More

    ದೇಶಾದ್ಯಂತ ದೀಪ ಹಚ್ಚಿ ಕರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ ದೇಶಪ್ರೇಮಿಗಳು: ದೀಪ ಬೆಳಗಿದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಮಹಾಮಾರಿ ಕರೊನಾ ವಿರುದ್ಧದ ಹೋರಾಟದಲ್ಲಿ ಯಾರು ಏಕಾಂಗಿಯಲ್ಲ. ನಾವೆಲ್ಲರೂ ಒಂದೇ ಎಂದು ಸಾರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಸಂಕಲ್ಪಕ್ಕೆ ಇಡೀ ರಾಷ್ಟ್ರದ ಜನತೆ ಭರ್ಜರಿ ಬೆಂಬಲ ನೀಡಿದರು. ಇಡೀ ರಾಷ್ಟ್ರವೇ ದೀಪದ ಬೆಳಕಿನಲ್ಲಿ ಕರೊನಾ ಅಂಧಕಾರವನ್ನು ತೊಲಗಿಸುವ ಪ್ರಧಾನಿ ಕರೆಗೆ ಓಗೊಟ್ಟರು.

    ಕೆಲವರ ವ್ಯಂಗ್ಯ, ಟೀಕೆ-ಟಿಪ್ಪಣಿಗಳು ನಡುವೆಯೂ ಪ್ರಧಾನಿ ಮಾತಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಜನತೆ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿದರು. ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಹಾಗೂ ಎಣ್ಣೆ ದೀಪಗಳನ್ನು ಹಿಡಿದು ಮನೆಯಿಂದ ಆಚೆ ಬಂದು ಬೆಳಕು ಉಕ್ಕಿಸಿ, ಏಕತೆಯ ಮಂತ್ರ ಸಾರಿದರು. ಮನೆಯ ಮಹಡಿಗಳ ಮೇಲೆ ಜನರು ದೀಪ ಕ್ರಾಂತಿ ಮಾಡಿದರು. ಇಡೀ ಭಾರತವೇ ಬೆಳಕಿನ ಚಿತ್ತಾರದಲ್ಲಿ ಮಿಂದೆದ್ದಿತು.

    ದೀಪ ಬೆಳಗಿದ ಪ್ರಧಾನಿ ನರೇಂದ್ರ ಮೋದಿ

    ದೀಪ ಬೆಳಗಿಸಿದ ಸಂಕೇಶ್ವರ ಕುಟುಂಬ
    ಪ್ರಧಾನಿ ನರೇಂದ್ರ ಮೋದಿ ಅವರ ದೀಪ ಸಂಕಲ್ಪ ಮನವಿಗೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ್ ಕುಟುಂಬ ಸ್ಪಂದಿಸಿತು. ನವೀನ ಪಾರ್ಕ್ ನಿವಾಸದಲ್ಲಿ ಮಣ್ಣಿನ ಹಣತೆಯ ದೀಪವನ್ನು ಹಚ್ಚಿ, ಕರೊನಾ ವಿರುದ್ಧ ಘೋಷಣೆ ಮೊಳಗಿಸಿತು.

    ವಿಜಯ ಸಂಕೇಶ್ವರ್ ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ್, ಪುತ್ರ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ​ ಆನಂದ ಸಂಕೇಶ್ವರ್, ಶ್ರೀಮತಿ ವಾಣಿ ಸಂಕೇಶ್ವರ್, ಪುತ್ರ ಶಿವಾ, ಪುತ್ರಿಯರಾದ ಛಾಯಾ, ವೈಷ್ಣವಿ ದೀಪ ಬೆಳಗಲು ಸಾಥ್​ ನೀಡಿದರು. ಡಾ. ವಿಜಯ ಸಂಕೇಶ್ವರ ಪುತ್ರಿ ಆರತಿ ಪಾಟೀಲ್ ಕೂಡ ಭಾಗಿಯಾಗಿದ್ದರು.

    ಪ್ರಧಾನಿ ಮೋದಿ ತಾಯಿ ಹೀರಾಬೆನ್​ ಅವರು ಮಗನ ಕರೆಗೆ ಓಗೊಟ್ಟು ಗುಜರಾತಿನ ತಮ್ಮ ಮನೆಯಲ್ಲಿ ಲೈಟ್ಸ್​ ಆಫ್​ ಮಾಡಿ ದೀಪ ಬೆಳಗಿದರು.

    ದೇಶಾದ್ಯಂತ ದೀಪ ಹಚ್ಚಿ ಕರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ ದೇಶಪ್ರೇಮಿಗಳು: ದೀಪ ಬೆಳಗಿದ ಪ್ರಧಾನಿ ನರೇಂದ್ರ ಮೋದಿ
    ಮೈಸೂರು ಶಾಖಾ ಮಠದ ಆವರಣದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ದೀಪ ಬೆಳಗಿದ ಕ್ಷಣ

    ಮನೆಯಲ್ಲಿ ಹಣತೆ ಹಚ್ಚಿ ದೀಪ ಸಂಕಲ್ಪ ಪೂರೈಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

    ಪ್ರಧಾನಿ ಮೋದಿ ಕರೆಗೆ ಆಸ್ಟ್ರೇಲಿಯಾದ ಸಿಡ್ನಿಯಿಂದ ದೀಪ ಬೆಳಗುವುದರ ಮೂಲಕ ಬೆಂಬಲ ಸೂಚಿಸಿದ ಕನ್ನಡಿಗರು

    ತಮಿಳುನಾಡಿನ ಚೆನ್ನೈನ ರೆಸಿಡೆಂಟ್ಸ್​ ಆಫ್​ ಸೋಸೈಟಿ ಅಪಾರ್ಟ್​ಮೆಂಟ್​ನಲ್ಲಿ ಕಂಡುಬಂದು ಬೆಳಕಿನ ಚಿತ್ತಾರ.

    ಗುಜರಾತಿನ ಅಹಮಬಾದ್​ನಲ್ಲಿ “ಗೋ ಕರೊನಾ” ಎಂಬ ಘೋಷಣೆಯೊಂದಿಗೆ ವಿನೂತನವಾಗಿ ಗೋಚರಿಸಿದ ದೀಪದ ಬೆಳಕು.

    ಏಪ್ರಿಲ್ 3ರ ಬೆಳಗ್ಗೆ 9 ಗಂಟೆಗೆ ವಿಡಿಯೋ ಸಂದೇಶದ ಮೂಲಕ ಏಪ್ರಿಲ್​​ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳನ್ನು ಮೀಸಲಿಡಿ. ಆ ಒಂಭತ್ತು ನಿಮಿಷ ನಿಮ್ಮ ಮನೆಯ ಲೈಟ್​ಗಳನ್ನು ಆಫ್​ ಮಾಡಿ ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಅಥವಾ ಎಣ್ಣೆ ದೀಪಗಳನ್ನು ಬೆಳಗಿಸಿ ಎಂದು ಪ್ರಧಾನಿ ಕರೆ ನೀಡಿದ್ದರು.

    ಕರೊನಾದಿಂದ ಎದುರಾಗಿರುವ ಸಂಕಷ್ಟದಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಹೊಸ ಬೆಳಕು ಮೂಡಿಸುವ ಅಗತ್ಯವಿದೆ. ಹೀಗಾಗಿ ಕರೊನಾ ಅಂಧಕಾರವನ್ನು ಹೋಗಲಾಡಿಸಲು ದೀಪ ಬೆಳಗಿಸಿ, ಈ ಮೂಲಕ ಕರೊನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಾವ್ಯಾರೂ ಏಕಾಂಗಿಯಲ್ಲ. ಸಂಕಷ್ಟದ ಸಮಯದಲ್ಲೂ ನಾವೆಲ್ಲ ಜತೆಗಿದ್ದೇವೆ ಎಂಬ ಸಂದೇಶವನ್ನು ಸಾರೋಣ ಎಂದು ಪ್ರಧಾನಿ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts