More

    ಪುತ್ತಿಗೆಶ್ರೀ, ಪುನರೂರುಗೆ ಚುಸಾಪ ಗೌರವ ಪ್ರಶಸ್ತಿ

    ಹುಬ್ಬಳ್ಳಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆಮಠದ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರಿಗೆ “ವಿಶ್ವಗಿತಾ ಅಭಿಯಾನ ಅಭಿಯೋಜಕ’ ಹಾಗೂ ಹಿರಿಯ ಚಿಂತಕ, ಧರ್ಮದಶಿರ್ ಡಾ. ಹರಿಕೃಷ್ಣ ಪುನರೂರು ಅವರಿಗೆ “ವಿಶ್ವಗಿತಾ ಪರ್ಯಾಯ ಕೃಷ್ಣಾನುಗ್ರಹ’ ಗೌರವ ಪ್ರಶಸ್ತಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಯ್ಕೆ ಮಾಡಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

    ಮೇ 5ರಂದು ಬೆಳಗ್ಗೆ 9.-30ಕ್ಕೆ ಉಡುಪಿಯ ರಾಜಾಂಗಣ ಸಭಾಂಗಣದಲ್ಲಿ ಕರಾವಳಿ ಕರ್ನಾಟಕ ಐದನೇ ಕಚುಸಾಪ ಸಮ್ಮೇಳನದಲ್ಲಿ ಹಿರಿಯ ಉದ್ಯಮಿ ವಿಶ್ವನಾಥ ಶೆಣೈ ಅವರು ಪ್ರಶಸ್ತಿ ಪ್ರದಾನ ಮಾಡುವರು.

    ಮಧ್ಯಾಹ್ನ 12ಕ್ಕೆ ಪರ್ಯಾಯ ಪುತ್ತಿಗೆಮಠದ ಸಹಕಾರದಿಂದೊಂದಿಗೆ “ಶ್ರೀಮದ್ ಭಗವದ್ಗೀತೆ ಒಂದು ವಿಶ್ಲೇಷಣೆ’ ವಿಚಾರಗೋಷ್ಟಿ ನಡೆಯಲಿದ್ದು, ಮೈಸೂರಿನ ಎನ್.ವಿ. ರಮೇಶ ಅಧ್ಯಕ್ಷತೆ ವಹಿಸುವರು.

    ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ದಿಕ್ಸೂಚಿ ಭಾಷಣ, ವಿದ್ವಾನ್ ರಘುಪತಿ ಭಟ್, ಡಾ. ಜಿ.ವಿ. ಹೆಗಡೆ ಹಾಗೂ ಗಣಪತಿ ಭಟ್ಟ ವರ್ಗಾಸರ ಉಪನ್ಯಾಸ ನೀಡುವರು, ಕೃಷ್ಣನಗುಂಗು ಕವಿಗೋಷ್ಠಿ ನಂತರ ಕಾಸರಗೋಡು ಡಾ. ವಾಣಿಶ್ರೀ, ಗುರುರಾಜ ಕಲಾ ತಂಡದಿಂದ ಶ್ರೀಕೃಷ್ಣ ನೃತ್ಯ ವೈಭವ ಜರುಗಲಿದೆ ಎಂದು ಶ್ರೀಮಠದ ರಮೇಶ ಭಟ್ಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts