More

    ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದು ನಿಶ್ಚಿತ: ಟ್ರಸ್ಟ್​​ನಿಂದ​ ಅಧಿಕೃತ ಮಾಹಿತಿ

    ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ರಂದು ಭೂಮಿ ಪೂಜೆ ನಿಗದಿಯಾಗಿದೆ. ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅದು ಅಧಿಕೃತವಾಗಿರಲಿಲ್ಲ.

    ಇದೀಗ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಖಜಾಂಚಿ ಸ್ವಾಮಿ ಗೋವಿಂದ ದೇವ್​ ಗಿರಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವುದು ನಿಶ್ಚಿತವಾಗಿದೆ ಎಂದು ದೃಢಪಡಿಸಿದ್ದಾರೆ.

    ಭೂಮಿ ಪೂಜೆಗೆ ನಾವು ಪ್ರಧಾನಿಯವರಿಗೆ ಆಮಂತ್ರಣ ನೀಡಿದ್ದೇವೆ. ಅವರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ. ಆಗಸ್ಟ್​ 5ರಂದು ಪ್ರಧಾನಿ ಮೋದಿಯವರು ಅಯೋಧ್ಯೆಗೆ ತಲುಪಲಿದ್ದಾರೆ ಎಂದು ತಿಳಿಸಿದ್ದಾರೆ.
    ಭೂಮಿ ಪೂಜೆ ಆ.5ರಂದು ಮಧ್ಯಾಹ್ನ 12 ಗಂಟೆ 15 ನಿಮಿಷ 32 ಸೆಕೆಂಡ್​ಗೆ ನಡೆಯಲಿದೆ. ಅದಕ್ಕೂ ಮೊದಲು ಮೋದಿಯವರು ಹನುಮಾನ್ ಗರ್ಹಿ ಹಾಗೂ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾದ ತಾತ್ಕಾಲಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊವಿಡ್​-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    ಕರೊನಾ ಭೀತಿ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಹಾಗಾಗಿ ಭೂಮಿ ಪೂಜೆಯಲ್ಲಿ 200 ಮಂದಿ ಮಾತ್ರ ಭಾಗವಹಿಸಲಿದ್ದಾರೆ ಎಂದು ಗೋವಿಂದ ದೇವ್​ ಗಿರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO: ‘ಬುಟ್ಟ ಬೊಮ್ಮಾ..ಬುಟ್ಟ ಬೊಮ್ಮಾ…’: ಏರ್​​ಪೋರ್ಟ್​ನಲ್ಲಿ ಇಂಡಿಗೋ ಸಿಬ್ಬಂದಿಯ ಭರ್ಜರಿ ಸ್ಟೆಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts