More

    ಪ್ರಧಾನಿ ಮೋದಿ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿಲ್ಲ: ಟ್ಯೂಬ್​ಲೈಟ್​ ಟೀಕೆಗೆ ರಾಹುಲ್​ ತಿರುಗೇಟು

    ನವದೆಹಲಿ: ಗುರುವಾರ ಸಂಸತ್ತಿನಲ್ಲಿ ನಡೆದ ಕಲಾಪದ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಟ್ಯೂಬ್​ಲೈಟ್​ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ತಿರುಗೇಟು ನೀಡಿದ ರಾಹುಲ್​, ಪ್ರಧಾನಿ ಮೋದಿ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿಲ್ಲ ಎಂದರು.

    ಸಾಮಾನ್ಯವಾಗಿ ಓರ್ವ ಪ್ರಧಾನ ಮಂತ್ರಿಗೆ ಒಂದು ನಿರ್ಧಿಷ್ಟ ಸ್ಥಾನಮಾನ, ಒಂದು ನಿರ್ಧಿಷ್ಟ ಪ್ರಕಾರದ ವರ್ತನೆ ಹಾಗೂ ನಿರ್ಧಿಷ್ಟವಾದ ಸ್ಥಾನಮಾನ ಇರುತ್ತದೆ. ಆದರೆ, ನಮ್ಮ ಪ್ರಧಾನಿ ಇದ್ಯಾವುದನ್ನು ಹೊಂದಿಲ್ಲ. ಪ್ರಧಾನಿ ಮಾದರಿಯಲ್ಲಿ ಅವರು ವರ್ತಿಸುತ್ತಿಲ್ಲ ಎಂದು ಸಂಸತ್ತಿನ ಹೊರಗಡೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಇದಕ್ಕೂ ಮುನ್ನ ಗುರುವಾರ ಮಾತನಾಡಿದ್ದ ರಾಹುಲ್​, ಯಾವುದೇ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಉದ್ಯೋಗ ಬಿಕ್ಕಟ್ಟು ಮತ್ತು ಆರ್ಥಿಕತೆ ಮೇಲುತ್ತುವಲ್ಲಿ ವಿಫಲವಾಗಿರುವ ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

    ದೆಹಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, ಉದ್ಯೋಗ ಕೊರತೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯುವಕರು ಪ್ರಧಾನಿ ಮೋದಿ ಅವರಿಗೆ ದಂಡದಲ್ಲಿ ಥಳಿಸಿ, ದೇಶದಿಂದ ಹೊರಗೆ ಹಾಕಲಿದ್ದಾರೆ ಎಂದಿದ್ದರು. ಈ ಕುರಿತು ಗುರುವಾರ ರಾಷ್ಟ್ರಪತಿ ಭಾಷಣ ಮೇಲಿನ ಚರ್ಚಾವೇಳೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಹೊಡೆತ ತಿನ್ನುವುದಕ್ಕೆ ಶರೀರವನ್ನು ಹುರಿಗೊಳಿಸಲು ದಿನವೂ ಇನ್ನು ಸೂರ್ಯನಮಸ್ಕಾರದ ಪ್ರಮಾಣ ಹೆಚ್ಚಿಸುವುದಾಗಿ ಹೇಳಿ ತಿರುಗೇಟು ನೀಡಿದ್ದರು.

    ಬಳಿಕ ರಾಹುಲ್​ ಗಾಂಧಿಗೆ ತಡವಾಗಿ ಏನೋ ಹೇಳಲು ಪ್ರಯತ್ನಿಸಿದಾಗ, ನಾನು 30ರಿಂದ 40 ನಿಮಿಷಗಳ ಕಾಲ ಮಾತನಾಡುತ್ತೇನೆ. ಆದರೆ ಅದು ತಲುಪಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇಂತಹ ಅನೇಕ ಟ್ಯೂಬ್​ಲೈಟ್​ಗಳಿವೆ ರಾಹುಲ್​ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts