More

    ಕವಿ ಮುದ್ದಣ 150ನೇ ವರ್ಷಾಚರಣೆ

    ಉಡುಪಿ: ಕನ್ನಡ ಸಾಹಿತ್ಯ ಲೋಕದಲ್ಲಿ ಯಕ್ಷಗಾನ ಪ್ರಸಂಗಕ್ಕೆ ಸಾಹಿತ್ಯಕ ಮೌಲ್ಯ ದೊರಕಿಸಿದ ಕೀರ್ತಿ ಕವಿ ಮುದ್ದಣ ಅವರಿಗೆ ಸಲ್ಲುತ್ತದೆ. ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣ ಪ್ರಸಂಗಗಳು ಸಾಹಿತ್ಯ ಸೊಗಸಿನ ಮಾದರಿ ಕೃತಿಗಳಾಗಿವೆ ಎಂದು ಹಿರಿಯ ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್. ಸಾಮಗ ಹೇಳಿದರು. ಪೂರ್ಣಪ್ರಜ್ಞ ಕಾಲೇಜು ಕನ್ನಡ ವಿಭಾಗ ಮತ್ತು ಕವಿ ಮುದ್ದಣ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಡೆದ ಮುದ್ದಣ-150 ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕರಾವಳಿಯ ತುಳು ಭಾಷೆ ಲಯವನ್ನು ಹಳೆಗನ್ನಡದ ಜತೆ ಸೇರಿಸಿ ಕಾವ್ಯಗಳನ್ನು ರಚಿಸಿರುವುದು ಮುದ್ದಣ ಅವರ ವಿಶೇಷತೆ. ಜತೆಗೆ ಸಾಹಿತ್ಯಕ್ಕೆ ಪೂರಕವಾಗಿ ಹೊಸ ಹೊಸ ಶಬ್ದಗಳನ್ನೇ ಅವರು ಟಂಕಿಸಿದ್ದಾರೆ. ರಾಮಾಶ್ವಮೇಧ ಅವರ ಮೇರು ಕೃತಿ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ದಾಂಪತ್ಯ ಜೀವನ ಪ್ರಲಾಪದಲ್ಲಿ ಕೊನೆಗೊಳ್ಳದೆ ಸಲ್ಲಾಪದಲ್ಲಿರಬೇಕು ಎಂಬುದಕ್ಕೆ ಮುದ್ದಣ-ಮನೋರಮೆಯರ ಸಲ್ಲಾಪ ಮಾದರಿಯಾಗಿದೆ. ಈಗಿನ ಕಾಲಕ್ಕೆ ಇದು ಹೆಚ್ಚು ಪ್ರಸ್ತುತವಾಗಿದೆ. ಮುದ್ದಣ ಕನ್ನಡ ಕವಿಯಾಗಿದ್ದರೂ ಇತರ ಭಾಷೆ ದ್ವೇಷಿಸಿಲ್ಲ. ಕಣ್ಣಿಗೆ ಕುರುಡುಪಟ್ಟಿ ಕಟ್ಟಿಕೊಂಡಿರುವ ಇಂದಿನ ಕವಿಗಳು ಇವರಿಂದ ಭಾಷಾ ಪ್ರೇಮವನ್ನು ಕಲಿತುಕೊಳ್ಳಬೇಕು. ಮುದ್ದಣ ಸಾಹಿತ್ಯ ಅಧ್ಯಯನದಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಲಾಭವೂ ಇದೆ ಎಂದರು. ಪಿಪಿಸಿ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ನಂದಳಿಕೆ ಬಾಲಚಂದ್ರ ರಾವ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಶ್ರೀಕಾಂತ್ ಸಿದ್ದಾಪುರ ಸ್ವಾಗತಿಸಿ, ಉಪನ್ಯಾಸಕ ಶಿವಕುಮಾರ ಎ. ನಿರೂಪಿಸಿದರು. ಡಾ. ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts