More

    ಹೆದ್ದಾರಿ ಯೋಜನೆಗಳಲ್ಲಿ ಚೀನಿ ಕಂಪನಿಗಳಿಗೆ ‘ನೋ ಎಂಟ್ರಿ’ : ಸಚಿವ ಗಡ್ಕರಿ

    ನವದೆಹಲಿ: ಹೆದ್ದಾರಿ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
    ದೇಶd ಭದ್ರತೆಗೆ ಚೀನಾ ಆತಂಕ ತಂದೊಡ್ಡಿದ ಹಿನ್ನೆಲೆಯಲ್ಲಿ ಭಾರತ ಟಿಕ್‌ಟಾಕ್, ವೀಚಾಟ್, ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದ ಕೆಲವೇ ದಿನಗಳ ನಂತರ ಈ ನಡೆ ಅನುಸರಿಸಲಾಗಿದೆ. 

    ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆಯನ್ನೂ ನಿರ್ವಹಿಸುತ್ತಿರುವ ಗಡ್ಕರಿ, ಅಭಿವೃದ್ಧಿಪಥದಲ್ಲಿರುವ ಭಾರತದ ಎಂಎಸ್‌ಎಂಇ ವಲಯದಲ್ಲಿ ಕೂಡ ಚೀನಾದವರಿಗೆ ಭಾಗವಹಿಸುವಿಕೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಹಳೆಯ ಪ್ರೇಮಿ ಹತ್ತಾರು ಬಾರಿ ಇರಿದು ಆಕೆಯನ್ನು ಕೊಂದ


    “ರಸ್ತೆ ನಿರ್ಮಾಣಕ್ಕಾಗಿ ಚೀನಾದ ಪಾಲುದಾರಿಕೆ ಹೊಂದಿರುವ ಜಂಟಿ ಉದ್ಯಮಗಳಿಗೂ ನಾವು ಅನುಮತಿ ನೀಡುವುದಿಲ್ಲ. ಚೀನೀ ಕಂಪನಿಗಳು ನಮ್ಮ ದೇಶದಲ್ಲಿ ಜಂಟಿ ಉದ್ಯಮದ ಮೂಲಕ ಬಂದರೆ ನಾವು ಅದನ್ನು ಅನುಮತಿಸಲೇಬಾರದೆಂಬ ದೃಢ ನಿಲುವನ್ನು ಹೊಂದಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
    ಪೂರ್ವ ಲಡಾಕ್‌ನಲ್ಲಿ ನಡೆದ ಭೀಕರ ಸಂಘರ್ಷಣೆಯ ನಂತರ ಕಳೆದ 15 ದಿನಗಳಿಂದ ಚೀನಾದ ಕಂಪನಿಗಳು ಮತ್ತು ಹೂಡಿಕೆಗಳಿಂದ ಭಾರತವು ತನ್ನ ಆರ್ಥಿಕತೆಯನ್ನು ವಿಂಗಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. 

    ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts