More

    ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ನವದೆಹಲಿ: ಹಿಂದಿ ಭಾಷೆಯಲ್ಲಿ ‘ಶ್ರಮದ ಫಲವು ಸಿಹಿಯಾಗಿರುತ್ತದೆ’ ಎಂಬೊಂದು ಮಾತಿದೆ. ಬ್ಯಾಡ್ಮಿಂಟನ್ ಚ್ಯಾಂಪಿಯನ್​ ಪಿ.ವಿ.ಸಿಂಧು ಅವರ ವಿಷಯದಲ್ಲಿ ಅದು ಅಕ್ಷರಶಃ ನಿಜವಾಗಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಿಂಧುಗೆ ಐಸ್​​ ಕ್ರೀಂ ತಿನ್ನುವ ಅವಕಾಶ ಸಿಕ್ಕಿದೆ, ಅದೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ!

    ಟೋಕಿಯೋ ಒಲಿಂಪಿಕ್ಸ್​ಗೆ ಹೊರಡುವ ಮುಂಚೆ ಪ್ರಧಾನಿ ಮೋದಿ ಅವರು ಭಾರತದ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿದ್ದರು. ಆಗ ಸಿಂಧು ಅವರು ರಿಯೋ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳುವ ಮುಂಚೆ ಫಿಟ್​​ನೆಸ್​ಗಾಗಿ ಐಸ್​ಕ್ರೀಂ ತಿನ್ನದೇ ಇದ್ದುದರ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ಈ ಬಾರಿಯೂ ಹಾಗೇ ಮಾಡುತ್ತಿದ್ದಾರಾ ಕೇಳಿದ್ದರು. ಜೊತೆಗೆ, ‘ಶ್ರಮಪಟ್ಟು ಆಡಿ, ನೀವು ಮತ್ತೆ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಒಲಿಂಪಿಕ್ಸ್​ನಿಂದ ಹಿಂತಿರುಗಿದಾಗ ನಾನು ನಿಮ್ಮೊಂದಿಗೆ ಐಸ್​ ಕ್ರೀಂ ತಿನ್ನುತ್ತೇನೆ’ ಎಂದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!

    ಇದೀಗ ರಿಯೋ ಒಲಿಂಪಿಕ್ಸ್​ನಂತೆಯೇ, ಟೋಕಿಯೋ ಒಲಿಂಪಿಕ್ಸ್​ನಲ್ಲೂ ಸಿಂಧು ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹಾಗೂ ಮೋದಿ ಅವರೊಂದಿಗೆ ನಿಂತು ಐಸ್​ಕ್ರೀಂ ಕೂಡ ತಿಂದಿದ್ದಾರೆ! ಸಾಮಾಜಿಕ ಮಾಧ್ಯಮದಲ್ಲಿ ಹರಿದುಬಂದಿರುವ ಚಿತ್ರಗಳ ಪ್ರಕಾರ, ಇದು ಮೋದಿ ಅವರು ಒಲಿಂಪಿಕ್ಸ್​ ಪದಕ ವಿಜೇತರಿಗಾಗಿ ಇಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ನಡೆದಿದೆ. ಪ್ರಧಾನಿ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡು ಸಿಂಧು ಮತ್ತು ಇತರ ಕ್ರೀಡಾಪಟುಗಳಿಗೆ ಐಸ್​ಕ್ರೀಂ ಟ್ರೀಟ್​ ಕೊಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

    VIDEO| ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts