More

    ಜಗತ್ತಿನ ಸದ್ಯದ ಪರಿಸ್ಥಿತಿಯು ಹೊಸ ಮನಸ್ಥಿತಿಯನ್ನು ಬಯಸುತ್ತಿದೆ: ಪ್ರಧಾನಿ ಮೋದಿ

    ನವದೆಹಲಿ: ಇಡೀ ಜಗತ್ತನ್ನೇ ಬಾಧಿಸುತ್ತಿರುವ ಮಹಾಮಾರಿ ಕರೊನಾ ವೈರಸ್​ ನಮ್ಮ ಸ್ಥಿತಿಸ್ಥಾಪಕತ್ವ ಪರೀಕ್ಷೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯು ಹೊಸ ಮನಸ್ಥಿತಿಯನ್ನು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ 3ನೇ ವಾರ್ಷಿಕ ನಾಯಕತ್ವ ಶೃಂಗಸಭೆ (ಯುಎಸ್​ಐಎಸ್​ಪಿಎಫ್​) ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಮಾತನಾಡಿದರು. ಸದ್ಯದ ಪರಿಸ್ಥಿತಿ ಬಯಸುತ್ತಿರುವ ಹೊಸ ಮನಸ್ಥಿತಿಯು ಮಾನವ ಕೇಂದ್ರಿಕೃತ ಅಭಿವೃದ್ಧಿಯ ಮನಸ್ಥಿತಿಯಾಗಿದೆ ಎಂದರು.

    2020ನೇ ವರ್ಷ ಆರಂಭವಾದಾಗ ಅದು ಹೇಗೆ ಹೊರಹೊಮ್ಮುತ್ತದೆ ಎಂದು ಯಾರಾದರೂ ಊಹಿಸಿದ್ದೀರಾ? ಜಾಗತಿಕ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದೆ. ನಮ್ಮ ಸ್ಥಿತಿಸ್ಥಾಪಕತ್ವ, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದರು.

    ಇದನ್ನೂ ಓದಿ: ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

    1.3 ಬಿಲಿಯನ್​ ಜನಸಂಖ್ಯೆ ಹಾಗೂ ಸೀಮಿತ ಸಂಪನ್ಮೂಲ ಹೊಂದಿರುವ ಭಾರತವೂ ವಿಶ್ವದಲ್ಲೇ ಕರೊನಾ ಸಾವಿನ ಪ್ರಮಾಣದಲ್ಲಿ ತುಂಬಾ ಕಡಿಮೆ ಇದೆ. ಚೇತರಿಕೆ ಪ್ರಮಾಣವೂ ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವಾರು ವಿಷಯಗಳ ಮೇಲೆ ಕರೊನಾ ಪ್ರಭಾವ ಬೀರಿದ್ದರೂ, 1.3 ಬಿಲಿಯನ್ ಭಾರತೀಯರ ಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇತ್ತೀಚಿನ ದಿನಗಳಲ್ಲಿ ಸುಧಾರಣೆಯ ಗುರಿ ಮುಟ್ಟುತ್ತಿದ್ದೇವೆ ಎಂದರು.

    1.3 ಬಿಲಿಯನ್​ ಭಾರತೀಯ ಆತ್ಮನಿರ್ಭರ ಭಾರತವನ್ನು ಆರಂಭಿಸಿದ್ದೇವೆ. ಆತ್ಮನಿರ್ಭರ ಭಾರತ ಸ್ಥಳೀಯತೆಯನ್ನು ಜಾಗತಿಕದೊಂದಿಗೆ ವಿಲೀನಗೊಳಿಸುತ್ತದೆ. ಭಾರತದ ಸಾಮರ್ಥ್ಯವು ಜಾಗತಿಕ ಶಕ್ತಿಯ ಗುಣಕದಂತೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಆತ್ಮನಿರ್ಭರ ಭಾರತ ಖಚಿತಪಡಿಸಲಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಪ್ರಧಾನಿ ನರೇಂದ್ರ ಮೋದಿ ಈವರೆಗೆ ನೀಡಿದ ದೇಣಿಗೆ ಎಷ್ಟು ಗೊತ್ತೆ? 103 ಕೋಟಿ ರೂ….; ಹೀಗಿದೆ ಲೆಕ್ಕಾಚಾರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts