More

    ‘ನೆಹರು ಉಪನಾಮ ಬಳಸಲು ಆ ಕುಟುಂಬಕ್ಕೆ ಸಮಸ್ಯೆ ಏನು?’ ಸಂಸತ್ತಿನಲ್ಲಿ ಚಾಟಿ ಏಟು ಕೊಟ್ಟ ಪ್ರಧಾನಿ ಮೋದಿ!

    ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ವಿರೋಧ ಪಕ್ಷಗಳು ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಅವರ ಅಸಾಧಾರಣ ಬೆಳವಣಿಗೆಗೆ ಸಹಾಯ ಮಾಡಿದ್ದಕ್ಕಾಗಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ತಮ್ಮ ಪ್ರತ್ಯುತ್ತರದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಮೇಲೆ ಕಟುವಾದ ವಾಗ್ದಾಳಿಯನ್ನು ಮಾಡಿದರು. ಈ ಸಂದರ್ಭ ಅವರು ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಅಡುಗೆ ಅನಿಲ ಪಡೆಯಲು ಕಾಯುವುದನ್ನು ತೊಡೆದುಹಾಕುವುದರಿಂದ ಹಿಡಿದು ಎಲ್ಲರಿಗೂ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವವರೆಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

    ಕೆಸರಿನಲ್ಲಿ ಕಮಲ ಅರಳಲಿದೆ
    ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಪ್ರತಿಪಕ್ಷದವರು ಕೆಸರು ಎಸೆದಷ್ಟೂ ಕಮಲ ಅರಳುತ್ತದೆ ಎಂದು ಹೇಳಿದರು. ಹೀಗಾಗಿ ಕಮಲ ಅರಳಿಸುವಲ್ಲಿ ಪ್ರತಿಪಕ್ಷದವರ ಪಾತ್ರ ಸಮಾನವಾಗಿದ್ದು ಅದಕ್ಕಾಗಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

    ತಮ್ಮ ಭಾಷಣದಲ್ಲಿ ‘2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಎಲ್ಲೆಡೆ ಸಮಸ್ಯೆಗಳನ್ನು ಸೃಷ್ಟಿಸಿರುವುದನ್ನು ನೋಡಿದ್ದೇನೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯದ ಮಾತನ್ನಾಡಿದರು.

    “2014ರವರೆಗೆ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಕಳೆದ 9 ವರ್ಷಗಳಲ್ಲಿ 48 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ನಮ್ಮ ಸರ್ಕಾರ ಕಳೆದ 3-4 ವರ್ಷಗಳಲ್ಲಿ 11 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆಯನ್ನು ವಿಸ್ತರಿಸಿದೆ. ಆದರೆ 2014ರ ಮೊದಲು ಕೇವಲ 3 ಕೋಟಿ ಮನೆಗಳಿಗೆ ಮಾತ್ರ ನೀರಿನ ಸಂಪರ್ಕವನ್ನು ಒದಗಿಸಲಾಗಿತ್ತು” ಎಂದು ಪ್ರಧಾನಿ ಹೇಳಿದರು.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ‘ಕಾಂಗ್ರೆಸ್​ ಹಳೆಯ ಪಕ್ಷವಾಗಿದ್ದು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಎಂದಿಗೂ ಪ್ರಯತ್ನಿಸಲಿಲ್ಲ. ‘ಕಾಂಗ್ರೆಸ್ ‘ಗರೀಬಿ ಹಠಾವೋ’ ಎಂದು ಹೇಳುತ್ತಿತ್ತು ಆದರೆ ನಾಲ್ಕು ದಶಕಗಳಿಂದ ಏನನ್ನೂ ಮಾಡಲಿಲ್ಲ. ನಾವು ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಿರುವಾಗ, ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿತು. ಸಣ್ಣ ದೇಶಗಳೇ ಪ್ರಗತಿಯಲ್ಲಿರುವಾಗ ಭಾರತ ಆರು ದಶಕಗಳನ್ನು ಕಳೆದುಕೊಂಡಿತು’ ಎಂದು ಆರೋಪಿಸಿದರು.

    “ನಮಗೆ ಟೋಕನಿಸಂನಲ್ಲಿ ನಂಬಿಕೆ ಇಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ನಾವು ಶ್ರಮಿಸುತ್ತಿದ್ದೇವೆ. ದೇಶ ನಮ್ಮೊಂದಿಗಿದೆ. ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದು ಕಾಲಕಾಲಕ್ಕೆ ಅವರಿಗೆ ಶಿಕ್ಷೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಫಲವಾಗಿವೆ”

    ಗಾಂಧಿ ಹೆಸರಿನ ಬಗ್ಗೆಯೂ ಪ್ರಶ್ನಿಸಿದ ಪ್ರಧಾನಿ!
    ‘ನೆಹರೂ’ ಉಪನಾಮವನ್ನು ಬಳಸುವುದರಿಂದ ಈ ಕುಟುಂಬ ಏಕೆ ಹಿಂದೆ ಸರಿಯುತ್ತದೆ ಎಂದು ಪ್ರಧಾನ ಮಂತ್ರಿ ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.

    ”ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರುಗಳು ಮತ್ತು ಹೆಸರಿನಲ್ಲಿ ಸಂಸ್ಕೃತ ಪದಗಳ ಸಮಸ್ಯೆಗಳಿವೆ. 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ವರದಿಯಲ್ಲಿ ಓದಿದ್ದೇನೆ. ಅವರ ಪೀಳಿಗೆಯ ಜನರು ನೆಹರೂ ಅವರನ್ನು ಏಕೆ ಇರಿಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಉಪನಾಮ ಬಳಸಲು ಇರುವ ಭಯ ಮತ್ತು ಅಪಮಾನ ಯಾವುದು?, “ಎಂದು ಮೋದಿ ಪ್ರಶ್ನಿಸಿದರು.

    ಇದಲ್ಲದೇ 90 ಬಾರಿ ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನದ 356 ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರಧಾನಿ ಗಂಭೀರ ಆರೋಪವನ್ನು ಹೊರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts