More

    VIDEO| ಪ್ರಧಾನಿ ಮೋದಿ ಗುಜರಾತ್​ ಪ್ರವಾಸ: ಕೆವಾಡಿಯದಲ್ಲಿ ಆರೋಗ್ಯ ವನ ಉದ್ಘಾಟನೆ

    ನವದೆಹಲಿ: ಎರಡು ದಿನಗಳ ಗುಜರಾತ್​ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಅ.30) ಬೆಳಗ್ಗೆ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ಇದಾದ ಬಳಿಕ ನಿನ್ನೆಯಷ್ಟೇ ವಿಧಿವಶರಾದ ಗುಜರಾತ್​ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಕೇಶುಭಾಯ್​ ಪಟೇಲ್​ ಅವರ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಿದರು.

    ಇದನ್ನೂ ಓದಿ: ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ: ಮಾಸ್ಕ್​ ಇಲ್ಲ… ಅಂತರವಿಲ್ಲ..?

    ಬಳಿಕ ನರ್ಮದಾ ಜಿಲ್ಲೆ ಕೆವಾಡಿಯಾಗೆ ಆಗಮಿಸಿದ ಪ್ರಧಾನಿ ಮೋದಿ, ಜಂಗಲ್​ ಸಫಾರಿ ಖ್ಯಾತಿಯ ಸರ್ದಾರ್​ ಪಟೇಲ್​ ಜೂಲಾಜಿಕಲ್​ ಪಾರ್ಕ್​ ಉದ್ಘಾಟಿಸಿದರು. ಈ ಪಾರ್ಕ್​ ಅನ್ನು 182 ಮೀಟರ್​ ಉದ್ದದ ವಲ್ಲಭ್‌ಭಾಯಿ ಪಟೇಲ್ ಏಕತಾ ಪ್ರತಿಮೆ ಬಳಿ ನಿರ್ಮಿಸಲಾಗಿದ್ದು, ಭಾರತದ ಉಕ್ಕಿನ ಮನುಷ್ಯನಿಗೆ ಸಮರ್ಪಿಸಲಾಗಿದೆ. ಇನ್ನು ಜೂಲಾಜಿಕಲ್​ ಪಾರ್ಕ್​ ಪ್ರಪಂಚದಾದ್ಯಂತ ಇರುವ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಸಂಗ್ರಹವನ್ನು ಹೊಂದಿದೆ.

    ಇದಾದ ಬಳಿಕ ಆರೋಗ್ಯ ವನ ಉದ್ಘಾಟಿಸಿದ ಪ್ರಧಾನಿ ಮೋದಿ ವನವೆಲ್ಲ ಸುತ್ತಾಡಿದರು. ಆರೋಗ್ಯ ವನದಲ್ಲಿ ನೂರಾರು ವೈದ್ಯಕೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳು ಇದ್ದು, ಅದರ ಬಳಕೆ ಮತ್ತು ಪ್ರಯೋಜನದ ಬಗ್ಗೆಯು ಮಾಹಿತಿ ನೀಡಲಾಗಿದೆ.

    ಇದನ್ನೂ ಓದಿ: ಹೈಸ್ಕೂಲ್​ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಧರ್ಮಬೋಧಕ ಅರೆಸ್ಟ್​..!

    ಪ್ರಧಾನಿ ಮೋದಿ ಭೇಟಿ ವೇಳೆ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಮತ್ತು ರಾಜ್ಯಪಾಲ ಆಚಾರ್ಯ ದೇವ್ರತ್ ಉಪಸ್ಥಿತರಿದ್ದರು. (ಏಜೆನ್ಸೀಸ್​)

    ಬ್ಯಾನ್​ ಆದ್ರೂ ಸಿಗ್ತಿದ್ದ ಪಬ್​ಜಿಗೆ ಫುಲ್​ಸ್ಟಾಪ್​: ಇಂದಿನಿಂದ ಭಾರತದಲ್ಲಿ ನೋ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts