More

    ಸಮ ಸಮಾಜ ಚಿಂತನೆ ಅತ್ಯಂತ ಪ್ರಸ್ತುತ

    ವಿಜಯಪುರ: ಅಂಬೇಡ್ಕರ್​ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳ. ನಮ್ಮ ದೇಶದಲ್ಲಿ ಸಾಮರಸ್ಯ ಭಾವನೆ ಮೂಡಿಸಿ, ಭೇದ&ಭಾವ ತೊಲಗಿಸಿ ಸಮ ಸಮಾಜ ಕಟ್ಟಲು ಅಂಬೇಡ್ಕರ್​ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.

    ನಗರದ ಸೊಲ್ಲಾಪುರ ರಸ್ತೆಯ ಹನುಮಾನ ದೇವಸ್ಥಾನದಲ್ಲಿ ಜಿಲ್ಲಾ ಮೋಚಿಗಾರ ೇಮಾಭಿವೃದ್ಧಿ ಸಂದ ವತಿಯಿಂದ ಭಾನುವಾರ ನಡೆದ ಡಾ. ಬಿ ಆರ್​. ಅಂಬೇಡ್ಕರ್​ ಜಯಂತಿಯಲ್ಲಿ ಅವರು ಮಾತನಾಡಿದರು.

    ಅಂಬೇಡ್ಕರ್​ ತತ್ವಾದರ್ಶ ಇಂದಿಗೂ ಪ್ರಸ್ತುತ. ಶೋಷಿತರ, ಕಾರ್ಮಿಕರ, ಮಹಿಳೆಯರ ಮತ್ತು ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ನೆರವಾದರು. ಯುವ ಜನತೆ ಅಂಬೇಡ್ಕರ್​ ಅವರ ಆಶಯ ಅಳವಡಿಸಿಕೊಂಡು ಸಾಗಬೇಕೆಂದು ತಿಳಿಸಿದರು.

    ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಜಯಂತಿ ಉದ್ಘಾಟಿಸಿ, ಅಸಮಾನತೆ ಮತ್ತು ಅಸ್ಪೃಶ್ಯತೆ ತೊಡೆದು ಹಾಕುವಲ್ಲಿ ಅಂಬೇಡ್ಕರ್​ ಕೊಡುಗೆ ಅಪಾರ. ಅವರು ಅನುಭವಿಸಿದ ನೋವನ್ನು ಸಮಾಜ ಎಂದಿಗೂ ಅನುಭವಿಸಬಾರದೆಂಬ ದೂರದೃಷ್ಟಿಯಿಂದ ಸಂವಿಧಾನ ರಚಿಸಿದರು. ಅವರ ಬದುಕು, ಬರಹ, ಚಿಂತನೆ ಇಂದಿನ ಜನಾಂಗಕ್ಕೆ ಹೆಚ್ಚೆಚ್ಚು ತಿಳಿಸುವ ಕಾರ್ಯವಾಗಬೇಕಿದೆ ಎಂದರು.

    ಸಾಹಿತಿ ಎ.ಎಚ್​. ಕೊಳಮೇಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದ ಅಧ್ಯಕ್ಷ ಪ್ರಶಾಂತ ಕಿರಣಗಿ ಅಧ್ಯಕ್ಷತೆ ವಹಿಸಿದ್ದರು. ಎಸ್​.ವೈ. ದೊಡಮನಿ, ಗೌಡಪ್ಪ ಬಾಗೇವಾಡಿ, ಸಿದ್ದು ಕಲ್ಲೂರ, ಮೋತಿಲಾಲ ದೊಡಮನಿ, ಮಂಜುನಾಥ ಹೊನಕೇರಿ, ರಾಜು ಹೊನಕೇರಿ, ಜಗದೀಶ ಮನಗೂಳಿ, ರಾಚಪ್ಪ ದೊಡಮನಿ, ಸಂಜಯ ಹೊನಕೇರಿ, ಸುಭಾಸ ಹೊನಕೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts