More

    ಯುಎಇ ಪ್ರವಾಸ ಮುಗಿಸಿ ಭಾರತಕ್ಕೆ ಪ್ರಧಾನಿ ಮೋದಿ; ​ಉಭಯ ದೇಶಗಳ ನಡುವಿನ ವ್ಯಾಪಾರ ದ್ವಿಗುಣ

    ಯುಎಇ: ಫ್ರಾನ್ಸ್​ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಗಲ್ಫ್​ ರಾಷ್ಟ್ರವಾದ ಯುನೈಟೆಡ್​ ಅರಬ್​ ಎಮಿರೇಟ್ಸ್​(UAE) ರಾಜಧಾನಿ ಅಬುದಾಬಿಗೆ ಆಗಮಿಸಿದ್ದು, ಅಧ್ಯಕ್ಷ ಶೇಖ್​ ಮೊಹಮ್ಮದ್​ ಬಿನ್​ ಜಾಯೆದ್​ ಅಲ್​ ನಹ್ಯಾನ್​ ಜೊತೆಗೆ ಉಭಯ ದೇಶಗಳ ಕುರಿತಾಗಿ ದ್ವಿಪಕ್ಷೀಯ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ.

    ಕಳೆದ ವರ್ಷ ಭಾರತ ಹಾಗೂ ಯುಎಇ ನಡುವೆ ಮಾಡಿಕೊಳ್ಳಲಾಗಿದ್ದ ಆರ್ಥಿಕ ಒಪ್ಪಂದದಿಂದಾಗಿ ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟು ಶೇ 20ರಷ್ಟು ವೃದ್ಧಿಸಿದ್ದು, ಈ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

    ಇದನ್ನೂ ಓದಿ: VIDEO| ಕೇಕ್​ ತಿನ್ನಿಸುವಾಗ ನಟ ಯೋಗಿ ಬಾಬುರನ್ನು ಕಿಚಾಯಿಸಿದ ಧೋನಿ

    ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ನಮ್ಮ ಗ್ರಹವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಹಲವಾರು ವಿಚಾರಗಳಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದ ಶೇಖ್​ ಮೊಹಮ್ಮದ್​ ಬಿನ್​ ಜಾಯೆದ್​ ಅಲ್​ ನಹ್ಯಾನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಎರಡು ರಾಷ್ಟ್ರಗಳ ಕರೆನ್ಸಿಗಳು ಸದೃಢ ಆರ್ಥಿಕತೆ ವೃದ್ಧಿಗೆ ಪೂರಕವಾಗಿದ್ದು, ನಮ್ಮ ನಡುವೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಸಹಕಾರ ಮತ್ತು ನೆರವಿಗೆ ಈ ಪ್ರವಾಸ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts