More

    ಕೊರೊನಾ ವೈರಸ್​ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ವೈಯಕ್ತಿಕವಾಗಿ ನಿರ್ವಹಿಸುತ್ತಿದ್ದಾರೆ: ಆರೋಗ್ಯ ಸಚಿವ ಹರ್ಷವರ್ಧನ್

    ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಈವರೆಗೂ ಹತ್ತಿರ 50 ಸಾವಿರ​ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಭಾರತ ಕೊರೊನಾ ವೈರಸ್​ ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪುನರುಚ್ಛರಿಸಿದ್ದಾರೆ.

    ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವಸಂಸ್ಥೆ ಘೋಷಿಸುವ ಮುನ್ನವೇ ಜನವರಿ 17ರ ಆರಂಭದಿಂದಲೂ ನಾವು ಕೊರೊನಾ ವೈರಸ್​ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೇಶಾದ್ಯಂತ ಪ್ರತ್ಯೇಕ ಬೆಡ್​​, ಮಾಸ್ಕ್​ ಹಾಗೂ ವೆಂಟಿಲೇಟರ್​ಗಳನ್ನು ತೆರೆಯುವಂತೆ ಆಯಾ ರಾಜ್ಯಗಳಿಗೆ ಸಲಹಾ ಸೂಚನೆ ನೀಡಲಾಗಿದೆ. ವೈರಸ್​ ಹರಡಿದ ಬೆನ್ನಲ್ಲೇ ನಾವು ಪ್ರವಾಸ ಸಲಹೆಯನ್ನೂ ನೀಡಿದ್ದೇವೆ ಎಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಈವರೆಗೂ ಚೀನಾದಲ್ಲಿ ವೈರಸ್​ ಕಾರಣದಿಂದಾಗಿ 1,310 ಮಂದಿ ಸಾವಿಗೀಡಾಗಿದ್ದಾರೆ. ಹಾಂಕ್​ಕಾಂಗ್​ ಮತ್ತು ಫಿಲಿಪೈನ್ಸ್​ಗಳಲ್ಲಿ ತಲಾ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ಭಾರತದಲ್ಲೂ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಅದೃಷ್ಟವಶಾತ್​ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್​ ಭೀಕರತೆ ಸೃಷ್ಟಿಸದಂತೆ ತಡೆಯಲು ಎಲ್ಲ ರೀತಿಯ ಮಾರ್ಗೊಪಾಯಗಳನ್ನು ಅನುಸರಿಸಲಾಗುತ್ತಿದೆ. ಚೀನಾ, ಥಾಯ್ಲೆಂಡ್​, ಹಾಂಕ್​ಕಾಂಗ್​, ಸಿಂಗಪೊರ್​, ಜಪಾನ್​ ಮತ್ತು ದಕ್ಷಿಣ ಕೊರಿಯಾದಿಂದ ಬರುವ ಪ್ರಯಾಣಿಕರನ್ನು ದೇಶದ 21 ವಿಮಾನ ನಿಲ್ದಾಣಗಳಲ್ಲಿಯೂ ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

    ಸುಮಾರು 2.51 ಲಕ್ಷ ಮಂದಿಯನ್ನು ಈವರೆಗೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೇವಲ 1,765 ಮಂದಿಯ ರಕ್ತದ ಮಾದರಿಯಲ್ಲಿ ಕೊರೊನಾ ವೈರಸ್​ ಪಾಸಿಟಿವ್​ ಅಂಶವನ್ನು ತೋರಿದೆ. ವೈರಸ್​ ಹರಡಿದ ಬೆನ್ನಲ್ಲೇ ಚೀನಾದ ವುಹಾನ್​ನಿಂದ ಭಾರತಕ್ಕೆ ಬಂದಿಳಿದಿರುವ 645 ಭಾರತೀಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೂ, ಅವರನ್ನು ಪರಿವೀಕ್ಷಣೆಯಲ್ಲಿ ಇಡಲಾಗಿದೆ. ಹಾಗೇ ಮಾನವೀಯ ದೃಷ್ಟಿಯಿಂದ ಚೀನಾಗೆ ಅಗತ್ಯವಾದ ನೆರವನ್ನು ಒದಗಿಸಲಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts