More

    ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

    ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಇಂದು (ಏಪ್ರಿಲ್​ 25) ಚಾಲನೆ ನೀಡಿದರು.

    ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ವಂದೇ ಭಾರತ್​ ಎಕ್ಸ್​ಪ್ರೆಸ್ ರೈಲು​ ತಿರುವನಂತಪುರ ಕೇಂದ್ರ ಮತ್ತು ಕಾಸರಗೋಡು ನಡುವೆ ಸಂಚರಿಸಲಿದೆ.

    ಇದನ್ನೂ ಓದಿ: ನಾಳೆ ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್‌ ರೋಡ್‌ ಶೋ; ಒಕ್ಕಲಿಗರ ಮತಬೇಟೆಗೆ ಮುಂದಾದ ಬಿಜೆಪಿ!

    ಚಾಲನೆಗೂ ಮುನ್ನ ತಂಪನೂರ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ನಿಲ್ಲಿಸಲಾದ ರೈಲಿನ C 2 ಕೋಚ್‌ನಲ್ಲಿ 42 ಆಯ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಸಂವಾದ ನಡೆಸಿದ ಬಳಿಕ ಪ್ರಧಾನಿ ಮೋದಿ ರೈಲಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ರೈಲಿನಲ್ಲಿ ಮೋದಿಗೆ ಸಾಥ್​ ನೀಡಿದರು.

    ಇದೇ ಸಂದರ್ಭದಲ್ಲಿ ಲೊಕೊ ಪೈಲಟ್‌ಗಳ ಜತೆಯೂ ಮೋದಿ ಮಾತನಾಡಿದರು. ಮೊದಲ ಪಯಣದಲ್ಲಿ ಧಾರ್ಮಿಕ, ಸಾಮಾಜಿಕ-ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದರು. 1000 ವಿದ್ಯಾರ್ಥಿಗಳು ವಿವಿಧ ನಿಲ್ದಾಣಗಳಿಂದ ಉಚಿತ ಪ್ರಯಾಣ ಅನುಭವಿಸಿದರು. (ಏಜೆನ್ಸೀಸ್​)

    ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ: ಮಹಿಳೆ ಮೇಲೆ ಹಲ್ಲೆ ಮಾಡಿ ಬೇಕರಿ ತಿನಿಸು ಬಿಸಾಡಿದ ಪುಡಿರೌಡಿಗಳು

    ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!

    ಪ್ರಿಯತಮೆ ಮೇಲೆ ಕುದಿಯುವ ಎಣ್ಣೆ ಸುರಿದ ಗೆಳೆಯ; ಪ್ರಿಯಕರನಿಗಾಗಿ ಹುಡುಕಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts