More

    ಯುಎಇ ಭೇಟಿ ನೀಡಲಿರುವ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಭೇಟಿಯಿಂದ ವಾಪಸಾಗುವಾಗ ಜುಲೈ 15ರಂದು ಅರಬ್ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಯುಎಇ ಅಧ್ಯಕ್ಷ ಹಾಗೂ ಅಬು ಧಾಬಿ ಆಡಳಿತಗಾರ ಝುಯೇದ್ ಅಲ್ ನಹ್ಯಾನ್​ರೊಂದಿಗೆ ಮಾತುಕತೆ ನಡೆಸಲಿದ್ದಾರೆ.

    ಇಂಧನ, ಆಹಾರ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಮುಂದಕ್ಕೊಯ್ಯುವ ಬಗ್ಗೆ ಉಭಯ ನಾಯಕರು ರ್ಚಚಿಸಲಿದ್ದಾರೆ. ಭಾರತ-ಯುಎಇ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ ಬಲಗೊಳ್ಳುತ್ತಿದ್ದು, ಮೋದಿ ಭೇಟಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಮಾಗೋಪಾಯಗಳನ್ನು ಹುಡುಕಲು ಅವಕಾಶ ಕಲ್ಪಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

    ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಹಣಕಾಸುತಂತ್ರಜ್ಞಾನ (ಫಿನ್​ಟೆಕ್), ರಕ್ಷಣೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಂಬಂಧ ಗಟ್ಟಿಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್​ರ ಆಹ್ವಾನದ ಮೇರೆಗೆ ಮೋದಿ ಜುಲೈ 13 ಮತ್ತು 14ರಂದು ಫ್ರಾನ್ಸ್​ಗೆ ಭೇಟಿ ನೀಡಲಿದ್ದಾರೆ.

    muslim league

    ನರೇಂದ್ರ ಮೋದಿ ಶ್ಲಾಘಿಸಿದ ಮುಸ್ಲಿಂ ಲೀಗ್

    ಪ್ರಧಾನಿ ನರೇಂದ್ರ ಮೋದಿಯವರ ಎಲ್ಲರನ್ನೂ ಒಳಗೊಳ್ಳುವ ಕುರಿತ ಉತ್ಸಾಹದಾಯಕ ಧೋರಣೆ ಶ್ಲಾಘನಾರ್ಹವಾಗಿದೆ ಎಂದು ಮುಸ್ಲಿಂ ವರ್ಲ್ಡ್ ಲೀಗ್​ನ ಮಹಾ ಕಾರ್ಯದರ್ಶಿ ಶೇಖ್ ಮಹಮದ್ ಬಿನ್ ಅಬ್ದುಲ್​ಕರೀಂ ಅಲ್-ಇಸ್ಸಾ ಬುಧವಾರ ಹೇಳಿದ್ದಾರೆ. ಮಂಗಳವಾರ ಮೋದಿಯವರನ್ನು ಭೇಟಿಯಾಗಿದ್ದ ಅಲ್-ಇಸ್ಸಾ, ಯಾವುದೇ ಮೂಲದ್ದಾದರೂ ಉಗ್ರವಾದ ಮತ್ತು ದ್ವೇಷದ ಎಲ್ಲ ಅಂಶಗಳನ್ನು ವಿರೋಧಿಸಲು ಒಟ್ಟಾಗಿ ಕೆಲಸ ಮಾಡಲು ತಾವಿಬ್ಬರೂ ಒಪ್ಪಿರುವುದಾಗಿ ಹೇಳಿದ್ದಾರೆ.

    ಭಾರತ ಪ್ರವಾಸದಲ್ಲಿರುವ ಅಲ್-ಇಸ್ಸಾ, ಮೋದಿ ಜೊತೆ ಅಂತರ್​ಧರ್ವಿುಯ ಸಂವಾದ ಹೆಚ್ಚಿಸುವುದು, ಉಗ್ರವಾದಿ ಸಿದ್ಧಾಂತಗಳನ್ನು ಎದುರಿಸುವುದು, ಜಾಗತಿಕ ಶಾಂತಿಗೆ ಉತ್ತೇಜನ ಮತ್ತು ಭಾರತ ಹಾಗೂ ಸೌದಿ ಅರೇಬಿಯಾ ನಡುವಣ ಪಾಲುದಾರಿಕೆಯನ್ನು ಆಳಗೊಳಿಸುವುದು ಮುಂತಾದ ವಿಷಯಗಳನ್ನು ರ್ಚಚಿಸಿದರು. ಭಾರತೀಯ ಪ್ರಧಾನಿಯೊಂದಿಗೆ ಒಳನೋಟ ನೀಡುವಂಥ ಚರ್ಚೆಗಳನ್ನು ನಡೆಸಿದ್ದಾಗಿ ಅಲ್-ಇಸ್ಸಾ ಟ್ವೀಟ್​ನಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts