More

    ರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಜಾರಿ ಮಾಡಲ್ಲ: ಪ್ರಧಾನಿ ಮೋದಿ

    ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

    ಮಂಗಳವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಕರೊನಾ ವಿರುದ್ಧ ನಾವು ಹೋರಾಡುತ್ತಲೇ ಅನ್​ಲಾಕ್​ ಎರಡನೇ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿದೆ. ಸರಿಯಾದ ಸಮಯಕ್ಕೆ ಲಾಕ್​ಡೌನ್​ ಮಾಡಿದ್ದೇವೆ. ಈ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇವೆ. ನಾವೆಲ್ಲರೂ ಲಾಕ್​ಡೌನ್​ ನಿಯಮ ಪಾಲಿಸಿದ್ದೇವೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್​ ಬಳಸಿದ್ದೇವೆ. ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗ್ರತೆ ತುಂಬಾ ಅವಶ್ಯಕವಾಗಿದೆ. ಕಂಟೈನ್ಮೆಂಟ್​ ಝೋನ್​ಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.

    ಇದನ್ನೂ ಓದಿ: ನವೆಂಬರ್​ವರೆಗೂ ಬಡವರಿಗೆ ಉಚಿತ ಪಡಿತರ ವಿತರಣೆ: ಪ್ರಧಾನಿ ಮೋದಿ ಘೋಷಣೆ

    ಕರೊನಾ ನಿಯಮಗಳಿಗಿಂತ ಯಾರೂ ಅತೀತರಲ್ಲ. ಸಾಮಾನ್ಯನಿಂದ ಪ್ರಧಾನಿಯವರೆಗೂ ಒಂದೇ ನಿಯಮ ಅನ್ವಯವಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ತಿಳುವಳಿಕೆ ಹೇಳಬೇಕು. ಲಾಕ್​ಡೌನ್​ ನಿಯಮಗಳಿಂದ ಯಾರೂ ಹೊರತಾಗಿಲ್ಲ ಎಂದರು.

    ಲಾಕ್​ಡೌನ್​ ಬೆನ್ನಲ್ಲೇ ಗರೀಬ್​ ಕಲ್ಯಾಣ ಯೋಜನೆ ಜಾರಿಗೊಳಿಸಲಾಯಿತು. 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಲಾಗಿದೆ. ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂ. ಜಮೆಯಾಗಿದೆ. 9 ಸಾವಿರಕ್ಕೂ ಹೆಚ್ಚು ರೈತರ ಖಾತೆಗಳಿಗೆ ಕಿಸಾನ್​ ಸಮ್ಮಾನ್​ ನಿಧಿ ಹಣವನ್ನು ಜಮೆ ಮಾಡಲಾಗಿದೆ. ಬಡವರ ಖಾತೆಗಳಿಗೆ 31 ಸಾವಿರ ಕೋಟಿ ರೂ. ಜಮೆಯಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ವಿಶ್ವದ ಅತಿಎತ್ತರದ ರಣಾಂಗಣ ಪ್ರವೇಶಿಸಿದ ಭೀಷ್ಮ, ಭಾರತದ ಆಕ್ರಮಣಕಾರಿ ಮನೋಭಾವ ಪ್ರದರ್ಶನ

    ಇದೇ ವೇಳೆ ಲಾಕ್​ಡೌನ್​ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮತ್ತೆ ಲಾಕ್​ಡೌನ್​ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದರು.

    ಟಿಕ್‌ಟಾಕ್‌ ಮಾಡಿ ಲಕ್ಷ ಗೆಲ್ಲಿ! ಡಿಕೆಶಿ ಪರ ನಲ್‌ಪಾಡ್‌ ಘೋಷಣೆ- ನೆಟ್ಟಿಗರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts