More

    ಲೇಹ್​ಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್​ ಭೇಟಿ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ತಿಕ್ಕಾಟ ಮುಂದುವರಿದಿರುವಂತೆ ಅಲ್ಲಿನ ವಾಸ್ತವ ಪರಿಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್​ಗೆ ಭೇಟಿ ನೀಡಿದ್ದರು.

    ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಅವರ ಜತೆಗೂಡಿ ಪ್ರಧಾನಿ ಲೇಹ್​ಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಮಾತ್ರ ಲೇಹ್​ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಧಾನಿ ಮೋದಿ ದಿಢೀರನೆ ಲೇಹ್​ಗೆ ಭೇಟಿ ನೀಡಲು ಮುಂದಾದರು.

    ಇದನ್ನೂ ಓದಿ: ಅಲ್ಪಪ್ರಮಾಣದ ಸೇನೆ ಹಿಂದಕ್ಕೆ, ಆದರೂ ತಣಿಯುತ್ತಿಲ್ಲ ಉದ್ವಿಗ್ನತೆ

    ಶುಕ್ರವಾರ ಬೆಳಗ್ಗೆ 9.30ಕ್ಕೆ ಲೇಹ್​ ತಲುಪಿದ ಅವರು, ಮುಂಚೂಣಿ ಸೇನಾ ನೆಲೆ ನಿಮುಗೆ ತೆರಳಿ ಅಲ್ಲಿ ನಿಯೋಜನೆಗೊಂಡಿರುವ ಸೇನಾಪಡೆ, ವಾಯುಪಡೆ ಮತ್ತು ಇಂಡೋ-ಟಿಬೆಟ್​ ಪೊಲೀಸ್​ ಫೋರ್ಸ್​ನ ಯೋಧರರೊಂದಿಗೆ ಮಾತುಕತೆ ನಡೆಸಿದರು.

    11 ಸಾವಿರ ಅಡಿ ಎತ್ತರದಲ್ಲಿರುವ ನಿಮು ಸೇನಾ ಮುಂಚೂಣಿ ನೆಲೆಯಲ್ಲಿ ಕೆಲಸ ಮಾಡುವುದು ತುಂಬಾ ದುಸ್ತರ. ಇಂಡಸ್​ ನದಿಯ ತಟದ ಮೇಲಿರುವ ಈ ಪ್ರದೇಶ ತುಂಬಾ ದುರ್ಗಮವಾಗಿದ್ದು, ಝಾಂಸ್ಕಾರ್​ ಪರ್ವತ ಶ್ರೇಣಿಯಿಂದ ಸುತ್ತುವರಿದಿದೆ.

    ಹೆತ್ತ ತಾಯಿಯ ಪ್ರೇಮ್​ ಕಹಾನಿಗೆ 5 ವರ್ಷ ಹೆಣ್ಮಗು ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts