More

    ಪ್ರಧಾನಿ ಮೋದಿಯಿಂದ ಮಂಗಳೂರು-ಕೊಚ್ಚಿನ್ ಸಿಎನ್​ಜಿ ಪೈಪ್​ಲೈನ್ ಲೋಕಾರ್ಪಣೆ

    ಮಂಗಳೂರು: ಮಂಗಳೂರು ಹಾಗೂ ಕೊಚ್ಚಿನ್ ನಡುವಿನ ಸಿಎನ್​ಜಿ ಪೈಪ್​ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜ.5) ಲೋಕಾರ್ಪಣೆಗೊಳಿಸಿದರು.

    ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ ಮೂಲಕ ಸಿಎನ್​ಜಿ ಪೈಪ್​ಲೈನ್​ ಅನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, 450 ಕಿ.ಮೀ ಉದ್ದ ಪೈಪ್​ಲೈನ್​ ಅನ್ನು ರಾಷ್ಟ್ರಕ್ಕೆ ಅರ್ಪಿಸುವುದು ನನಗೆ ಒದಗಿದ ಗೌರವ ಎಂದರು. ಭಾರತೀಯರ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಕೇರಳ ಜನರಿಗೆ ಮಹತ್ವದ ದಿನ ಎಂದರು.

    ಇದನ್ನೂ ಓದಿ: ಕ್ಲಾಸ್​ಮೇಟ್​ ನಂಬಿ ಚಾಟಿಂಗ್​ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್​ ಶಾಕ್​!

    ಅನೇಕ ವರ್ಷಗಳ ಹಿಂದೆ ಭಾರತದ ಬೆಳವಣಿಗೆಯ ದರದ ಹಿಂದಿನ ಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಭಾರತ ಇಂದು ನಿಧಾನಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ವೇಗ, ಪ್ರಮಾಣ ಮತ್ತು ಅಭಿವೃದ್ಧಿ ವ್ಯಾಪ್ತಿಯನ್ನು ಹೆಚ್ಚಿಕೊಂಡಿದೆ ಎಂದು ಪ್ರಧಾನಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪಿಣರಾಯಿ ವಿಜಯನ್, ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

    ಇದನ್ನೂ ಓದಿ: ಗೆಲ್ಲುತ್ತಿದ್ದಂತೆ ತನ್ನ ದುರ್ಬುದ್ಧಿ ತೋರಿದ ಗ್ರಾಪಂ ಸದಸ್ಯ: ಮಹಿಳೆಗೆ ಇಟ್ಟ ಬೇಡಿಕೆ ಮನಕುಲ ತಲೆತಗ್ಗಿಸುವಂಥದ್ದು!

    ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್​ ಗ್ರೀನ್​ ಸಿಗ್ನಲ್​

    ‘ಭಗವದ್ಗೀತೆ ಹಿಡಿದವರಿಗೆ ವೋಟ್​ ಹಾಕ್ತೀರೊ, ಬೈಬಲ್​ ಹಿಡಿದವರಿಗೊ? ಆಯ್ಕೆ ನಿಮಗೆ ಬಿಟ್ಟಿದ್ದು…’

    ಹುಟ್ಟುಹಬ್ಬಕ್ಕೆಂದು ದುಬೈನಿಂದ ಬಂದು ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡ ಸಲ್ಮಾನ್​ ಸಹೋದರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts