More

    ದೊಡ್ಡ ಬೆದರಿಕೆಗಳಲ್ಲಿ ಒಂದಾಗಿರುವ ಡೀಪ್‌ಫೇಕ್‌ಗಳು: ಪ್ರಧಾನಿ ಮೋದಿ – ಗಾರ್ಬಾ ವೀಡಿಯೊ ಉಲ್ಲೇಖ

    ನವದೆಹಲಿ: ಡೀಪ್‌ಫೇಕ್‌ಗಳು ಭಾರತೀಯ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
    ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ದೀಪಾವಳಿ ಮಿಲನ್​ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಡೀಪ್‌ಫೇಕ್‌ಗಳು ಅವ್ಯವಸ್ಥೆಯನ್ನು ಉಂಟುಮಾಡಬಹುದು ಎಂದು ಎಂದು ತಿಳಿಸಿದರು.

    ಇದನ್ನೂ ಓದಿ: ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; 48 ದಿನ ಮಂಡಲೋತ್ಸವ: ಪೇಜಾವರ ಶ್ರೀ
    ಡೀಪ್‌ಫೇಕ್‌ಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ಜನರಿಗೆ ಶಿಕ್ಷಣ ನೀಡಬೇಕು. ಡೀಪ್‌ಫೇಕ್‌ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು.

    ಚುನಾವಣೆಯಲ್ಲಿ ಡೀಪ್‌ಫೇಕ್‌ಗಳು ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ. ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟ. ಡೀಪ್ ಡೈವ್ ಗಳು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಮಾಡಿದಾಗ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಇವು ಪ್ರಜಾಪ್ರಭುತ್ವಕ್ಕೂ ಮಾರಕ ಎಂದು ಅಭಿಪ್ರಾಯಪಟ್ಟರು.

    ಪ್ರಧಾನಿ ಮೋದಿ ಅವರು ಗಾರ್ಬಾ ಮಾಡುತ್ತಿರುವ ಡೀಪ್‌ಫೇಕ್ ವೀಡಿಯೊವನ್ನು ಉಲ್ಲೇಖಿಸಿದ್ದಾರೆ, ಈ ವೀಡಿಯೊವನ್ನು “ಅತ್ಯಂತ ನೈಜ” ಎಂದು ಕರೆದ ಅವರು, ತಾನು ಚಿಕ್ಕಂದಿನಿಂದಲೂ “ಗರ್ಬಾ” ಆಡಿಲ್ಲ ಎಂದು ಹೇಳಿದರು. ವೈರಲ್ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರನ್ನು ಹೋಲುವ ವ್ಯಕ್ತಿ ಕೆಲವು ಮಹಿಳೆಯರೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದಾಗಿತ್ತು. ಆದರೆ ವೀಡಿಯೋದಲ್ಲಿರುವ ವ್ಯಕ್ತಿ ಪ್ರಧಾನಿಯಂತೆ ಕಾಣುವ ವಿಕಾಸ್ ಮಹಂತೆ ಎಂಬ ನಟ ಆಗಿದ್ದ.

    ಒಬ್ಬ X(ಎಕ್ಸ್​) ಬಳಕೆದಾರ ಮಹಂತೆಯ ಇನ್​ಸ್ಟಾಗ್ರಾಂ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದ. ಈ ವೀಡಿಯೊದಲ್ಲಿ, ಮೊಹಂತೆ ಡೀಪ್‌ಫೇಕ್‌ನಂತೆ ಅದೇ ಗಾರ್ಬಾ ವೇದಿಕೆಯಲ್ಲಿ ನಿಂತಿರುವುದನ್ನು ಕಾಣಬಹುದು. ಅವರ ಉಡುಗೆಯೂ ಪ್ರಧಾನಿಯವರು ತೊಡುವ ಉಡುಗೆಯಂತಿತ್ತು.
    ಇನ್ನು ಕಾಜೋಲ್, ಕತ್ರಿನಾ ಕೈಫ್ ಮತ್ತು ರಶ್ಮಿಕಾ ಮಂದಣ್ಣ ಅವರಂತಹ ಹಲವಾರು ನಟಿಯರು ಇತ್ತೀಚೆಗೆ ಡೀಪ್‌ಫೇಕ್‌ಗಳಿಗೆ ಸಿಲುಕಿ ಮುಜುಗರ, ಅಪಮಾನ ಎದುರಿಸಿದ್ದರು.

    ರೈತರ ಆತ್ಮಹತ್ಯೆಗೆ ಪಿಣರಾಯಿ ವಿಜಯನ್ ಸರ್ಕಾರವೇ ಹೊಣೆ: ಕೇಂದ್ರ ಸಚಿವೆ ಶೋಭಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts