ಟೋಕಿಯೋ (ಜಪಾನ್): “ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಬನ್ನಿ..”
– ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಪಾನ್ನಲ್ಲಿ ಹೀಗೊಂದು ಕರೆಯನ್ನು ನೀಡಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಟೋಕಿಯೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚಿಸಿಕೊಂಡಿರುವ ಬಲಿಷ್ಠ ಕ್ವಾಟ್ ಕೂಟದ ಮಹತ್ವದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಭೇಟಿ ಕೊಟ್ಟಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ ಪ್ರಧಾನಿ ಮೋದಿಯವರದ್ದು ಇದು ಐದನೇ ಭೇಟಿ.
ನಾನು ಜಪಾನ್‌ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದು ಮೋದಿ ಹೇಳಿದರು.
ನಾವು ಭಾರತೀಯರು ನಮ್ಮ ಕರ್ಮಭೂಮಿಗೆ ಹೃತ್ಪೂರ್ವಕವಾಗಿ ಹೊಂದಿಕೊಂಡುಬಿಡುತ್ತೇವೆ. ಅದಾಗ್ಯೂ ನಮಗೆ ಮಾತೃಭೂಮಿ ಕಡೆಗಿನ ಪ್ರೀತಿ ಮಾಸುವುದಿಲ್ಲ. ಮಾತೃಭೂಮಿಯಿಂದ ದೂರ ಇರುವುದು ನಮ್ಮಿಂದ ಸಾಧ್ಯವಿಲ್ಲ. ಇದು ನಮ್ಮ ಅತ್ಯಂತ ದೊಡ್ಡ ಶಕ್ತಿಗಳಲ್ಲಿ ಒಂದು ಎಂದ ಮೋದಿ, ಜಪಾನ್ನ ಯುವಜನತೆ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಿ ಎಂದು ಕರೆ ನೀಡಿದರು.
ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಕಾರಣ ಇದೇನಾ?