More

    ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್​ಗಳನ್ನಾಗಿ ಪರಿವರ್ತಿಸುವ ಐಡಿಯಾ ಕೊಟ್ಟಿದ್ದು ಪ್ರಧಾನಿ ಮೋದಿ…’

    ನವದೆಹಲಿ: ಕೊವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಮಾರ್ಚ್​​ನಲ್ಲಿಯೇ ರೈಲ್ವೆ ಬೋಗಿಗಳನ್ನು ಐಸೋಲೇಶನ್​ ವಾರ್ಡ್​​ಗಳನ್ನಾಗಿ ಪರಿವರ್ತಿಸಲಾಗಿದೆ.

    ಭಾರತೀಯ ರೈಲ್ವೆಯ ಒಟ್ಟು 17 ವಲಯಗಳಿಂದಲೂ ತಲಾ 10 ಬೋಗಿಗಳನ್ನು ಐಸೋಲೇಶನ್​ ವಾರ್ಡ್​ ಆಗಿ ಪರಿವರ್ತನೆ ಮಾಡಲಾಗಿತ್ತು. ಇದು ತುಂಬ ಒಳ್ಳೆಯ ಐಡಿಯಾ ಎಂದು ಕೂಡ ಮೆಚ್ಚುಗೆ ಪಡೆದಿತ್ತು.

    ಹೀಗೆ ರೈಲ್ವೆ ಬೋಗಿಗಳನ್ನು ಐಸೋಲೇಶನ್​ ವಾರ್ಡ್​ ಆಗಿ ಪರಿವರ್ತನೆ ಮಾಡಲು ಐಡಿಯಾ ಕೊಟ್ಟಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ರೈಲ್ವೆ ಇಲಾಖೆ ಸಚಿವ ಪಿಯುಷ್​ ಗೋಯೆಲ್​ ತಿಳಿಸಿದ್ದಾರೆ. ಲಾಕ್​ಡೌನ್​ ಗೂ ಮುಂಚಿತವಾಗಿಯೇ ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಎದುರು ಇಟ್ಟಿದ್ದರು ಎಂದು ಹೇಳಿದ್ದಾರೆ.

    ಲಾಕ್​​ಡೌನ್​​ಗೂ ಮುಂಚೆ ಒಂದು ದಿನ ಪ್ರಧಾನಿಯವರು ನನ್ನನ್ನು ಕರೆದರು. ಕೊವಿಡ್ 19 ರೋಗಿಗಳಿಗಾಗಿ ರೈಲ್ವೆ ಕೋಚ್​ಗಳನ್ನು ಐಸೋಲೇಶನ್​ ವಾರ್ಡ್​ಗಳಾಗಿ ಬದಲಿಸಬಹುದಾ ಎಂದು ಕೇಳಿದರು. ನಾನದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ನನಗೆ ಯಾವತ್ತೂ ಇಂಥದ್ದೊಂದು ಯೋಚನೆ ಬಂದಿರಲಿಲ್ಲ. ನಿಜಕ್ಕೂ ಮೋದಿಯವರ ಈ ಐಡಿಯಾ ಹೊಸತನದಿಂದ ಕೂಡಿತ್ತು. ಹಾಗೇ ಐಸೋಲೇಶನ್​ ವಾರ್ಡ್​ ಆಗಿ ಪರಿವರ್ತನೆ ಮಾಡಲು ರೈಲ್ವೆ ಇಲಾಖೆ ಉದ್ಯೋಗಿಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಕಠಿಣ ಶ್ರಮ ವಹಿಸಿದ್ದಾರೆ ಎಂದು ಪಿಯುಷ್​ ಗೋಯೆಲ್​ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿರದ ಗಡಿ ದಾಟಿದ ಚೇತರಿಕೆ ಸಂಖ್ಯೆ; ರಾಜ್ಯದಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​

    ಇದೀಗ 5000 ಬೋಗಿಗಳಿಂದ ಒಟ್ಟು 80,000 ಐಸೋಲೇಶನ್​ ಬೆಡ್​​ಗಳು ರೈಲ್ವೆ ಇಲಾಖೆಯಿಂದ ಸಿದ್ಧವಾಗಿದೆ ಎಂದಿದ್ದಾರೆ.
    ಕರೊನಾ ವೈರಸ್​ ಕಾಲದಲ್ಲಿ ರೈಲ್ವೆ ಇಲಾಖೆ ಉದ್ಯೋಗಿಗಳು ಅವಿರತವಾಗಿ ದುಡಿದಿದ್ದಾರೆ. ಯಾರೊಬ್ಬರೂ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿಲ್ಲ. 4611 ಶ್ರಮಿಕ್​ ವಿಶೇಷ ರೈಲುಗಳ ಮೂಲಕ ಒಟ್ಟು 63 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ ಎಂದು ಹೇಳಿದರು.

    ತಮ್ಮ ಊರುಗಳಿಗೆ ತೆರಳಲು ಶ್ರಮಿಕ್​ ರೈಲಿನಲ್ಲಿ ಪ್ರಯಾಣ ಮಾಡಿದ ವಲಸೆ ಕಾರ್ಮಿಕರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯಿಂದ ಮಾಡಲಾಗಿದೆ. ಜೂ.18ರವರೆಗೆ ಒಟ್ಟು 3.12 ಕೋಟಿ ಕುಡಿಯುವ ನೀರಿನ ಪ್ಯಾಕೆಟ್​​ಗಳನ್ನು ವಸಲೆ ಕಾರ್ಮಿಕರಿಗೆ ಒದಗಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್​)

    ರಾಮ್​ ರಾಮ್​..! ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಎಂದ ಸಚಿನ್​ ಪೈಲಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts