More

    ಗ್ವಾಲಿಯರ್​ ರಾಜಮಾತೆ ವಿಜಯರಾಜೇ ಸಿಂಧ್ಯಾ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ…!

    ನವದೆಹಲಿ: ಗ್ವಾಲಿಯರ್​ನ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ನೂರು ರೂಪಾಯಿ ನಾಣ್ಯವನ್ನು ಸೋಮವಾರ ಬಿಡುಗಡೆ ಮಾಡಿದರು.

    ಹಣಕಾಸು ಸಚಿವಾಲಯವು ಈ ವಿಶೇಷ ನಾಣ್ಯವನ್ನು ಮುದ್ರಿಸಿದ್ದು, ಇಂದು ಬೆಳಗ್ಗೆ ನಡೆದ ವರ್ಚುವಲ್​ ಸಮಾರಂಭದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

    ಬಳಿಕ ಮಾತನಾಡಿದ ಪ್ರಧಾನಿ, ರಾಜಮಾತೆ ಸಿಂಧ್ಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ಜನರ ಪ್ರತಿನಿಧಿಗಳಿಗೆ ‘ರಾಜ್ ಸತ್ತಾ’ ಅಲ್ಲ, ‘ಜನಸೇವೆ’ಯೇ ಮುಖ್ಯವೆಂದು ಸಾಬೀತುಪಡಿಸಿದರು ಎಂದು ಸ್ಮರಿಸಿದರು.

    ಇದನ್ನೂ ಓದಿ: ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​

    ತ್ರಿವಳಿ ತಲಾಖ್ ವಿರುದ್ಧ​ ಕಾನೂನು ಮಾಡಿರುವುದರಿಂದ ದೇಶವು ರಾಜಮಾತೆ ಸಿಂಧ್ಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನೆಡೆಸುತ್ತಿದ್ದಾರೆಂದು ಪ್ರಧಾನಿ ಹೇಳಿದರು.

    ಪ್ರಧಾನಿ ಮೋದಿ ಅವರ ಜತೆಗೆ ವಿಜಯರಾಜೇ ಸಿಂಧ್ಯಾ ಅವರ ಕುಟುಂಬಸ್ಥರು, ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯಸ್ಥರು ಹಾಗೂ ಇತರ ಗಣ್ಯರು ವರ್ಚುವಲ್​ ಪ್ಲ್ಯಾಟ್​ಫಾರ್ಮ್​ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. (ಏಜೆನ್ಸೀಸ್​)

    100 ರೂ. ನಾಣ್ಯ; ನಾಳೆ ಬಿಡುಗಡೆ ಮಾಡಲಿದ್ದಾರೆ ಮೋದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts