More

    ನವೆಂಬರ್​ವರೆಗೂ ಬಡವರಿಗೆ ಉಚಿತ ಪಡಿತರ ವಿತರಣೆ: ಪ್ರಧಾನಿ ಮೋದಿ ಘೋಷಣೆ

    ನವದೆಹಲಿ: ಮತ್ತೊಮ್ಮೆ ಲಾಕ್​ಡೌನ್​ ಮುಂದುವರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈಗಾಗಲೇ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಬಡ ಜನರಿಗೆ ಮುಂದಿನ ದೀಪಾವಳಿವರೆಗೂ ಉಚಿತ ಪಡಿತರ ವಿತರಣೆ ಮಾಡುವುದಾಗಿ ಭರವಸೆ ನೀಡಿದರು.

    ಮಂಗಳವಾರ ಸಂಜೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನವೆಂಬರ್​ ಅಂತ್ಯದವರೆಗೂ ಉಚಿತವಾಗಿ ಪಡಿತರ ನೀಡಲಾಗುವುದು. ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಮಾಡಲಾಗುವುದು. ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಅಥವಾ ಗೋಧಿ ನೀಡಲಾಗುವುದು. ಇದರೊಂದಿಗೆ ಒಂದು ಕುಟುಂಬಕ್ಕೆ 1 ಕೆಜಿ ಬೇಳೆಕಾಳು ವಿತರಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಕಾಗೆಗಳ ತಂಟೆಗೆ ಹೋಗಬೇಡಿ..ಅದನ್ನು ಹಿಡಿದು ಹಿಂಸಿಸುವ ಮುನ್ನ ಈ ಸ್ಟೋರಿ ಓದಿ…

    ಸರ್ಕಾರವು ಬಡ ಜನರಿಗೆ ಉಚಿತವಾಗಿ ಆಹಾರ ನೀಡಲು ಇಂದು ಸಫಲವಾಗಿದ್ದರೆ ಅದರ ಕೀರ್ತಿ ಇಬ್ಬರಿಗೆ ಮಾತ್ರ ಸಲ್ಲುತ್ತದೆ. ಒಂದು ದೇಶದ ಕಷ್ಟಪಟ್ಟು ದುಡಿಯುತ್ತಿರುವ ರೈತರು, ಮತ್ತೊಂದು ಪ್ರಮಾಣಿಕ ತೆರಿಗೆ ಪಾವತಿದಾರರು. ಇವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದರು.

    ಪ್ರಧಾನಿ ಗರೀಬ್​ ಕಲ್ಯಾಣ ಯೋಜನೆಯಡಿಯಲ್ಲಿ 1.75 ಲಕ್ಷ ಕೋಟಿ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ 31 ಸಾವಿರ ಕೋಟಿ ರೂ. ಅನ್ನು ಸುಮಾರು 20 ಕೋಟಿ ಬಡ ಕುಟುಂಬಗಳ ಖಾತೆಗೆ ಜಮೆ ಮಾಡಲಾಗಿದೆ. ಅಲ್ಲದೆ, 18 ಸಾವಿರ ಕೋಟಿ ರೂ. ಅನ್ನು 9 ಸಾವಿರಕ್ಕೂ ಹೆಚ್ಚು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್​)

    ಇದನ್ನೂ ಓದಿ: ಟಾಂಗಾ ಓಡಿಸುವವರ ಬದುಕಿಗಿಲ್ಲ ಆಧಾರ, ಸಂಕಷ್ಟದ ಸ್ಥಿತಿಯಲ್ಲಿ ಜಟಕಾ ಬಂಡಿ ನಡೆಸುವವರ ಜೀವನ

    ರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಜಾರಿ ಮಾಡಲ್ಲ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts