರಡ್ಡಿ, ಎಸ್. ಬಿ. ಸಜ್ಜನ, ಮನೋಹರ ಪತ್ತಾರ, ಎಚ್. ಬಿ. ನಾಯ್ಕಲ್, ಲಕ್ಷ್ಮೀ ಹಿರೇಮಠ, ಸಿದ್ದಪ್ಪ ಹಳ್ಳೂರ, ಎಎಸ್‌ಐ ಬದಾಮಿ, ಬೀರಪ್ಪ ಹಳೇಮನಿ ಇತರರಿದ್ದರು.ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts