More

    ಸಾತ್ವಿಕ ಆಹಾರ, ತೆಂಗಿನ ನೀರು…ಪ್ರಾಣ ಪ್ರತಿಷ್ಠೆಗಾಗಿ ಕಠಿಣ ವ್ರತ ಆಚರಿಸುತ್ತಿರುವ ಪ್ರಧಾನಿ ಮೋದಿ

    ಅಯೋಧ್ಯೆ: ರಾಮಮಂದಿರದ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಕಠಿಣ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ತಮ್ಮ 11 ದಿನಗಳ ಆಚರಣೆಯಲ್ಲಿ ಪ್ರಧಾನಿ ನೆಲದ ಮೇಲೆ ಮಲಗುವುದು ಸಾತ್ವಿಕ ಆಹಾರ ಸೇವನೆ ಮಾತ್ರ ಮಾಡುತ್ತಿದ್ದಾರೆ. ಇದಲ್ಲದೆ, ಈ ಸಮಯದಲ್ಲಿ ಅವರು ದಕ್ಷಿಣ ಭಾರತದ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮವನ್ನು ಅದ್ಧೂರಿ ಮತ್ತು ಐತಿಹಾಸಿಕವಾಗಿಸಲು, ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೇವಾಲಯಗಳಲ್ಲಿ ಸುಂದರಕಾಂಡ ಪಠಣದಿಂದ ಹಿಡಿದು ಕೀರ್ತನವನ್ನು ಸಂಜೆಯವರೆಗೆ ಆಯೋಜಿಸಲಾಗುತ್ತಿದೆ. ದೇಶಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ರಾಮಮಂದಿರದ ಅವಶೇಷಗಳನ್ನು ಪ್ರತಿ ಮನೆಗೂ ಹಂಚಲಾಗಿದೆ.

    ಸದ್ಯ ಮೋದಿ ಅವರ ಆಚರಣೆಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದ್ದು, ಈ ಅವಧಿಯಲ್ಲಿ ಪ್ರಧಾನಿ ಯಾವ ನಿಯಮಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡೋಣ…

    ರಾಮಮಂದಿರ ಪ್ರಾಣ ಪ್ರತಿಷ್ಠೆಗೂ ಮುನ್ನ ಮೋದಿ ಅವರು ತಮ್ಮ ಆಚರಣೆಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಪ್ರಧಾನಿ ಕಚೇರಿ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮೋದಿ ನೆಲದ ಮೇಲೆ ಮಲಗುತ್ತಾರೆ. ಸಾತ್ವಿಕ ಡಯಟ್ ಅನುಸರಿಸುತ್ತಿದ್ದಾರೆ. ತೆಂಗಿನ ನೀರು ಮಾತ್ರ ಕುಡಿಯುತ್ತಿದ್ದಾರೆ. ಇದಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಸ್ವತಃ ಧಾರ್ಮಿಕ ಪುಸ್ತಕಗಳನ್ನು ಪಠಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ, ಅವರು ನಾಸಿಕ್‌ನ ಪಂಚವಟಿಗೆ ಭೇಟಿ ನೀಡಿದ್ದರು. ಪಂಚವಟಿಯಲ್ಲಿ ಶ್ರೀರಾಮನು ತಾಯಿ ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸದ ಸಮಯದಲ್ಲಿ ತಂಗಿದ್ದರು.

    ಮೋದಿ ಅವರು ಕೇರಳದ ಗುರುವಾಯೂರ್ ದೇವಾಲಯ ಮತ್ತು ಆಂಧ್ರಪ್ರದೇಶದ ವೀರಭದ್ರ ದೇವಾಲಯಕ್ಕೂ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ದಕ್ಷಿಣ ಭಾರತದ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಶನಿವಾರ ಪ್ರಧಾನಿಯವರು ತಿರುಚಿರಾಪಳ್ಳಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಅವರು ವಿವಿಧ ವಿದ್ವಾಂಸರು ರಾಮಾಯಣದ ಶ್ಲೋಕಗಳನ್ನು ಪಠಿಸುವುದನ್ನು ಕೇಳುತ್ತಾ ಸಮಯ ಕಳೆಯುತ್ತಾರೆ. ಇದಲ್ಲದೆ, ರಾಮೇಶ್ವರಂಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬೆಂಗಾಲಿ, ಮೈಥಿಲಿ ಮತ್ತು ಗುಜರಾತಿ ಭಾಷೆಗಳಲ್ಲಿ ರಾಮಾಯಣವನ್ನು ಕೇಳುವ ಪ್ರೇಕ್ಷಕರ ಭಾಗವಾಗಲಿದ್ದಾರೆ.

    ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮ ಮತ್ತು ಪಟ್ಟಣ ಮಟ್ಟದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೇರಪ್ರಸಾರ ಮಾಡಲು ಎಲ್‌ಸಿಡಿ ಪರದೆ ಸೇರಿದಂತೆ ಎಲ್ಲ ವ್ಯವಸ್ಥೆಗಳಿಗೆ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ. ಇದಲ್ಲದೆ, ಅಯೋಧ್ಯೆಯಿಂದ ದೂರದ ಹಳ್ಳಿಗಳಿಗೆ ಪ್ರಸಾದವನ್ನು ತಲುಪಿಸಲು ಸಂಪೂರ್ಣ ತಂಡವನ್ನು ಸಿದ್ಧಪಡಿಸಲಾಗಿದೆ. ದೇವಸ್ಥಾನಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಸುಂದರಕಾಂಡ ಪಠಣ, ರಾಮ ಭಜನೆ ಮತ್ತು ಕೀರ್ತನೆಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. 

    ಜನವರಿ 22 ರಂದು ಅರ್ಧ ದಿನ ರಜೆ ಘೋಷಿಸಿದ ಕೇಂದ್ರ ಸರ್ಕಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts