More

    video/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು… ಇದು ‘ನಮೋ’ ಅಮೂಲ್ಯ ಕ್ಷಣಗಳು!

    ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೂ ರಾಷ್ಟ್ರಪಕ್ಷಿ ನವಿಲಿಗೂ ಅವಿನಾಭಾವ ಸಂಬಂಧವಿದೆ. ಸ್ವತಃ ಪ್ರಧಾನಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಭಾನುವಾರ ಪೋಸ್ಟ್ ಮಾಡಿರವ ವಿಡಿಯೋ ಇದಕ್ಕೆ ಸಾಕ್ಷಿ.

    video/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು... ಇದು 'ನಮೋ' ಅಮೂಲ್ಯ ಕ್ಷಣಗಳು!“ಅಮೂಲ್ಯ ಕ್ಷಣಗಳು” ಎಂಬ ಶೀರ್ಷಿಕೆ ಮತ್ತು ಹಿಂದಿಯಲ್ಲಿ ಬರೆದ ಕವಿತೆಯೊಂದಿಗೆ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿಡಿಯೋದಲ್ಲಿ ಪ್ರಧಾನಿ ಮೋದಿ ತಮ್ಮ ನಿವಾಸದ ಹೊರಗಡೆ ಮತ್ತು ಒಳಗಡೆ ನವಿಲುಗಳಿಗೆ ಆಹಾರ ಹಾಕುತ್ತಿರುವ, ಬೆಳಗ್ಗೆ ವಾಕಿಂಗ್‌ ಮಾಡುವ ವೇಳೆ ನವಿಲು ಗರಿಬಿಚ್ಚಿ ಹೆಜ್ಜೆ ಹಾಕುವ, ನವಿಲುಗಳಿಗೆ ಪ್ರಧಾನಿ ಅವರು ಆಹಾರ ನೀಡುತ್ತಿರುವ ದೃಶ್ಯವಿದೆ. ಅಲ್ಲದೆ ಪ್ರಧಾನಿ ಪುಸ್ತಕ ಓದುತ್ತಿದ್ದಾಗ ಅವರ ಪಕ್ಕದಲ್ಲೇ ನವಿಲು ಆಹಾರ ತಿನ್ನುತ್ತಿರುವ ಫೋಟೋ ಕೂಡ ಇದೆ.

    ಇದನ್ನೂ ಓದಿರಿ ‘ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ…’

    ಬಿಡುವಿನ ಸಮಯದಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರಪಕ್ಷಿ ಜೊತೆ ಕಾಲ ಕಳೆಯುವ ಮೂಲಕ ವಿಶ್ರಾಂತಿ ಪಡೆಯುವ ಈ ದೃಶ್ಯವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮೋದಿಯವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ 1 ನಿಮಿಷ 47 ಸೆಕೆಂಡ್​ ಇದೆ. ಇದರ ಜತೆಗೆ ಪ್ರಧಾನಿ ಅವರು ಹಿಂದಿ ಕವಿತೆಯೊಂದನ್ನೂ ಶೇರ್​ ಮಾಡಿದ್ದಾರೆ. ಈ ಕವಿತೆಯು ನವಿಲುಗಳು ಮತ್ತು ಅವುಗಳ ಸೌಂದರ್ಯ ಕುರಿತದ್ದಾಗಿದೆ.

    ಪ್ರತಿ ದಿನ ಪ್ರಧಾನಿ ಮೋದಿ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಅವರ ಜತೆಯಲ್ಲೂ ನವಿಲುಗಳು ಹೆಜ್ಜೆ ಹಾಕುತ್ತವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

    ನರೇಂದ್ರ ಮೋದಿಯ ಅಮೂಲ್ಯ ಕ್ಷಣಗಳಿವು…

    ನರೇಂದ್ರ ಮೋದಿಯ ಅಮೂಲ್ಯ ಕ್ಷಣಗಳಿವು…ಇದು ಪ್ರಧಾನಿ ನರೇಂದ್ರ ಮೋದಿ ಅವರ "ಅಮೂಲ್ಯ ಕ್ಷಣಗಳು". ಬಿಡುವಿನ ಸಮಯದಲ್ಲಿ ರಾಷ್ಟ್ರಪಕ್ಷಿ ಜೊತೆ ಮೋದಿ ಕಾಲ ಕಳೆಯುತ್ತ ವಿಶ್ರಾಂತಿ ಪಡೆಯುವ ವಿಡಿಯೋ ತುಣಕನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ 'ಅಮೂಲ್ಯ ಕ್ಷಣಗಳಿವು' ಎಂಬ ಶೀರ್ಷಿಕೆಯಡಿ ಶೇರ್​ ಮಾಡಿದ್ದಾರೆ. #PMModi #TimeSpent #Peacock https://bit.ly/2YpDVQD

    Posted by Vijayavani on Sunday, August 23, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts