More

    ಮೇ 6 ರಂದು ಬಾದಾಮಿಗೆ ಪ್ರಧಾನಿ ಮೋದಿ – ವಿ.ಪ. ಸದಸ್ಯೆ ಭಾರತಿ ಶೆಟ್ಟಿ ಹೇಳಿಕೆ

    ಬಾದಾಮಿ: ಸಮೀಪದ ಬನಶಂಕರಿ ಬಡಾವಣೆಯಲ್ಲಿ ಮಹಿಳಾ ಮೋರ್ಚಾದಿಂದ ಮೇ 6 ರಂದು ಸಂಜೆ 4 ಗಂಟೆಗೆ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತಿಳಿಸಿದರು.

    ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ, ವೃದ್ಧಾಪ್ಯ ವೇತನ, ಮಡಿಲು ಕಿಟ್ ಯೋಜನೆ, ಜಿರೋ ಪರ್ಸೆಂಟ್ ಸಾಲ, ಮಹಿಳೆಯರ ಹೆಸರಿನಲ್ಲಿ ವಸತಿ ಯೋಜನೆ, ಹಾಲಿಗೆ ಪ್ರೊತ್ಸಾಹಧನ, ಬೇಟಿ ಫಡಾವೊ ಬೇಟಿ ಬಚಾವೊ ಯೋಜನೆ ಜಾರಿ ಮಾಡಿದ್ದಲ್ಲದೆ, ಮಹಿಳೆಯ ಸಾಮರ್ಥ್ಯ ಗುರುತಿಸಿ ರಾಷ್ಟ್ರಪತಿ ಮಾಡಿದೆ ಎಂದರು.

    ಎರಡು ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಎರಡು ಲಸಿಕೆಯನ್ನು ಉಚಿತವಾಗಿ ನೀಡಿದೆ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲಿಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

    ಈ ಎಲ್ಲ ಯೋಜನೆಗಳ ಬಗ್ಗೆ ಬಾದಾಮಿ ಮತಕ್ಷೇತ್ರದ 260 ಬೂತ್ ವ್ಯಾಪ್ತಿಯ 2.16 ಲಕ್ಷ ಮತದಾರರಿಗೆ ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ತಿಳಿಸಲಾಗುತ್ತಿದೆ. ನಮ್ಮ ಸರ್ಕಾರದ ಸಾಧನೆ ನೋಡಿ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

    ಅಲ್ಲದೆ, ಸಮಾವೇಶದಲ್ಲಿ ರೋಣ, ನರಗುಂದ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ ಮತಕ್ಷೇತ್ರದಿಂದ ಅಂದಾಜು ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

    ಮಹಿಳಾ ಮೋರ್ಚಾ ಮುಖಂಡರಾದ ಸಾವಿತ್ರಿ ಜೋಗೂರು, ಉಮಾ ಚಟ್ಟರಕಿ, ಕಾವೇರಿ ರಾಠೋಡ, ಸುಶೀಲಾ ದೇವರಾಜ, ಭಾಗೀರಥಿ ಪಾಟೀಲ, ಭಾಗ್ಯ ಉದ್ನೂರ, ಗೀತಾ ಅಪ್ಪನ್ನವರ, ಭಾಗ್ಯವತಿ ಪಾಟೀಲ, ಸವಿತಾ ಹೊಸೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts