More

    7 ವರ್ಷದ ಪುಟ್ಟ ಬಾಲೆಯನ್ನು ಗೌರವಿಸಿದ ಯುಕೆ ಪ್ರಧಾನಿ ರಿಷಿ ಸುನಕ್

    ವಾಷಿಂಗ್​​ಟನ್​​​​: 7 ವರ್ಷ ವಯಸ್ಸಿನ ಪುಟಾಣಿ ಮೋಕ್ಷ ರಾಯ್​​​​​​​ರನ್ನು ಜುಲೈ 13 ರಂದು ಬ್ರಿಟಿಷ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ ನೀಡಿ ಗೌರವಿಸಿದರು. ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ಸ್​​​​​ (UN SDGs)ಗಾಗಿ ಯುಕೆ ಉಪ ಪ್ರಧಾನ ಮಂತ್ರಿ ಶ್ರೀ ಆಲಿವರ್ ಡೌಡೆನ್ ಅವರು ಹೃತ್ಪೂರ್ವಕವಾಗಿ ಶ್ಲಾಘಿಸಿದರು.

    ಮೋಕ್ಷಾ ಅವರು ಕೇವಲ 3 ವರ್ಷ ವಯಸ್ಸಿನಲ್ಲೇ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪ್ರತಿಪಾದಿಸಿದ ವಿಶ್ವದ ಅತ್ಯಂತ ಕಿರಿಯ ವಕೀಲರಾಗಿದ್ದಾರೆ. 5 ನೇ ವಯಸ್ಸಿನಲ್ಲಿಯೇ ಮೋಕ್ಷ ರಾಯ್​​​​​​​ ಎಲ್ಲಾ 193 ವಿಶ್ವ ನಾಯಕರಿಗೆ ಪತ್ರಗಳನ್ನು ಬರೆದು, UN SDG ಗಳನ್ನು ತಮ್ಮ ರಾಷ್ಟ್ರೀಯ ಪಠ್ಯಕ್ರಮದಲ್ಲಿ ಪರಿಚಯಿಸಲು ಒತ್ತಾಯಿಸಿದರು. ವಿಶ್ವ ನಾಯಕರು ಮೋಕ್ಷಾಳನ್ನು ಶ್ಲಾಘಿಸಿ ಉತ್ತರಿಸಿದರು. ಜೊತೆಗೆ ಅವರ ವಿನಂತಿಯನ್ನು ಕಾರ್ಯಗತಗೊಳಿಸುವ ಭರವಸೆ ನೀಡಿದರು.

    ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ಮೋಕ್ಷ ಹಾಗೂ ಅವರ ಪೋಷಕರಾದ ಡಾ. ರಾಗಿಣಿ ಜಿ ರಾಯ್ ಮತ್ತು ಡಾ. ಸೌರವ್ ರಾಯ್ ಸಂತೋಷ ವ್ಯಕ್ತಪಡಿಸಿದ್ದಾರೆ.

    ದಕ್ಷಿಣದ ನಟಿ ಬಾಲಿವುಡ್‌ಗೆ; ಸಮಂತಾ ಪಾತ್ರದಲ್ಲಿ ಸೌತ್ ಟಾಪ್ ಹೀರೋಯಿನ್​​​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts