More

    ಚೀನಾದ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆ ರದ್ದುಗೊಳಿಸಿದ ಪ್ರಧಾನಿ ಮೋದಿ

    ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆ, ಪ್ರಧಾನಿ ನರೇಂದ್ರ ಮೋದಿ ಚೀನಾದ ಸಾಮಾಜಿಕ ಜಾಲತಾಣ ವೈಬೋದಲ್ಲಿ ಇದ್ದ ತಮ್ಮ ಖಾತೆಯನ್ನು ರದ್ದುಗೊಳಿಸಿದ್ದಾರೆ.

    ಡೇಟಾ ಭದ್ರತೆಯ ನೆಪದಲ್ಲಿ ಟಿಕ್​ಟಾಕ್​, ವೈಬೋ ಮತ್ತು ಕ್ಯಾಮ್​ಸ್ಕ್ಯಾನರ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧಿಸಿದ ಎರಡು ದಿನಗಳ ನಂತರದಲ್ಲಿ ಪ್ರಧಾನಿ ಮೋದಿ ಈ ಕ್ರಮ ಕೈಗೊಂಡಿದ್ದಾರೆ.

    ಚೀನಾ ಮೂಲದ ಆ್ಯಪ್​ಗಳನ್ನು ನಿಷೇಧಿಸುವ ಕುರಿತು ನಿರ್ಧಾರ ಕೈಗೊಳ್ಳುತ್ತಿರುವಂತೆ ಪ್ರಧಾನಿ ಮೋದಿ ತಾವು ಕೆಲವು ವರ್ಷಗಳ ಹಿಂದೆ ಸೇರ್ಪಡೆಗೊಂಡಿದ್ದ ವೈಬೋ ಸಾಮಾಜಿಕ ಜಾಲತಾಣದಿಂದ ಹೊರಬರುವುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ಬಳಕೆದಾರರ ಅನುಮೋದಿತ ಖಾತೆ ಅದಾಗಿದ್ದರಿಂದ, ಅಧಿಕೃತ ಪ್ರಕ್ರಿಯೆ ಮೂಲಕ ಖಾತೆಯನ್ನು ರದ್ದುಗೊಳಿಸಬೇಕಾಗಿತ್ತು. ಹಾಗಾಗಿ ಪ್ರಧಾನಿ ಮೋದಿ ಅವರ ವೈಬೋ ಖಾತೆಯನ್ನು ರದ್ದುಗೊಳಿಸುವಲ್ಲಿ ಸ್ವಲ್ಪ ವಿಳಂಬವಾಯಿತು ಎಂದು ಹೇಳಿವೆ.

    ಅತಿ ಗಣ್ಯವ್ಯಕ್ತಿಗಳ ಖಾತೆಯನ್ನು ರದ್ದುಗೊಳಿಸುವ ವಿಷಯವಾಗಿ ವೈಬೋ ತುಂಬಾ ಜಟಿಲವಾದ ಪ್ರಕ್ರಿಯೆಯನ್ನು ಹೊಂದಿದೆ. ಹಾಗಾಗಿ ಅಧಿಕೃತ ಮಾರ್ಗದಲ್ಲೇ ಖಾತೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು. ಖಾತೆ ರದ್ದುಗೊಳಿಸಲು ಅನುಮತಿ ನೀಡುವಲ್ಲಿ ವೈಬೋ ವತಿಯಿಂದ ಒಂದಷ್ಟು ವಿಳಂಬವೂ ಆಯಿತು ಎಂದು ತಿಳಿಸಿವೆ.

    ಪ್ರಧಾನಿಯ ಅವರ ವೈಬೋ ಖಾತೆಯಲ್ಲಿ ಒಟ್ಟು 115 ಪೋಸ್ಟ್​ಗಳಿದ್ದವು. ಅವನ್ನು ಸ್ವತಃ ನಾವೇ ಡಿಲೀಟ್​ ಮಾಡಲು ನಿರ್ಧರಿಸಿದೆವು. ಅಲ್ಲಿಗೂ 113 ಸಂದೇಶಗಳನ್ನು ಮಾತ್ರ ರದ್ದುಗೊಳಿಸಲು ಸಾಧ್ಯವಾಯಿತು. ಚೀನಾ ಅಧ್ಯಕ್ಷ ಕ್ಸಿನ್​ ಜಿನ್​ಪಿಂಗ್​ ಜತೆ ತಾವಿದ್ದ ಎರಡು ಫೋಟೋಗಳನ್ನು ಆ ಖಾತೆಯಲ್ಲಿ ಪ್ರಧಾನಿ ಹಂಚಿಕೊಂಡಿದ್ದರು. ಅವನ್ನು ಮಾತ್ರ ಡಿಲೀಟ್​ ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ.

    ಇದನ್ನೂ ಓದಿ: ಚೀನಾ ಕಂಪನಿಗಳನ್ನು ಪ್ರತಿನಿಧಿಸುವುದಿಲ್ಲ…ಕೇಂದ್ರದ ವಿರುದ್ಧ ಆಕ್ಷೇಪಣೆ ಇಲ್ಲ ಎಂದ ಮಾಜಿ ಅಟಾರ್ನಿ ಜನರಲ್​ ಮುಕುಲ್​ ರೋಹಟಗಿ

    ಭಾರತದಲ್ಲಿ ವೈಬೋ ಸಾಮಾಜಿಕ ಜಾಲತಾಣವನ್ನು ಆಕ್ಸೆಸ್​ ಮಾಡಲು ಸಾಧ್ಯವಿಲ್ಲ. ಆದರೂ ಕೆಲ ಮಾಧ್ಯಮಗಳಲ್ಲಿ ವೈಬೋ ಖಾತೆಯ ಅವರ ಪ್ರೊಫೈಲ್​ ಪೇಜ್​ ಕಾಣೆಯಾಗಿರುವುದಾಗಿ ವರದಿ ಮಾಡಿದ್ದವು.

    ಸೈನಾ ವೈಬೋ ಚೀನಾದ ಟ್ವಿಟರ್​ಗೆ ಸಮಾನವಾದ ಸಾಮಾಜಿಕ ಜಾಲತಾಣವಾಗಿದೆ. ಚೀನಾದ ಲಕ್ಷಾಂತರ ಜನರು ಈ ಜಾಲತಾಣವನ್ನು ಬಳಸುತ್ತಾರೆ. ಬೀಜಿಂಗ್​ನಲ್ಲಿರುವ ರಾಜತಾಂತ್ರಿಕ ವರ್ಗದವರು ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ವಿಶ್ವನಾಯಕರ ಖಾತೆಗಳು ಈ ಜಾಲತಾಣದಲ್ಲಿವೆ.
    2015ರಲ್ಲಿ ಚೀನಾ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ 2015ರ ಮೇ 4ರಂದು ವೈಬೋ ಖಾತೆಯನ್ನು ರಚಿಸಿಕೊಂಡಿದ್ದರು. ಚೀನಾದ ಜನತೆಯ ಜತೆ ಒಡನಾಡುವ ಸಲುವಾಗಿ ಅವರು ಈ ಖಾತೆ ರಚಿಸಿಕೊಂಡಿದ್ದರು. ಇದರಲ್ಲಿ ಮೋದಿ 2.44 ಲಕ್ಷ ಫಾಲೋಯರ್ಸ್​ಗಳನ್ನು ಹೊಂದಿದ್ದರು. ಮಿಲಿಟರಿ ಘರ್ಷಣೆ ಕುರಿತು ಯಾವುದೇ ಸಂದೇಶವನ್ನೂ ಈ ಜಾಲತಾಣದಲ್ಲಿ ಮೋದಿ ಹಂಚಿಕೊಂಡಿರಲಿಲ್ಲ ಎನ್ನಲಾಗಿದೆ.

    ಇದಕ್ಕೂ ಮುನ್ನ ಬೀಜಿಂಗ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಗಲ್ವಾನ್​ ಘರ್ಷಣೆಯ ಬಳಿಕ ಪ್ರಧಾನಿ ಮೋದಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾಡಿದ್ದ ಭಾಷಣ ಹಾಗೂ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಗಳನ್ನು ಮೋದಿ ಅವರ ವೈಬೋ ಸೇರಿ ಚೀನಾದ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಡಿಲೀಟ್​ ಮಾಡಲಾಗಿದೆ ಎಂದು ಹೇಳಿದ್ದರು.

     

    ಹೆದ್ದಾರಿ ಯೋಜನೆಗಳಲ್ಲಿ ಚೀನಿ ಕಂಪನಿಗಳಿಗೆ ‘ನೋ ಎಂಟ್ರಿ’ : ಸಚಿವ ಗಡ್ಕರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts